ಸರ್ಕಾರಕ್ಕೆ 100 ದಿನ; ಯಡಿಯೂರಪ್ಪ ಹೇಳಿದ ಸಾಧನೆಗಳು

ಬೆಂಗಳೂರು, ನವೆಂಬರ್ 05 : ಕರ್ನಾಟಕದ ಬಿಜೆಪಿ ಸರ್ಕಾರ 100 ದಿನಗಳನ್ನು ಪೂರೈಸಿದೆ. 'ದಿನ ನೂರು ಸಾಧನೆ ನೂರಾರು' ಎಂಬ ಸರ್ಕಾರದ ಸಾಧನೆಗಳ ಪುಸ್ತಕವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದರು.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಪುಸ್ತಕ ಬಿಡುಗಡೆ ಮಾಡಿ ಸರ್ಕಾರದ ಸಾಧನೆಗಳ ಪಟ್ಟಿಯನ್ನು ನೀಡಿದರು. ಸರ್ಕಾರದ ಸಚಿವರು, ಪಕ್ಷದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.

ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ, ಸಚಿವರಾದ ಕೆ. ಎಸ್. ಈಶ್ವರಪ್ಪ, ಮಾಧುಸ್ವಾಮಿ, ಆರ್. ಅಶೋಕ, ಪ್ರಭು ಚೌವ್ಹಾಣ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪುಸ್ತಕ ಬಿಡುಗಡೆ ಬಳಿಕ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿದರು.

"ನವೆಂಬರ್ 2ಕ್ಕೆ ಸರ್ಕಾರ ನೂರು ದಿನ ಪೂರೈಸಿದೆ. ಸರ್ಕಾರ ಅನೇಕ ಸಾಧನೆಗಳನ್ನು ಮಾಡಿದೆ. ಅನೇಕ ಸವಾಲುಗಳನ್ನು ಮೆಟ್ಟಿ ನಿಂತಿದೆ. ರಾಜ್ಯದ ಹಣಕಾಸಿನ ಸ್ಥಿತಿ ಉತ್ತಮವಾಗಿದೆ" ಎಂದು ಯಡಿಯೂರಪ್ಪ ಹೇಳಿದರು.

ನರೇಂದ್ರ ಮೋದಿಗೆ ಧನ್ಯವಾದ

ನರೇಂದ್ರ ಮೋದಿಗೆ ಧನ್ಯವಾದ

ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ "ಆರ್‌ಸಿಇಪಿಗೆ ಸಹಿ ಹಾಕದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದಗಳು. ಮೋದಿಗೆ ದೇಶದ ಜನರ ಬಗ್ಗೆ ಇರುವ ಕಳಕಳಿ ಇದರಿಂದ ಗೊತ್ತಾಗುತ್ತದೆ. ಮೋದಿ ರೈತರ ಹಿತ ಬಲಿಕೊಡುವುದಿಲ್ಲ ಎಂದು ನಂಬಿದ್ದೆ. ಅದೇ ರೀತಿ ದಿಟ್ಟತನ ಮೆರೆದಿದ್ದಾರೆ" ಎಂದು ಹೇಳಿದರು.

ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ

ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ

"ತುಮಕೂರು ಜಿಲ್ಲೆಯಲ್ಲಿ 60 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಎಸ್ಸಿ, ಎಸ್ಟಿ, ಓಬಿಸಿ, ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಸಿದ್ದಗಂಗಾ ಶ್ರೀ, ಬಾಲಗಂಗಾದರನಾಥ ಸ್ವಾಮೀಜಿ ಹೆಸರಲ್ಲಿ ತಲಾ 25 ಕೋಟಿ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಪ್ರವಾಹಪೀಡಿತ ಗ್ರಾಮೀಣ ಜನರ ವಲಸೆ ತಡೆಯಲು 50 ಹೊಸ ಉದ್ಯೋಗ ಕೇಂದ್ರ ಸ್ಥಾಪಿಸಲಾಗುತ್ತದೆ" ಎಂದರು.

100 ದಿನದಲ್ಲಿ ಬೆಂಗಳೂರಿನ ಚಿತ್ರಣ ಬದಲು

100 ದಿನದಲ್ಲಿ ಬೆಂಗಳೂರಿನ ಚಿತ್ರಣ ಬದಲು

"ಬೆಂಗಳೂರು ನಗರದಲ್ಲಿ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ. ಇನ್ನು 100 ದಿನಗಳಲ್ಲಿ ಬೆಂಗಳೂರಿನ ಚಿತ್ರಣವನ್ನೇ ಬದಲಿಸುತ್ತೇವೆ. ನಮ್ಮ ಸರ್ಕಾರ ಬಂದ ಮೇಲೆ ರೈತ ಸಮುದಾಯಕ್ಕೆ ಬಹಳ ದೊಡ್ಡ ನೆರವು ನೀಡಲಾಗಿದೆ" ಎಂದು ಯಡಿಯೂರಪ್ಪ ಹೇಳಿದರು.

ಅಭಿವೃದ್ಧಿಯೇ ಮಂತ್ರ

ಅಭಿವೃದ್ಧಿಯೇ ಮಂತ್ರ

"ಅಭಿವೃದ್ಧಿಯೇ ನಮ್ಮ ಆಡಳಿತ ಮಂತ್ರ. ನಮ್ಮ ಸರ್ಕಾರ ರೈತ ಪರ ಸರ್ಕಾರ. 25 ಲಕ್ಷ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯ ಮೊದಲ ಕಂತಿನ ಹಣ ಹಾಕಿದ್ದೇವೆ. ಅತಿವೃಷ್ಟಿಗೆ ತುತ್ತಾದ ಜನರ ನೆರವಿಗೆ ಧಾವಿಸಿದ್ದೇವೆ. ಹಗಲು ರಾತ್ರಿ ವಿಶೇಷ ಶ್ರಮ ಹಾಕಿ ಕೆಲಸ ಮಾಡಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+