ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ಕೇಳಿದ 10 ಪ್ರಶ್ನೆಗಳು

|
Google Oneindia Kannada News

Recommended Video

ನರೇಂದ್ರ ಮೋದಿಯವರಿಗೆ ಕರ್ನಾಟಕ ಕಾಂಗ್ರೆಸ್ ಕೇಳಿದ 10 ಪ್ರಶ್ನೆಗಳು | Oneindia Kannada

ಬೆಂಗಳೂರು, ಫೆಬ್ರವರಿ 28: ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ರೋಚಕವಾಗುವ ಎಲ್ಲಾ ಸಾಧ್ಯತೆಗಳೂ ನಿಚ್ಛಳವಾಗುತ್ತಿವೆ. ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿರುವ ಅತೀ ದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ ಕೇಸರಿ ಹವಾ ಆರಂಭಿಸಲು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿ ಪ್ರಧಾನಿ ನರೇಂದ್ರ ಮೊದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ರಾಜ್ಯಕ್ಕೆ ಎಡತಾಕುತ್ತಲೇ ಇದ್ದಾರೆ!

ಆದರೆ ರಾಜ್ಯ ಕಾಂಗ್ರೆಸ್, ವಿಪಕ್ಷ ಬಿಜೆಪಿಯ ಕೇಂದ್ರ ನಾಯಕರನ್ನು ಕಾಲೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ಮೋದಿ ಸರ್ಕಾರದ ವೈಫಲ್ಯಗಳನ್ನು ಬೆರಳುಮಾಡಿ ತೋರಿಸಿ ಕರ್ನಾಟಕದ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದೆ. ನಿನ್ನೆ(ಫೆ.27) ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರ 75 ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ದಾವಣಗೆರೆಗೆ ಆಗಮಿಸಿ, ಸಮಾವೇಶವೊಂದನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ, 'ಕರ್ನಾಟಕದಲ್ಲಿ ಸೀದಾ ರೂಪಾಯಿ ಸರ್ಕಾರವಿದೆ. ಇಲ್ಲಿ ಎಲ್ಲ ಕೆಲಸಕ್ಕೂ ಹಣ ಪಡೆಯಲಾಗುತ್ತದೆ' ಎಂದು ಮೋದಿ ದೂರಿದ್ದರು.

ಮೋದಿಯದ್ದು 90% ಭ್ರಷ್ಟ ಸರ್ಕಾರ: ಸಿದ್ದರಾಮಯ್ಯ ಹೂಂಕಾರಮೋದಿಯದ್ದು 90% ಭ್ರಷ್ಟ ಸರ್ಕಾರ: ಸಿದ್ದರಾಮಯ್ಯ ಹೂಂಕಾರ

ನಂತರ ಮೋದಿಯವರ ಮಾತುಗಳಿಗೆ ಕೌಂಟರ್ ಎಂಬಂತೆ ಕರ್ನಾಟಕ ಕಾಂಗ್ರೆಸ್ ಸಾಲು ಸಾಲು ಟ್ವೀಟ್ ಮಾಡಿ, ಪ್ರಧಾನಿಯರಿಗೆ 10 ಪ್ರಶ್ನೆಗಳನ್ನು ಕೇಳಿದೆ. ಆ ಹತ್ತು ಪ್ರಶ್ನೆಗಳು ಇಲ್ಲಿವೆ...

ರೈತರಿಗೆ ಸಂಕಷ್ಟ ತಂದೊಡ್ಡಿದ್ದೇಕೆ?

ರೈತರಿಗೆ ಸಂಕಷ್ಟ ತಂದೊಡ್ಡಿದ್ದೇಕೆ?

ಮೋದೀಜಿ ನಿಮ್ಮ ದುರ್ಬಲ ನೀತಿಯಿಂದ 2013ರಲ್ಲಿ 15 ಬಿಲಿಯನ್ಡಾಲರ್ ಇದ್ದ ಆಹಅರೋತ್ಪನ್ನ ಆಮದು ಪ್ರಮಾಣ 2017ಕ್ಕೆ 25 ಬಿಲಿಯನ್ ಡಾಲರ್ ಗೆ ಏರಿತು. ಆದರೆ ಕೃಷಿ ಉತ್ಪನ್ನ ರಫ್ತು 43 ಬಿಲಿಯನ್ ಡಾಲರ್ ನಿಂದ 33 ಬಿಲಿಯನ್ ಡಾಲರ್ ಗೆ ಇಳಿಕೆ ಮಾಡಿ ರೈತರಿಗೆ ಸಂಕಷ್ಟ ತಂದೊಡ್ಡಿದ್ದೇಕೆ?

ಕಾಳಧನಿಕರ ಸಾಲಮನ್ನಾ ಮಾಡಿದ್ದೇಕೆ?

