Bengaluru Rent: ಬಾಡಿಗೆದಾರರಿಗೆ 10 ಗುಡ್ನ್ಯೂಸ್, ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ 2025 ಹೇಗೆ ಲಾಭ ?
Bengaluru Rent: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇರುವ ಬಾಡಿಗೆದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ದುಬಾರಿಯಾಗುತ್ತಿದ್ದು, ಇದೀಗ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದೀಗ ಹೊಸ ನಿಯಮವನ್ನು ಜಾರಿ ಮಾಡಿದೆ. ಕರ್ನಾಟಕ ಸರ್ಕಾರವು ಬಾಡಿಗೆ ನಿಯಂತ್ರಣ ಕಾಯ್ದೆಗೆ ಪ್ರಮುಖ ತಿದ್ದುಪಡಿಗಳನ್ನು ತಂದಿದೆ. ಇದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ನೆಲೆಸಿರುವ ಬಾಡಿಗೆದಾರರಿಗೆ ಭಾರೀ ಅನುಕೂಲವಾಗಲಿದೆ. ಅದರ ವಿವರ ನೋಡೋಣ.
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಈ ಹೊಸ ನಿಯಮವು ಮನೆ ಬಾಡಿಗೆದಾರರು ಹಾಗೂ ಮನೆ ಮಾಲೀಕರು ಇಬ್ಬರಿಗೂ ಅನ್ವಯವಾಗಲಿದೆ. ಅಲ್ಲದೇ ಒಂದೊಮ್ಮೆ ಮನೆ ಮಾಲೀಕರು ಅಥವಾ ಆಸ್ತಿದಾರರು ಈ ನಿಯಮವನ್ನು ಉಲ್ಲಂಘನೆ ಮಾಡಿದರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಬಾಡಿಗೆ ವ್ಯಾಜ್ಯಗಳನ್ನು ಶೀಘ್ರ ಇತ್ಯರ್ಥಪಡಿಸಲು ಫಾಸ್ಟ್ ಟ್ರ್ಯಾಕ್ ವ್ಯವಸ್ಥೆ ಜಾರಿಗೆ ಬರಲಿದೆ.

ದುಬಾರಿ ಅಡ್ವಾನ್ಸ್ ಪಡೆಯುವುದಕ್ಕೆ ಕಡಿವಾಣ
ರಾಜ್ಯ ಸರ್ಕಾರವು ಬಾಡಿಗೆ ನಿಯಂತ್ರಣ ಕಾಯ್ದೆಗೆ ಪ್ರಮುಖ ತಿದ್ದುಪಡಿಯನ್ನು ತಂದಿದ್ದು ಇದರಿಂದ ಇನ್ಮುಂದೆ ಮನೆ ಮಾಲೀಕರು ಹಾಗೂ ಆಸ್ತಿದಾರರು ದುಬಾರಿ ಅಡ್ವಾನ್ಸ್ ಪಡೆಯುವುದಕ್ಕೆ ಕಡಿವಾಣ ಬೀಳಲಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮನೆಗಳ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಮುಖ್ಯವಾಗಿ ಮುಂಗಡ ಹಣ (Rent Home Advance) ಪಡೆಯು ವಿಚಾರದಲ್ಲಿ ತಕರಾರುಗಳು ನಡೆಯುತ್ತಿದ್ದು, ಇನ್ಮುಂದೆ ಇದಕ್ಕೆ ಕಡಿವಾಣ ಬೀಳಲಿದೆ.
ಹೊಸ ನಿಯಮದ ಪ್ರಕಾರ ಬೇಕಾಬಿಟ್ಟಿ ಅಡ್ವಾನ್ಸ್ ಮೊತ್ತವನ್ನು ಪಡೆಯುವಂತೆ ಇಲ್ಲ. ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ 10 ತಿಂಗಳ ಅಡ್ವಾನ್ಸ್ ಮೊತ್ತವನ್ನು ಪಡೆಯುವುದು ಇದೆ. ಇನ್ಮುಂದೆ ವಸತಿ ಪ್ರದೇಶಗಳಲ್ಲಿ ಇರುವ ಮನೆಗಳ ಬಾಡಿಗೆ ನೀಡುವಾಗ 2 ತಿಂಗಳ ಬಾಡಿಗೆ ಕೊಟ್ಟರೆ ಸಾಕು. ಅಂಗಡಿ ಇಲ್ಲವೇ ಕಮರ್ಷಿಯಲ್ ಜಾಗವನ್ನು ಬಾಡಿಗೆ ಕೊಡುವುದಾದರೆ 6 ತಿಂಗಳ ಬಾಡಿಗೆ ಪಡೆಯಲು ಅವಕಾಶ ಇರಲಿದೆ.
