ಆಪರೇಷನ್ ಕಮಲ; ಬಿಜೆಪಿಯಿಂದ 100 ಕೋಟಿ ರೂ.ಆಫರ್ ನೀಡಿದ್ದು ನಿಜಾನಾ : ರೇಣುಕಾಚಾರ್ಯ ಹೇಳಿದ್ದೇನು?
ದಾವಣಗೆರೆ, ಆಗಸ್ಟ್ 27: ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿಯಿಂದ 100 ಕೋಟಿ ರು. ಆಫರ್ ಯಾರಾದರೂ ನೀಡಿದ್ದರೆ, ಅದು ಯಾರೆಂಬುದನ್ನು ಬಹಿರಂಗಪಡಿಸಿ. ನಿಮಗೆ ತಾಕತ್ತಿದ್ದರೆ 100 ಕೋಟಿ ರು.ಗಳ ಆಫರ್ ಬಗ್ಗೆ ತನಿಖೆ ಮಾಡಿಸಿ ಎಂದು ಹೊನ್ನಾಳಿಯ ಮಾಜಿ ಸಚಿವ ಎಂ.ಪಿ.ರೇಣುಕಾರ್ಯಚಾರ್ಯ ಮಂಡ್ಯ ಶಾಸಕ ಪಿ.ರವಿಕುಮಾರ(ಗಣಿಗ ರವಿ)ಗೆ ಸವಾಲು ಹಾಕಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು ಮಾತನಾಡಿ, ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿಯವರಿಗೆ ತಾಕತ್ ಇದ್ದರೆ 100 ಕೋಟಿ ರು. ಆಫರ್ ಮಾಡಿದ್ದು ಯಾರೆಂಬ ಬಗ್ಗೆ ತನಿಖೆ ಮಾಡಿಸಲಿ ನಿಮಗೆ ಆಫರ್ ಮಾಡಿದ್ದು ಯಾರೆಂಬುದನ್ನು ಬಹಿರಂಗಪಡಿಸಿ ಎಂದು ಕಿಡಿಕಾರಿದರು.

ನಿಮ್ಮವರೇ ಮುಖ್ಯಮಂತ್ರಿ, ಗೃಹ ಮಂತ್ರಿಗಳಿದ್ದಾರೆ. ತನಿಖೆ ಮಾಡಿಸಿ, ಬೇಕಾದರೆ ಇಡಿ, ಸಿಬಿಐ ತನಿಖೆಗಾದರೂ ಒಪ್ಪಿಸಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಆಫರ್ ನೀಡಿದ್ದು ಯಾರೆಂಬುದನ್ನು ಗಣಿಗ ರವಿಯವರು ಬಹಿರಂಗಪಡಿಸಲಿ. ಯಾವುದೇ ಇಲಾಖೆ, ತನಿಖಾ ಸಂಸ್ಥೆಯಿಂದಲಾದರೂ ಈ ಬಗ್ಗೆ ತನಿಖೆ ಮಾಡಿಸಲಿ ಎಂದು ಅವರು ಹೇಳಿದರು.
ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಷಿ ಸೇರಿದಂತೆ ಬಿಜೆಪಿ ಮುಖಂಡರು ಇದ್ದಾರೆಂದು ಹೇಳುವ ನೀವು ಗಾಳಿಯಲ್ಲಿ ಗುಂಡು ಹೊಡೆಯಬೇಡಿ. ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಟ್ಟು, ನಿಷ್ಪಕ್ಷಪಾತವಾಗಿ ತನಿಖೆಗೆ ಕ್ರಮ ಕೈಗೊಳ್ಳಿ. ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆಯ ನಂತರ ರವಿ ಗಣಿಗ ಅವರಿಗೆ ಸೂಚನೆ ಬಂದಿದೆ. ಹಾಗಾಗಿ ಬಿಜೆಪಿ ಮೇಲೆ ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಮುಚ್ಚಿ ಹಾಕುವುದು, ನಾಡಿನ ಜನರ ಗಮನ ಬೇರೆಡೆಗೆ ಸೆಳೆಯಲು 100 ಕೋಟಿ ರು.ಗಳ ಆಫರ್ ಬಗ್ಗೆ ಮಾತನಾಡುತ್ತಿದ್ದಾರಷ್ಟೇ. ಒಂದೂವರೆ ವರ್ಷದ ಹಿಂದೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಆಗಿನಿಂದಲೂ ಬ್ರಹ್ಮಾಂಡ ಭ್ರಷ್ಟಾಚಾರ ಎಸಗುತ್ತಿದೆ. ಜನಾದೇಶವು ಕಾಂಗ್ರೆಸ್ ಪರವಿದ್ದು, ಉತ್ತಮವಾಗಿ 5 ವರ್ಷ ಆಳಲಿ ಅಂತಾ ಜನತೆ ಸಹ ಆಶೀರ್ವದಿಸಿದ್ದಾರೆ. ಆದರೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ ನೇತೃತ್ವದ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ ಎಂದು ರೇಣುಕಾಚಾರ್ಯ ಅವರು ಆರೋಪಿಸಿದರು.
ಮೈಸೂರಿನ ಮೂಡಾ ಹಗರಣ, ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣಗಳೇ ಸಾಕ್ಷಿ. ಮೂಡಾದಲ್ಲಿ ಸುಮಾರು 4 ಸಾವಿರ ಕೋಟಿ ಹಗರಣ ನಡೆದಿದೆ. ವಾಲ್ಮೀಕಿ ನಿಗಮದಲ್ಲಿ 184 ಕೋಟಿ ಭ್ರಷ್ಟಾಚಾರವಾಗಿದ್ದು, ಸ್ವತಃ ಸಿಎಂ ಸಿದ್ದರಾಮಯ್ಯ ಸದನದಲ್ಲಿ 87 ಕೋಟಿ ಭ್ರಷ್ಟಾಚಾರ ಎಂಬುದನ್ನು ಒಪ್ಪಿಕೊಂಡಿದ್ದಾರೆ. ನಮ್ಮದು ಭ್ರಷ್ಟಾಚಾರದ ವಿರುದ್ಧ ಹೋರಾಟವೇ ಹೊರತು, ಸಿದ್ದರಾಮಯ್ಯ, ಶ್ರೀಮತಿ ಸಿದ್ದರಾಮಯ್ಯ ವಿರುದ್ಧದ ಹೋರಾಟಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದುವರೆಗೂ ನಾಗೇಂದ್ರ, ದದ್ದಲ್ ಮೇಲೆ ಎಫ್‌ಐಆರ್ ದಾಖಲಿಸಿಲ್ಲ. ಯಾದಗಿರಿ ಪಿಎ ಆತ್ಮಹತ್ಯೆಗೆ ಅಲ್ಲಿನ ಶಾಸಕ ಮತ್ತು ಪುತ್ರನ ಕಿರುಕಳವೇ ಕಾರಣವಾಗಿದೆ. ಇದುವರೆಗೂ ಶಾಸಕ ಮತ್ತು ಪುತ್ರನ ಬಂಧನವಾಗಿಲ್ಲ. ಬ್ರಹ್ಮಾಂಡ ಭ್ರಷ್ಟಾಚಾರದ ಸರ್ಕಾರದ ಇದು. ಮತ್ತೊಂದು ಕಡೆ ಅಭಿವೃದ್ಧಿಯಾಗಿಲ್ಲ. ಬೆಳೆ ಪರಿಹಾರ, ಮನೆ ಹಾನಿ ಪರಿಹಾರ ನೀಡಿಲ್ಲ. ಒಂದು ರಸ್ತೆ ಮಾಡಿಲ್ಲ. ಗುಂಡಿ ಬಿದ್ದ ರಸ್ತೆ ಸರಿಪಡಿಸಿಲ್ಲ.
ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಿಜೆಪಿ ಪಾದಯಾತ್ರೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇ ಹೊರತು, ಯಾವುದೇ ವ್ಯಕ್ತಿಪರವಗಾಲಿಲ್ಲ ಎಂದು ಅವರು ಒಂದೂವರೆ ವರ್ಷವಾದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಸ್ನೇಹಿತ ಗಣಿಗ ರವಿ ಹಿಂದೆ 50 ಕೋಟಿ ಆಫರ್ ಬಂದಿತ್ತೆದರಿದ್ದರು. ಈ ಸರ್ಕಾರ ಒಂದೂವರೆ ವರ್ಷ ಆದ್ರು ಟೇಕಪ್ ಆಗಿಲ್ಲ. ಮೂಡಾ ಹಗರಣ, ವಾಲ್ಮಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಯಾಗಬೇಕು. 100 ಕೋಟಿ ಆಫರ್ ನೀಡಿದ್ದರೆ ಬಚ್ಚಿ ಇಟ್ಟುಕಂಡು ಏನು ಮಾಡುತ್ತೀಯಪ್ಪಾ? ಸುಳ್ಳು ಹೇಳಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಬೇಡ ಗಣಿಗ ರವಿಕುಮಾರ ಎಂದು ರೇಣುಕಾಚಾರ್ಯ ಕಿವಿಮಾತು ಹೇಳಿದರು.












Click it and Unblock the Notifications