ಕರ್ನಾಟಕದಲ್ಲಿ 2015ರಲ್ಲಿ 10,112 ಮಹಿಳೆಯರು ನಾಪತ್ತೆ!

ಬೆಂಗಳೂರು, ಜುಲೈ 21 : ಕರ್ನಾಟಕದಲ್ಲಿ ಒಂದೂವರೆ ವರ್ಷದಲ್ಲಿ 10,112 ಮಹಿಳೆಯರು ನಾಪತ್ತೆಯಾಗಿದ್ದಾರೆ. 2014ರಲ್ಲಿ 6,993 ಮಹಿಳೆಯರ ನಾಪತ್ತೆ ಮತ್ತು ಅಪಹರಣ ಪ್ರಕರಣದ ದಾಖಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಮಂಗಳವಾರ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಕೇಳಿದ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಿದ ಸಚಿವರು, ರಾಜ್ಯದ 9 ಜಿಲ್ಲೆಗಳಲ್ಲಿ ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಸೆಲ್ ಹಾಗೂ ಆಪರೇಷನ್ ಸ್ಮೈಲ್, ಆಪರೇಷನ್ ಮುಸ್ಕಾನ್ ಕಾರ್ಯಕ್ರಮವನ್ನು ಜಾರಿಗೆ ತಂದು ನಾಪತ್ತೆಯಾದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಉತ್ತರ ನೀಡಿದರು. [ಮಂಗಳವಾರದ ಕಲಾಪದ ಮುಖ್ಯಾಂಶಗಳು]

vidhana soudha

ಸಚಿವರು ನೀಡಿದ ಅಂಕಿ-ಅಂಶಗಳು : 2014ರಲ್ಲಿ 6,993 ಮಹಿಳೆಯರ ನಾಪತ್ತೆ ಮತ್ತು ಅಪಹರಣ ಪ್ರಕರಣಗಳು ದಾಖಲಾಗಿವೆ. 2,970 ಮಕ್ಕಳ ಅಪಹರಣ ಮತ್ತು ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 8,567 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 43 ಮಂದಿ ಮೃತ ಪಟ್ಟಿದ್ದಾರೆ. [30 ಸಾವಿರಕ್ಕೆ ಹೆಂಡತಿಯನ್ನೇ ಮಾರಿದ್ದ ಪತಿರಾಯ]

ಮಹಿಳೆ ಮತ್ತು ಮಕ್ಕಳ ಅಪಹರಣ, ನಾಪತ್ತೆ ಪ್ರಕರಣದ ಹಿಂದೆ ದೊಡ್ಡ ಜಾಲವಿದೆ ಎಂದು ಆರೋಪಿಸಿದ ಸಿಟಿ ರವಿ ಅವರು, ಮೃತಪಟ್ಟವರ ಸಾವು ಹೇಗೆ ಸಂಭವಿಸಿದೆ? ಇದು ಕೊಲೆಯೋ, ಅಪಘಾತವೋ ಎಂದು ಪ್ರಶ್ನಿಸಿದರು. ಕೊಲೆಯಾಗಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಾಗಿರುತ್ತದೆ ಎಂದು ಸಚಿವರು ಹೇಳಿದರು.

2015ರಲ್ಲಿ 3,119 ಮಹಿಳೆಯರ ನಾಪತ್ತೆ ಮತ್ತು ಅಪಹರಣ ಪ್ರಕರಣ, 1,279 ಮಕ್ಕಳ ಅಪಹರಣ ಮತ್ತು ನಾಪತ್ತೆ ಪ್ರಕರಣ ದಾಖಲಾಗಿದ್ದು, ಇದರಲ್ಲಿ 2,716 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 28 ಮಂದಿ ಮೃತಪಟ್ಟಿದ್ದಾರೆ ಎಂದು ಜಾರ್ಜ್ ಸದನಕ್ಕೆ ವಿವರಣೆ ನೀಡಿದರು.

ಅಂದಹಾಗೆ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ(ಎನ್‌ಸಿಆರ್‌ಬಿ)ದೇಶದಲ್ಲಿ ಕಾಣೆಯಾಗುವ ವ್ಯಕ್ತಿಗಳ ಚಿತ್ರಗಳನ್ನು ಒಳಗೊಂಡ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುತ್ತದೆ. ಆಗಾಗ ವರದಿಗಳನ್ನು ಬಿಡುಗಡೆ ಮಾಡಿ ಯಾವ ರಾಜ್ಯದಲ್ಲಿ ಎಷ್ಟು ಜನ ಕಾಣೆಯಾಗಿದ್ದಾರೆ. ದೇಶದಲ್ಲಿನ ಎಲ್ಲಾ ರಾಜ್ಯಗಳ ಅಪರಾಧ ಪ್ರಕರಣಗಳ ಬಗ್ಗೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುತ್ತದೆ. [ವೆಬ್ ಸೈಟ್ ವಿಳಾಸ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+