ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರಾದ, ಉತ್ತರ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವ, ಮಾಜಿ ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವೆ ಮತ್ತು ರಾಜಸ್ಥಾನ, ಉತ್ತರಾಖಂಡ, ಗೋವಾದ ರಾಜ್ಯಪಾಲೆಯಾಗಿದ್ದ ಮಾರ್ಗರೆಟ್ ಆಳ್ವ ಅವರ ಪುತ್ರ.

ಪಕ್ಕಾ ಕಾಂಗ್ರೆಸ್ ಕುಟುಂಬದಿಂದ ಬಂದ ನಿವೇದಿತ್, 2014ರ ಲೋಕಸಭಾ ಚುನಾವಣೆಯಲ್ಲಿ ಕೈಗೆ ಬಂದ ಕಾಂಗ್ರೆಸ್ ಪಕ್ಷದ ಟಿಕೆಟ್ 'ಕೈ'ತಪ್ಪಿದರೂ, ರಾಜಕೀಯದ ಜೀವನದಲ್ಲಿ ಇದೆಲ್ಲಾ ಮಾಮೂಲಿಯೆಂದು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಮುಖಂಡರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಉತ್ತರಕನ್ನಡದ ಆರು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸಲು ಸಿದ್ದತೆ ನಡೆಸುತ್ತಿರುವ ನಿವೇದಿತ್, ಉತ್ತರಕನ್ನಡದ ರಾಜಕೀಯ, ಪ್ರಧಾನಿ ಮೋದಿಯವರ 'ಟೆನ್ ಪರ್ಸೆಂಟ್ ಕಮಿಷನ್' ಸರಕಾರ' ಎನ್ನುವ ಆರೋಪ, ಮುಂತಾದ ವಿಚಾರಗಳ ಬಗ್ಗೆ 'ಒನ್ ಇಂಡಿಯಾ'ದ ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಂತಿದೆ..

ಪ್ರ: ಕರಾವಳಿ ಅಭಿವೃದ್ದಿ ಪ್ರಾಧಿಕಾರಕ್ಕೆ ಸುಮಾರು 21 ತಿಂಗಳು ಚೇರ್ಮನ್ ಆಗಿ ಕೆಲಸ ಮಾಡಿದ್ರಿ. ಇದರಲ್ಲಿ ನಿಮಗೆ ತೃಪ್ತಿ ತಂದಕೊಟ್ಟ ಕೆಲಸಗಳು ಯಾವುವು?

ಆಳ್ವ: ಯಡಿಯೂರಪ್ಪನವರ ಸರಕಾರದ ಅವಧಿಯಲ್ಲಿ ಈ ಪ್ರಾಧಿಕಾರ ಆರಂಭವಾಗಿದ್ದು. ನಾನು ಇದರ ಚೇರ್ಮನ್ ಆದಾಗ, ಎಸ್ ಆರ್ ಪಾಟೀಲ್ ಇಲಾಖೆಯ ಸಚಿವರಾಗಿದ್ದರು. ಉಡುಪಿ, ದಕ್ಷಿಣಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿನ ಪರಿಸ್ಥಿತಿಯೇ ವಿಭಿನ್ನ. ಹೊನ್ನಾವರದಲ್ಲಿ ಶರಾವತಿ ನದಿಯ ಮೇಲೆ ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಿದೆವು. ಇದರಿಂದ ಇಪ್ಪತ್ತು ಸಾವಿರ ಜನರಿಗೆ ದಿನಾ ಲಾಭವಾಗುತ್ತಿದೆ, 24 ಕಿ.ಮೀ ಬಳಸಿಕೊಂಡು ಬರುವುದು ತಪ್ಪುತ್ತಿದೆ. ಕರ್ಕಿ, ಉಡುಪಿ, ಹಳದೀಪುರ ಮುಂತಾದ ಕಡೆ ಹೊಸ ಮೀನು ಮಾರುಕಟ್ಟೆಯನ್ನು ಕೊಟ್ಟಿದ್ದೇವೆ. ಇದು ನನಗೆ ಬಹಳಷ್ಟು ತೃಪ್ತಿ ತಂದುಕೊಟ್ಟ ಪ್ರಮುಖ ಕೆಲಸಗಳು. ಮುಂದೆ ಓದಿ..

 ಅಗ್ರಪಂಕ್ತಿಯ ಲೀಡರ್ ಸಾಲಿಗೆ ಬರಬೇಕಾದರೆ ಇರುವ ಮಾನದಂಡವೇನು?

ಅಗ್ರಪಂಕ್ತಿಯ ಲೀಡರ್ ಸಾಲಿಗೆ ಬರಬೇಕಾದರೆ ಇರುವ ಮಾನದಂಡವೇನು?