ಬಾಡಿಗೆದಾರರಿಗೆ ಹೇಗೆ ಅನುಕೂಲವಾಗಲಿದೆ ?
1. ಕೇವಲ ಬಾಯಿ ಮಾತಿನ ಒಪ್ಪಂದಗಳಿಗೆ ಬೆಲೆ ಇರಲ್ಲ. ಇನ್ಮುಂದೆ ಬಾಡಿಗೆ ಒಪ್ಪಂದಗಳನ್ನು ಆನ್ಲೈನ್ನಲ್ಲಿ ನೋಂದಾಯಿಸಲು ಪೋರ್ಟಲ್ ಬರಲಿದೆ.
2. ಮನೆ ಮಾಲೀಕರು ಏಕಾಏಕಿ ಬಾಡಿಗೆದಾರರನ್ನು ಹೊರಹಾಕುವಂತಿಲ್ಲ.
3. ಮನೆಯಲ್ಲಿರುವ ಬಾಡಿಗೆದಾರರನ್ನು ಖಾಲಿ ಮಾಡಿಸಬೇಕಾದರೆ 3 ತಿಂಗಳು ಮೊದಲು ನೋಟಿಸ್ ಕೊಡಬೇಕು.
4. ಮನೆ ಖಾಲಿ ಮಾಡುವಾಗ ಬೇಕಾಬಿಟ್ಟಿ ಹಣ ಮುರಿದುಕೊಳ್ಳುವಂತೆ (ಅಡ್ವಾನ್ಸ್ ಹಣವನ್ನು ಹಿಡಿದುಕೊಳ್ಳುವಂತಿಲ್ಲ).
5. ಬಾಡಿಗೆದಾರರ ಬಾಕಿ ಮೊತ್ತವನ್ನು ಬಾಡಿಗೆದಾರರು ಮನೆ ಖಾಲಿ ಮಾಡುವಾಗ ಅದೇ ದಿನ ಹಿಂದಿರುಗಿಸಬೇಕು.
6. ಬಾಡಿಗೆಗೆ ಮನೆ ಕೊಡುವ ಅಥವಾ ತೆಗೆದುಕೊಳ್ಳುವ ಸಂದರ್ಭದಲ್ಲಿ ಲಿಖಿತ ರೂಪದ ಅಗ್ರಿಮೆಂಟ್ ಕಡ್ಡಾಯವಾಗಲಿದೆ.
7. ಅಗ್ರಿಮೆಂಟ್ ಮಾಡಿಕೊಂಡ 2 ತಿಂಗಳ ಒಳಗೆ ರೆಂಟ್ ಅಥಾರಿಟಿ ಬಳಿ ಜಂಟಿಯಾಗಿ ರಿಜಿಸ್ಟರ್ (ಮನೆ ಮಾಲೀಕರು ಹಾಗೂ ಬಾಡಿಗೆದಾರರು ಇಬ್ಬರ ಸಹಿ) ಮಾಡಿಸಬೇಕು.
8. ಆನ್ಲೈನ್ನಲ್ಲೂ ಡಿಜಿಟಲ್ ಸ್ಟ್ಯಾಂಪ್ ರಿಜಿಸ್ಟರ್ ಮಾಡುವ ಅವಕಾಶ ಇರುವುದರಿಂದ ಮುಂದೆ ಸಮಸ್ಯೆಯಾದರೆ ಅನುಕೂಲವಾಗಲಿದೆ.
9. ಮನೆ ಮಾಲೀಕರು ಬಾಡಿಗೆದಾರರು ಇರುವ ಮನೆಗೆ ಏಕಾಏಕಿ ಬರುವಂತೆ ಇಲ್ಲ. ಮನೆಗೆ ಬರುವ ಕನಿಷ್ಠ 24 ಗಂಟೆಯ ಮುಂಚೆ ಮೆಸೇಜ್ ಮಾಡಿರಬೇಕು.
10. ಮನೆ ಬಾಡಿಗೆದಾರರಿಗೆ ಅನವಶ್ಯಕ ಕಿರಿಕಿರಿ ಕೊಡುವಂತೆ ಇಲ್ಲ.
ಬಾಡಿಗೆದಾರರು ನಿರಾಳ
ಇನ್ನು ಈ ಹೊಸ ತಿದ್ದುಪಡಿಯಿಂದಾಗಿ ಬಾಡಿಗೆದಾರರು ನಿರಾಳರಾಗಲಿದ್ದಾರೆ. ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಹಣ ಕೊಡುವುದು ಹಾಗೂ ಆ ಅಡ್ವಾನ್ ಹಣವನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ಇಷ್ಟು ದಿನಗಳ ಕಾಲ ನಡೆಸಲಾಗುತ್ತಿದ್ದ ಸಂಕಷ್ಟಗಳು ತಪ್ಪಲಿವೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications