ಜೂಜು ಅಡ್ಡಯಲ್ಲಿ ಸಿಕ್ತು 7.52 ಲಕ್ಷ

Posted By:
Subscribe to Oneindia Kannada

ಕಲಬುರಗಿ, ನವೆಂಬರ್ 08 : ಪುನೀತ್ ರಾಜ್ ಕುಮಾರ್ ಅವರು ತಮಾಷೆಗೆನೋ 'ಎಕ್ಕ ರಾಜಾ ರಾಣಿ ನನ್ನ ಕೈಯೊಳಗೆ....' ಎಂದು ಹಾಡಿದ್ದರೆ ಕಲಬುರಗಿಯ ಜೂಜುಕೋರರು ಇದನ್ನೇ ಗಂಭೀರವಾಗಿ ಪರಿಗಣಿಸಿದಂತಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜೂಜು ಅಡ್ಡೆಗಳು ಹೆಚ್ಚಾಗಿದ್ದು ಪೊಲೀಸರು ಅಡ್ಡಗಳ ವಿನಾಶಕ್ಕೆ ಪಣತೊಟ್ಟವರಂತೆ ದಾಳಿ ನಡೆಸುತ್ತಿದ್ದಾರೆ. ನವೆಂಬರ್ 08 ರ ಬುಧವಾರ ಕಲಬುರಗಿಯ ಸೇಡಂ ನಗರದ ಜೂಜು ಅಡ್ಡೆಯ ದಾಳಿ ನಡೆಸಿರುವ ಪೊಲೀಸರು ಭಾರಿ ಮೊತ್ತದ ಹಣ ವಶಪಡಿಸಿಕೊಂಡಿದ್ದಾರೆ.

ಸೇಡಂ ನ ಹೊರವಲಯದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 7.52 ಲಕ್ಷ ನಗದು, 8 ದ್ವಿಚಕ್ರ ವಾಹನ, 2 ಕಾರು, ಹಾಗೂ 18 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಜೂಜು ಆಡುತ್ತಿದ್ದ 17 ಜನರನ್ನು ಬಂಧಿಸಿದ್ದಾರೆ.

Police seizes 7.52 lacks from Gamblers in Kalaburgi

'ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವಶಪಡಿಸಿಕೊಂಡ ಅತಿ ದೊಡ್ಡ ಮೊತ್ತ ಇದಾಗಿದ್ದು ಎಲ್ಲರ ಮೇಲೂ ಪ್ರಕರಣ ದಾಖಲಿಸಿದ್ದೇವೆ. ದಾಳಿಯ ವೇಳೆ ಹಲವರು ಜೂಜುಕೋರರು ಪಲಾಯನ ಮಾಡಿದ್ದು, ಅವರ ಹುಡುಕಾಟಕ್ಕಾಗಿ ಶೋಧ ನಡೆದಿದೆ' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಜೂಜು ಅಡ್ಡೆಗಳು ಹೆಚ್ಚಾಗುತ್ತಿದ್ದು, ಇವುಗಳನ್ನು ತಹಬಂದಿಗೆ ತರಬೇಕೆಂದು ಪೊಲೀಸ್ ಹಿರಿಯ ಅಧಿಕಾರಿಗಳು ಖಡಕ್ಕಾಗಿ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸರು ದಾಳಿ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Police seizes 7.52 lacks Gamblers in Kalaburgi's Sedam. Police Officers said its is the heist seized amount in these days in District.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