ಮಾರುಕಟ್ಟೆಯಲ್ಲಿ ಚಾಕು ಹಿಡಿದು ಸಾರ್ವಜನಿಕರಿಗೆ ಬೆದರಿಕೆ- ಮುಂದಾಗಿದ್ದೇನು ವಿಡಿಯೋ ನೋಡಿ
ಮಾರುಕಟ್ಟೆಯಲ್ಲಿ ಚಾಕು ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ದಾಳಿಕೋರನ ವಿಡಿಯೋವೊಂದು ವೈರಲ್ ಆಗಿದೆ.
ಬೆಂಗಳೂರು ಫೆಬ್ರವರಿ 6: ಕರ್ನಾಟಕದ ಕಲಬುರಗಿಯ ಜನನಿಬಿಡ ಮಾರುಕಟ್ಟೆಯೊಂದರಲ್ಲಿ ಸ್ಥಳೀಯರಿಗೆ ಚಾಕುವಿನಿಂದ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಚಾಕುವಿನಿಂದ ಶಸ್ತ್ರಸಜ್ಜಿತವಾದ ವ್ಯಕ್ತಿ, ಕಪ್ಪು ವಸ್ತ್ರ ಧರಿಸಿ, ಕಲ್ಬುರಗಿ ಸೂಪರ್ ಮಾರ್ಕೆಟ್ ಮಧ್ಯದಲ್ಲಿ ಭಾನುವಾರ ರಾತ್ರಿ ಪೊಲೀಸರಿಂದ ಘೇರಾವ್ ಹಾಕಲ್ಪಟ್ಟ ವಿಡಿಯೊ ವೈರಲ್ ಆಗಿದೆ. ಪೊಲೀಸರು ವ್ಯಕ್ತಿಯನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಂತೆ ಕುತೂಹಲದಿಂದ ವೀಕ್ಷಕರು ಕೂಡ ಸ್ಥಳದಲ್ಲಿ ಜಮಾಯಿಸಿದರು.
ಕರ್ನಾಟಕದ ಕಲಬುರಗಿಯ ಜನನಿಬಿಡ ಸೂಪರ್ ಮಾರುಕಟ್ಟೆಯಲ್ಲಿ ಸ್ಥಳೀಯರಿಗೆ ಚಾಕುವಿನಿಂದ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.#Karnataka #Police #Kalaburag #supermarket #ಒನ್ಇಂಡಿಯಾಕನ್ನಡಸುದ್ದಿ pic.twitter.com/6JMFr7UgZY
— oneindiakannada (@OneindiaKannada) February 6, 2023
ಪೊಲೀಸರು ಆತನಿಗೆ ಚಾಕು ಕೆಳಗೆ ಹಾಕುವಂತೆ ಒತ್ತಾಯಿಸಿದರು. ಆದರೆ ವ್ಯಕ್ತ ಪೊಲೀಸರ ಮಾತು ಕೇಲಲಿಲ್ಲ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಆಗ ಆತ ನೆಲದ ಮೇಲೆ ಕುಸಿದು ಬಿದ್ದಾಗ, ಪೊಲೀಸರು ಲಾಠಿ ಚಾರ್ಜ್ ಮಾಡಿದರು.

"ಸೂಪರ್ ಮಾರ್ಕೆಟ್ ಬಳಿ ದುಷ್ಕರ್ಮಿಯೊಬ್ಬ ಸಾರ್ವಜನಿಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸುತ್ತಿದ್ದನು. ಪೊಲೀಸರು ಆತನನ್ನು ತಡೆದು ನಿಲ್ಲಿಸಲು ಯತ್ನಿಸಿದಾಗ ನಮ್ಮ ಪೊಲೀಸ್ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ದುಷ್ಕರ್ಮಿಯ ಮೇಲೆ ಗುಂಡು ಹಾರಿಸಿದ್ದಾರೆ" ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಹೇಳಿದರು. ಜಾಫರ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.












Click it and Unblock the Notifications