ಕಾಂಗ್ರೆಸ್ ಅವಧಿಯಲ್ಲಿ ಆರು ಬಾರಿ ದಾಳಿ ನಡೆಸಲಾಗಿತ್ತು: ಖರ್ಗೆ

ಕಲಬುರಗಿ, ಫೆಬ್ರವರಿ 26: ಪಾಕಿಸ್ತಾನಕ್ಕೆ ಉಗ್ರರ ಅಡ್ಡೆಯ ಮೇಲೆ ದಾಳಿ ಮಾಡಿರುವ ಭಾರತೀಯ ಸೇನೆಯ ಭಾಗವಾದ ವಾಯುಸೇನೆಯ ಶೌರ್ಯವನ್ನು ಮಲ್ಲಿಕಾರ್ಜುನ ಖರ್ಗೆ ಕೊಂಡಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ಚಲನವಲನಗಳ ಬಗ್ಗೆ ಪದೇ-ಪದೇ ಸಾಕ್ಷ್ಯಗಳನ್ನು ನೀಡಿದರೂ ಸಹ ಪಾಕಿಸ್ತಾನ ಆ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ, ಈಗ ನಡೆಸಿರುವ ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯಾಗಿದೆ ಎಂದರು.

ಉಗ್ರರನ್ನು ನಿಯಂತ್ರಿಸಲು ಎಲ್ಲಾ ಸರ್ಕಾರಗಳು ಈ ರೀತಿಯ ದಾಳಿಗಳನ್ನು ಕಾಲ ಕಾಲಕ್ಕೆ ಮಾಡುತ್ತವೇ ಬಂದಿವೆ. ನಮ್ಮ ಆಡಳಿತದ ಸಮಯದಲ್ಲಿ ಆರು ಬಾರಿ ಈ ರೀತಿ ಉಗ್ರರ ವಿರುದ್ಧ ದಾಳಿಗಳಾಗಿದ್ದವು ಎಂದು ಖರ್ಗೆ ಹೇಳಿದರು.

Six cross border attacks on terrorists has been conducted in UPA time: Mallikarjun Kharge

ಮೇಲಾಗಿ ಇದು ಸರ್ಕಾರದ ನಿರ್ಧಾರವಲ್ಲ, ಸೈನ್ಯವೇ ಉಗ್ರರನ್ನು ನಿಯಂತ್ರಿಸಲು ಕಾಲ-ಕಾಲಕ್ಕೆ ಇಂತಹಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಖರ್ಗೆ ಹೇಳಿದರು.

ನಾವು ಈ ಮೊದಲೇ ಹೇಳಿದಂತೆ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲ ಇರುತ್ತದೆ. ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ನಡೆದಿರುವ ಈ ದಾಳಿಗೆ ನಾವು ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಖರ್ಗೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+