ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ 10 ರಿಂದ 12 ಜನ ಶಾಸಕರು ಬಿಜೆಪಿ ಸಂಪರ್ಕದಲ್ಲಿ, ಆಪರೇಷನ್ ಸುಳಿವು ಕೊಟ್ಟ ಆರ್.ಅಶೋಕ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 8: ರಾಜ್ಯದಲ್ಲಿ 10 ರಿಂದ 12 ಜನ ಶಾಸಕರು ಬಿಜೆಪಿ ಸೇರಲಿದ್ದಾರೆ. ಕೆಲ ಶಾಸಕರು ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಈ ಕುರಿತು ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾಯಕತ್ವ ಇಲ್ಲದ ಕಾಂಗ್ರೆಸ್ ಜೊತೆಗ ಹೋದರೆ ಭವಿಷ್ಯ ವಿಲ್ಲ ಎಂದು ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಗೆ ರೆಡಿಯಾಗಿದ್ದಾರೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ತಿರ್ಮಾನ ಮಾಡಲಿದೆ ಎಂದರು.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ಗುಜರಾತ್ ಚುನಾವಣಾ ಫಲಿತಾಂಶ ನೋಡಿದರೇ, ಬಿಜೆಪಿ ಪರವಾಗಿ ಜನಬೆಂಬಲ ಇರೋದು ಗೊತ್ತಾಗ್ತಾ ಇದೆ. ಕರ್ನಾಟಕದ ಮುಂದಿನ ಚುನಾವಣೆಗೆ ಇದು ದಾರಿದೀಪವಾಗಲಿದೆ. ಕಾಂಗ್ರೆಸ್ ಅನ್ನು ಜನ ತಿರಸ್ಕಾರ ಮಾಡ್ತಾ ಇದಾರೆ, ಕಾಂಗ್ರೆಸ್ ಗೆ ಈ ದೇಶದಲ್ಲಿ ಭವಿಷ್ಯ ಇಲ್ಲ. ಕಾಂಗ್ರೆಸ್ ಸೋಲಿಸಲು ಆಮ್ ಆದ್ಮಿ ಸಾಕು ಅನ್ನೋ ಸಂದೇಶ ಸಿಗ್ತಾ ಇದೆ. ಆಮ್ ಆದ್ಮಿ ಕೇವಲ ನಾಲ್ಕರಿಂದ ಐದು ಪರ್ಸೆಂಟ್ ಮತಗಳನ್ನು ಕರ್ನಾಟಕದಲ್ಲಿ ಪಡೆದ್ರೂ ಸಾಕು ಕಾಂಗ್ರೆಸ್ ಧೂಳಿಪಟ ಗ್ಯಾರಂಟಿ, ಕಾಂಗ್ರೆಸ್ ಗಂಟು ಮೂಟೆ ಕಟ್ಟುವ ಸಮಯ ಬಂದಿದೆ ಎಂದರು.

10 To 12 Mla Are In Touch With bjp says R.ashok

ಎರಡು ಚುನಾವಣೆ ಕಾಂಗ್ರೆಸ್ ಬಾಗಿಲನ್ನು ಮುಚ್ಚಿದೆ ಎಂದ ಅವರು, ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಟಿಕೆಟ್ ಹಂಚಿಕೆ ಆಗುತ್ತಾ ಎಂಬ ಪ್ರಶ್ನೆಗೆ,‌ ಸರ್ವೇ ನೋಡಿ ಟಿಕೆಟ್ ಹಂಚಿಕೆ ಮಾಡಲಾಗುತ್ತೆ. ಯಾರು ಗೆಲ್ಲಲ್ಲ ಎಂಬುದನ್ನು ಕೇಂದ್ರ ನಾಯಕರು ಗಮನ ಹರಿಸುತ್ತಾರೆ. ಗೆಲುವಿಗೆ ಏನು ಸ್ಟ್ರಾಟಜಿ ಮಾಡಬೇಕು ಅದನ್ನು ಜನವರಿಯಿಂದ ಮಾಡಲಾಗುತ್ತದೆ ಎಂದರು.

ಗುಜರಾತ್ ಮಾದರಿ ಅಂತಲ್ಲ, ಕರ್ನಾಟಕ ಮಾಡೆಲ್ ನಲ್ಲಿ ಗೆಲ್ಲಲು ಕ್ರಮ ಕೈಗೊಳ್ಳಲಾಗುವುದು. ಎರಡನೇ ಸರ್ವೇ ವರದಿ ಆಧಾರದಲ್ಲಿ ಟಿಕೆಟ್ ಹಂಚಿಕೆ ಮಾಡಲು ನಿರ್ಧಾರ ಮಾಡುತ್ತಾರೆ ಎಂದರು.

ಗುಜರಾತ್ ಫಲಿತಾಂಶ ರಾಜ್ಯದಲ್ಲಿನ ಪರಿಣಾಮ ಬೀರಲ್ಲ ಎಂಬ ಕಾಂಗ್ರೆಸ್ ಅಭಿಪ್ರಾಯಕ್ಕೆ, ಕಾಂಗ್ರೆಸ್ ಟೋಪಿ ಹಾಕೋದರಲ್ಲಿ ಎಕ್ಸ್ ಪರ್ಟ್. ಸೋಲನ್ನು ಒಪ್ಪುವ ಮಾನಸಿಕ ಧೈರ್ಯವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಅವರ ರಾಷ್ಟ್ರೀಯ ಅಧ್ಯಕ್ಷರೇ ಗುಜರಾತ್ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿಲ್ಲ. ಕರ್ನಾಟಕ ಚುನಾವಣೆಯಲ್ಲೂ ಭಾಗಿಯಾಗ್ತಾರಾ ಗೊತ್ತಿಲ್ಲ . ಭಾರತ್ ಜೋಡೋ ಭಾರತ್ ಚೋಡೋ ಆಗಿದೆ ಎಂದರು.

English summary
10 To 12 Mla Are In Touch With bjp says R.ashok,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X