ಕಾಳಧನಿಕರ ಸಾಲಮನ್ನಾ ಮಾಡಿದ್ದೇಕೆ?

ಮೋದಿಜೀ ನಿಮ್ಮ ಬಿಜೆಪಿ ಅಧ್ಯಕ್ಶಶ ಅಮಿತ್ ಶಾ 26-02-2018 ರಂದು ಕರ್ನಾಟ ರೈತರ ಸಾಲ ಮನ್ನಾ ಕುರಿತು ಮಾತನಾಡಲು ನಿರಾಕರಿಸಿದರು. ಆದರೆ ಕೇವಲ ಕೇಮದ್ರ ಬಿಜೆಪಿಯ ಮೂರೂವರೆ ವರ್ಷಗಳ ಆಡಳಿತದಲ್ಲಿ ಕಾಳಧನಿಕರ 241 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ, ಏಕೆ?

ರೈತರಿಗೆ ದ್ರೋಹವೆಸಗಿದ್ದೇಕೆ?

ರೈತರಿಗೆ ದ್ರೋಹವೆಸಗಿದ್ದೇಕೆ?

ರೈತರ ಬೆಳೆಗೆ ಶೇ.50 ಕನಿಷ್ಠ ಬೆಂಬಲ ಬೆಲೆ ನೀಡುವ ಭರವಸೆ ನೀಡಿ, ಬೆಂಬಲ ಬೆಲೆಯಲ್ಲಿ ಕೇವಲ ಶೇ.5.19 ಹೆಚ್ಚಿಸಿ ಕೈಗಾರಿಕೋದ್ಯಮಿಗಳ ಪರವಾಗಿ ನಿಂತು ರೈತರಿಗೆ ದ್ರೋಹವೆಸಗಿದ್ದೇಕೆ?

ಮಲತಾಯಿ ಧೋರಣೆ ತೋರಿದ್ದೇಕೆ?

ಮಲತಾಯಿ ಧೋರಣೆ ತೋರಿದ್ದೇಕೆ?

ಮೋದೀಜಿ ಗುಜರಾತಿನಲ್ಲಿ 12 ಲಕ್ಷ ಟನ್ ಗೂ ಮೀರಿದ ಶೇಂಗಾ ಬೆಳೆಗೆ ಪ್ರತಿ ಕ್ವಿಂಟಾಲ್ ಗೆ ರೂ. 4,450 ಬೆಂಬಲ ಬೆಲೆ ನೀಡಿ ರೈತರಿಗೆ ನೆರವು ನೀಡಿದ್ದೀರಿ. ಅದೇ ಬೆಂಬಲ ಬೆಲೆಗೆ ಬಕಪಕ್ಷಿಯಂತೆ ಕಾದ ಕರ್ನಾಟಕ ರೈತರಿಗೆ ನೀವು ಮಲತಾಯಿ ಧೋರಣೆ ತೋರಿದ್ದೇಕೆ?

ರೈತರ ಬದುಕಿನಲ್ಲಿ ಚದುರಂಗದಾಟವೇಕೆ?

ರೈತರ ಬದುಕಿನಲ್ಲಿ ಚದುರಂಗದಾಟವೇಕೆ?

ಮೋದೀಜಿ ಕನ್ನಡಿಗರನ್ನು ಹರಾಮಿ ಎಂದ ಗೋವಾ ಜಲಸಂಪನ್ಮೂಲ ಸಚಿವನ ಮೇಲೆ ನಿಮ್ಮ ಕ್ರಮವೇನು? ಮಹದಅಯಿ ವಿವಾದ ಬಗೆಹರಿಸುವಲ್ಲಿ ಇನ್ನೂ ನಿಮ್ಮ ಗಣಮೌನವೇಕೆ? ಕರ್ನಾಟಕ ರೈತರ ಬದುಕಿನಲ್ಲಿ ಈ ಚದುರಂಗದಾಟವೇಕೆ?

ಕನ್ನಡಿಗರು ನಿಮ್ಮ ಮಲತಾಯಿ ಮಕ್ಕಳೇ?

ಕನ್ನಡಿಗರು ನಿಮ್ಮ ಮಲತಾಯಿ ಮಕ್ಕಳೇ?

ಕರ್ನಾಟಕ ಖುಷ್ಕಿ ಭೂಮಿ ಹೊಂದಿರುವ ಎರಡನೇ ರಾಜ್ಯ. ಕಳೆದ 16 ವರ್ಷಗಳಲ್ಲಿ 13 ವರ್ಷ ಬರ ಕಂಡಿದೆ. ರಾಜಸ್ಥಅನ, ತಮಿಳುನಾಡು, ಮಹಾರಾಷ್ಟ್ರಕ್ಕೆ ಹೋಲಿಸಿದರೆ ರಾಜ್ಯಕ್ಕೆ ಕೇಮದ್ರದಿಂದ ದೊರೆತ ಬರ ಪರಿಹಾರ ರೂ. 1,527 ಕೋಟಿ ರೂ. ಮೋದೀಜಿ ಕನ್ನಡಿಗರು ನಿಮ್ಮ ಮಲತಾಯಿ ಮಕ್ಕಳೇ?

