• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿಯಲ್ಲಿ ಅನುಮಾನಾಸ್ಪದ ರೀತಿ ಮಹಿಳಾ ಕಾನ್ ಸ್ಟೆಬಲ್ ಸಾವು

By ಕಲಬುರಗಿ ಪ್ರತಿನಿಧಿ
|

ಕಲಬುರಗಿ, ಆಗಸ್ಟ್ 31: ಮಹಿಳಾ ಪೊಲೀಸ್ ಕಾನ್ ಸ್ಟೆಬಲ್​​​ವೊಬ್ಬರು ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕಲಬುರಗಿಯ ಯಡ್ರಾಮಿ ತಾಲೂಕಿನ ಸುಂಬಡ್ ಗ್ರಾಮದಲ್ಲಿ ಆ.30ರ ಭಾನುವಾರ ನಡೆದಿದೆ.

ಸುರೇಖಾ ಬಿರಾದಾರ (34) ಮೃತ ಮಹಿಳಾ ಪೊಲೀಸ್ ಸಿಬ್ಬಂದಿ. 2008ರಲ್ಲಿ ಪೊಲೀಸ್ ಸೇವೆಗೆ ಆಯ್ಕೆಯಾದ ಸುರೇಖಾ 2010ರಲ್ಲಿ ಪೊಲೀಸ್ ಕಾನ್ ಸ್ಟೆಬಲ್​​ ಮಲ್ಲಿನಾಥ ಅವರನ್ನು ಮದುವೆಯಾಗಿದ್ದರು. ಇವರಿಗೆ 5 ವರ್ಷದ ಗಂಡು ಮಗು ಹಾಗೂ 4 ವರ್ಷದ ಹೆಣ್ಣು ಮಗು ಇದೆ.

ವಿವಾಹ ವಾರ್ಷಿಕೋತ್ಸವ ದಿನದಂದೇ ಪೊಲೀಸ್ ಪೇದೆ ಸಾವು

ಕಲಬುರಗಿ ನಗರದಲ್ಲಿ ರಾಜ್ಯ ಗುಪ್ತಚರ ವಿಭಾಗದಲ್ಲಿ ಸುರೇಖಾ ಕೆಲಸ ಮಾಡುತ್ತಿದ್ದರು. ಅವರ ಪತಿ ಮಲ್ಲಿನಾಥ ಎರಡು ತಿಂಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ಇದೀಗ ಸುರೇಖಾ ಕೂಡ ಮೃತಪಟ್ಟಿದ್ದಾರೆ. ಯಡ್ರಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಮೃತದೇಹ ಹೊರ ತೆಗೆಯಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

English summary
A woman police constable was found dead in a well in Sumbad village of Yadrami Taluk in Kalaburagi on Sunday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X