ಪ್ರ: ರಾಜ್ಯ ಕಾಂಗ್ರೆಸ್ ನಿಮ್ಮನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆಯಾ? ಅಗ್ರಪಂಕ್ತಿಯ ಲೀಡರ್ ಸಾಲಿಗೆ ಬರಬೇಕಾದರೆ ನಿಮ್ಮ ಪಕ್ಷದಲ್ಲಿನ ಮಾನದಂಡವೇನು?
ಆಳ್ವ: ಪರಮೇಶ್ವರ್ ಅವರು ತಮ್ಮ ಅಧ್ಯಕ್ಷತೆಯಲ್ಲಿ ಪಕ್ಷಕ್ಕಾಗಿ ಯಾರು ದುಡಿದಿದ್ದಾರೋ ಅವರಿಗೆಲ್ಲಾ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ನಾನು ನಾಲ್ಕು ವರ್ಷ ಯುವ ಕಾಂಗ್ರೆಸ್ ನಲ್ಲಿದ್ದೆ. ಅಲ್ಲಿಂದ ಕೆಪಿಸಿಸಿಗೆ ಕರೆದುಕೊಂಡು ಬಂದು ಕಾರ್ಯದರ್ಶಿಯನ್ನಾಗಿ ಮಾಡಿದರು. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದವನು. ಕೆಲವರು ನೇರ ಶಾಸಕರಾಗಿರಬಹುದು, ಆದರೆ ನಾನು ಕ್ಯಾಡರ್ ಬೇಸ್ ನಂಬುವವನು. ನಾನು ಯುವ ಘಟಕದಿಂದ ಕೆಪಿಸಿಸಿಗೆ ನಂತರ ಎಐಸಿಸಿಗೆ ಬಂದೆ. ಪಕ್ಷ ಇದ್ದರೆ ಎಲ್ಲಾ, ಇಲ್ಲಾಂದ್ರೆ ಏನೂ ಇಲ್ಲ. ..ಯಾರೂ ಇಲ್ಲ..

 ನಿಮ್ಮ ಮತ್ತು ದೇಶಪಾಂಡೆ ಕುಟುಂಬದ ನಡುವೆ ಸಂಬಂಧ ಹೇಗಿದೆ?

ನಿಮ್ಮ ಮತ್ತು ದೇಶಪಾಂಡೆ ಕುಟುಂಬದ ನಡುವೆ ಸಂಬಂಧ ಹೇಗಿದೆ?

ಪ್ರ: ನಿಮ್ಮ ಮತ್ತು ದೇಶಪಾಂಡೆ ಕುಟುಂಬದ ನಡುವೆ ರಾಜಕೀಯ ಸಂಬಂಧ ಹೇಗಿದೆ?
ಆಳ್ವ: ತುಂಬಾ ಚೆನ್ನಾಗಿದೆ. 2014ರಲ್ಲಿ ನಾನೂ ಲೋಕಸಭಾ ಟಿಕೆಟಿನ ಆಕಾಂಕ್ಷಿಯಾಗಿದ್ದೆ. ದೇಶಪಾಂಡೆಯವರ ಮಗನೂ ಆಕಾಂಕ್ಷಿಯಾಗಿದ್ದರು. ಒಂದು ಕ್ಷೇತ್ರದಲ್ಲಿ ಇಬ್ಬರು ಆಕಾಂಕ್ಷಿಗಳು ಇಲ್ಲದೇ ಇದ್ದರೆ, ಅದು ಪಕ್ಷವೇ ಅಲ್ಲ. ಲೋಕಸಭಾ ಚುನಾವಣೆಯ ವೇಳೆ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದೆ. ನನಗೆ ಅವಕಾಶ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆಯಲ್ಲಿ ಕೆಲಸ ಮಾಡುವವನು ನಾನು.

 ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರಿದ ನಂತರ ಹೇಗಿದೆ ರಾಜಕೀಯ

ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರಿದ ನಂತರ ಹೇಗಿದೆ ರಾಜಕೀಯ

ಪ್ರ: ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರಿದ ನಂತರ, ಕಾರವಾರ ಸೇರಿದಂತೆ, ಜಿಲ್ಲೆಯಲ್ಲಿ ತ್ರಿಕೋಣ ಸ್ಪರ್ಧೆಯೋ, ಚತುಷ್ಕೋನ ಸ್ಪರ್ಧೆಯೋ?
ಆಳ್ವ: ಗ್ರಾಸ್ ರೂಟ್ ಲೆವೆಲ್ ಪ್ರಕಾರ ಮಾತನಾಡುವುದಾದರೆ, ಉತ್ತರಕನ್ನಡದಲ್ಲಿ ಜೆಡಿಎಸ್ ಇಲ್ಲ. ಹಾಗಾಗಿ, ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ. ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಸತೀಶ್ ಸೈಲ್ ಈಗ ನಮ್ಮ ಪಕ್ಷದ ಸದಸ್ಯರು. ಬಿಜೆಪಿಯಿಂದ ಸ್ಥಾನಮಾನ ಸಿಗಲಿಲ್ಲವೆಂದು ಅಸ್ನೋಟಿಕರ್ ಬಿಜೆಪಿ ಬಿಟ್ಟಿರಬಹುದು.

 ಕರ್ನಾಟಕದ ಕಾಂಗ್ರೆಸ್ ಸರಕಾರ 10% ಕಮಿಷನ್ ಸರಕಾರ

ಕರ್ನಾಟಕದ ಕಾಂಗ್ರೆಸ್ ಸರಕಾರ 10% ಕಮಿಷನ್ ಸರಕಾರ

ಪ್ರ: ಕರ್ನಾಟಕದ ಕಾಂಗ್ರೆಸ್ ಸರಕಾರ 10% ಕಮಿಷನ್ ಸರಕಾರ ಎಂದು ಪ್ರಧಾನಿಯವರು ಟೀಕೆ ಮಾಡಿ ಹೋಗಿದ್ದಾರಲ್ಲಾ?
ಆಳ್ವ: ಚುನಾವಣೆಯ ವೇಳೆ ಬಂದು ಈ ರೀತಿ ಹೇಳಿಕೆ ನೀಡುತ್ತಾರೆ ಅಂದರೆ ಬಿಜೆಪಿಯವರದ್ದು ಹಿಟ್ ಎಂಡ್ ರನ್ ಪಾಲಿಟಿಕ್ಸ್. ಅವರಿಗೆ ಮಾತನಾಡಲು ಏನೂ ಇಲ್ಲದಿದ್ದರೆ, ರಾಜ್ಯದ ಅಭಿವೃದ್ದಿಯ ಬಗ್ಗೆ ಮಾತಾನಾಡಲಿ. ನಮ್ಮ ಸರಕಾರ ನೀಡಿದ ಭಾಗ್ಯ ಯೋಜನೆಗಳನ್ನು ಬಿಟ್ಟು, ಮಿಕ್ಕ ಎಲ್ಲಾ ವಿಚಾರವನ್ನು ಬಿಜೆಪಿಯವರು ಮಾತಾನಾಡುತ್ತಾರೆ. ಆರೋಪ ಮಾಡಿರುವುದಕ್ಕೆ ಯಾವುದೇ ಆಧಾರವಿಲ್ಲ, ಏನೋ ಮಾತನಾಡಿ ಸಾಯಂಕಾಲ ಹೊರಟು ಹೋಗುತ್ತಾರೆ. ಅದೇ ರೀತಿ ಯಡಿಯೂರಪ್ಪನವರು ಕೂಡಾ. ಐದು ವರ್ಷದಲ್ಲಿ ಏನು ಅಭಿವೃದ್ದಿ ಕೆಲಸವನ್ನು ನಾವು ಮಾಡಿದ್ದೇವೋ, ನಾವು ಅದರ ಬಗ್ಗೆ ಮಾತನಾಡುತ್ತೇವೆ.

 ಕೊನೆಗೆ ನಿಲ್ಲುವುದು ಜಾತಿ ರಾಜಕಾರಣ

ಕೊನೆಗೆ ನಿಲ್ಲುವುದು ಜಾತಿ ರಾಜಕಾರಣ

ಪ್ರ: ಏನೇ ಅಭಿವೃದ್ದಿ ಮಾಡಿದರೂ, ಕೊನೆಗೆ ನಿಲ್ಲುವುದು ಜಾತಿ ರಾಜಕಾರಣ/ಸಮೀಕರಣವಲ್ಲವೇ?
ಆಳ್ವ: ನಾನು ಉತ್ತಮ ವಿದ್ಯಾಭ್ಯಾಸವನ್ನು ಕಲಿತು ರಾಜಕೀಯಕ್ಕೆ ಬಂದಾಗ, ಜಾತಿ ದೃಷ್ಟಿಕೋನದಿಂದ ರಾಜಕಾರಣ ಮಾಡಲು ಬಯಸುವುದಿಲ್ಲ. ಅಭಿವೃದ್ದಿ ಕೆಲಸವನ್ನು ಮಾಡಿಯೇ ಚುನಾವಣೆಗೆ ಹೋಗಲು ಬಯಸುವವನು ನಾನು. ಅದೇ ವಿಚಾರದಲ್ಲೇ ಸ್ಪರ್ಧಿಸುತ್ತೇನೆ, ಸೋತರೂ ಪರವಾಗಿಲ್ಲ. ಹದಿನೆಂಟು ವರ್ಷದಿಂದ ಒಬ್ಬರೇ ಶಾಸಕರು ಅಲ್ಲಿದ್ದಾರೆ, ಏನೂ ಅಭಿವೃದ್ದಿ ಕೆಲಸವನ್ನು ಅಲ್ಲಿ ಮಾಡಲಿಲ್ಲ. ಶಿರಸಿಯಲ್ಲಿ ಅಭಿವೃದ್ದಿ ಕೆಲಸ ಮಾಡಲು ಬೇಕಾದಷ್ಟಿವೆ.

English summary
An exclusive interview with youth Congress leader from Uttara Kannada, KPCC General Secretary Nivedith Alva - 1. PM Modi's 10% commission Karnataka government statement Alva said, BJP will always do hit and run politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X