ನಿಮ್ಮ ಸಾಧನೆ ಇದೇಯೇನು?

ನಿಮ್ಮ ಸಾಧನೆ ಇದೇಯೇನು?

ಮೋದೀಜಿ ನೀವು ರೈತಪರವೆನ್ನುತ್ತೀರಿ! ಆದರೆ ಕಳೆದ 30 ವರ್ಷಗಳಲ್ಲಿ ನಿಮ್ಮ ಆಡಳಿತದಲ್ಲಿ ಭಾರತದ ಕೃಷಿ ಇಳುವರಿ ಕುಂಠಿತವಾಗಿದ್ದು ಶೆ.1.9ಕ್ಕೆ ಸೀಮಿತವಾಗಿದೆ. ನಿಮ್ಮ ಸಾಧನೆ ಇದೇಯೇನು?

ಸದಾ ಸುಳ್ಳು ಹೇಳುವುದ್ಯಾಕೆ?

ಸದಾ ಸುಳ್ಳು ಹೇಳುವುದ್ಯಾಕೆ?

ಮೋದೀಜಿ ನೀವು ಮಾತಿಗೆ ಮುಂಚೆ ಫಸಲ್ ಜಮಾ ಯೋಜನೆ ಕುರಿತು ಪ್ರಸ್ತಅಪಿಸುತ್ತೀರಿ. ಆದರೆ ಈ ಯೋಜನೆಗೆ ಕರ್ನಾಟಕದ ಕೊಡುಗೆ ಶೇ.50. ಸದಾ ಸುಳ್ಳು ಹೇಳುವಿರೇಕೆ ಮೋದಿಯವರೇ?

ಕರ್ನಾಟಕ ರೈತರಿಗೆ ಅಪಮಾನ ಮಾಡುವಿರೇಕೆ?

ಕರ್ನಾಟಕ ರೈತರಿಗೆ ಅಪಮಾನ ಮಾಡುವಿರೇಕೆ?

ಕರ್ನಾತಕದಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿ ಕೊಮದ ಯಡಿಯೂರಪ್ಪನನ್ನು 'ಗೋಲಿಬಾರ್ ಯಡ್ಡಿ' ಎಂದು ಕರೆಯುತ್ತಾರೆ. ಮೋದೀಜಿ ಯಡ್ಡಿಯನ್ನು ರೈತಬಂಧು ಎಂದು ಸಂಬೋಧಿಸಿ ಕರ್ನಾಟಕ ರೈತರಿಗೆ ಅಪಮಾನ ಮಾಡುವಿರೇಕೆ?

ಭಾರತೀಯರನ್ನು ಮೂರ್ಖರನ್ನಾಗಿಸುವ ಪ್ರಯತ್ನವೇಕೆ?

ಭಾರತೀಯರನ್ನು ಮೂರ್ಖರನ್ನಾಗಿಸುವ ಪ್ರಯತ್ನವೇಕೆ?

ಮೋದೀಜಿ ನಿಮ್ಮ 4 ವರ್ಷಗಳ ಆಡಳಿತದಲ್ಲಿ ರೈತರಿಗೆ ನಿಮ್ಮ ಕೊಡುಗೆ ಶೂನ್ಯ. ಈಗ 2022 ರ ಚುನಾವಣೆಗಾಗಿ ಮತ್ತದೇ ಸುಳ್ಳಿನ ಕಂತೆ ಹೆಣೆಯುತ್ತಿರುವಿರಿ. ಮತ್ತೊಮ್ಮೆ ಸುಳ್ಳಿನ ಕಥೆ ಹೇಳಿ ಭಾರತೀಯರನ್ನು ಮೂರ್ಖರನ್ನಾಗಿಸುವ ಪ್ರಯತ್ನವೇಕೆ?

ಪ್ರಧಾನಿ ಮೋದಿ ಮೌನಕ್ಕೆ ಟ್ವಿಟ್ಟರ್ ನಲ್ಲಿ ಗುದ್ದು ನೀಡಿದ ಸಿದ್ದು!ಪ್ರಧಾನಿ ಮೋದಿ ಮೌನಕ್ಕೆ ಟ್ವಿಟ್ಟರ್ ನಲ್ಲಿ ಗುದ್ದು ನೀಡಿದ ಸಿದ್ದು!

English summary
Karnataka Congress on twitter asked 10 questions to prime minister Narendra Modi under anti farmer Modi hashtag. Here are those 10 questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X