100 ಸಿಸಿ ಬೈಕ್‌ಗಳ ನೋಂದಣಿ ಮತ್ತೆ ಆರಂಭ
ಬೆಂಗಳೂರು, ನವೆಂಬರ್ 9 : ಹಿಂಬಂದಿ ಸೀಟು ಹೊಂದಿರುವ 100 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳ ನೋಂದಣಿ ಮುಂದುವರೆಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ಸರ್ಕಾರ ಬೈಕ್‌ಗಳ ನೋಂದಣಿಗೆ ಕೆಲವು ದಿನಗಳ ಹಿಂದೆ ತಡೆ ನೀಡಿತ್ತು.
ಸಾರಿಗೆ ಇಲಾಖೆ ಆಯುಕ್ತರು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಬೈಕ್‌ಗಳ ನೋಂದಣಿ ಮುಂದುವರೆಸುವಂತೆ ಸೂಚನೆ ನೀಡಿದ್ದಾರೆ. ಬೈಕ್‌ಗಳ ನೋಂದಣಿಗೆ ಸರ್ಕಾರ ವಿಧಿಸಿದ್ದ ನಿಷೇಧಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಕರ್ನಾಟಕ ಸರ್ಕಾರ ಅಕ್ಟೋಬರ್ 23ರಂದು 100 ಸಿ.ಸಿ.ಬೈಕ್‌ಗಳ ನೋಂದಣಿಗೆ ತಡೆಯಾಜ್ಞೆ ನೀಡಿತ್ತು. ಕರ್ನಾಟಕ ಹೈಕೋರ್ಟ್ 2015ರ ಆದೇಶದ ಅನ್ವಯ ನೋಂದಣಿ ಮಾಡಬಾರದು ಎಂದು ಹೇಳಿತ್ತು.
ಹಿರೋ ಮೋಟೋಕಾರ್ಪ್ ಲಿ., ಟಿವಿಎಸ್ ಮೋಟಾರ್ ಕಾರ್ಪೊರೇಷನ್ ಲಿ. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಪೀಠ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನೋಂದಣಿ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಇಂದಿನಿಂದಲೇ ಪುನಃ ನೋಂದಣಿ ಆರಂಭವಾಗಲಿದೆ.











Click it and Unblock the Notifications