ಕಲಬುರಗಿಯಲ್ಲಿ ಮತ್ತೆ ಗುಂಡಿನ ಸದ್ದು, ಪೊಲೀಸರಿಗೂ ಗಾಯ

Posted By:
Subscribe to Oneindia Kannada

ಕಲಬುರಗಿ, ಡಿಸೆಂಬರ್ 04 : ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಎರಡನೇ ಬಾರಿ ಆರೋಪಿಗಳ ಮೇಲೆ ಪೊಲೀಸರು ಪೈರಿಂಗ್ ನಡೆಸಿದ್ದಾರೆ. ಈ ಬಾರಿ ಪೊಲೀಸರ ಗುಂಡ ಬಿದ್ದಿದ್ದು ಅಕ್ರಮ ನಾಡ ಪಿಸ್ತೂಲ್ ಗಳನ್ನು ಸಾಗಾಟ ಮತ್ತು ದರೋಡೆ ಮಾಡುತ್ತಿದ್ದ ನಟೋರಿಯಸ್ ಕಿಲಾಡಿ ಅರ್ಜುನ್‌ಗೆ.

ಬೆಂಗಳೂರು: ಬೆಳ್ಳಂಬೆಳಿಗ್ಗೆ ಮೊಬೈಲ್ ಕಳ್ಳನ ಮೇಲೆ ಫೈರಿಂಗ್

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೊಳೆ ಬೋಸಗಾ ಗ್ರಾಮದ ನಿವಾಸಿ ಅರ್ಜುನ್ ಮೇಲೆ ಪೊಲೀಸರು ಇಂದು ನಸುಕಿನ ಜಾವ ಪೈರಿಂಗ್ ನಡೆಸಿದ್ದಾರೆ.

Police fires on a goon in Kalaburagi

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬುರ್ ಬಳಿ ದರೋಡೆ ಹಾಗೂ ನಾಡ ಪಿಸ್ತೂಲ್ ಗಳನ್ನು ಸಾಗಾಟ ಮಾಡಲು‌ ಅರ್ಜುನ್ ಹೊಂಚು ಹಾಕಿ‌‌ರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು. ಇನ್ನು ಅರ್ಜುನ್, ಹೊಳೆ ಬೋಸಗಾ ಗ್ರಾಮದ ನಿವಾಸಿಯಾಗಿದ್ದು, ದರೋಡೆ ಹಾಗೂ ನಾಡ ಪಿಸ್ತೂಲು‌ ಮಾರಾಟ ಮಾಡುತ್ತಿದ್ದ.

Police fires on a goon in Kalaburagi

ಹೀಗಾಗಿ ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಇಂದು ಆತನ ಬಂಧನದ ವೇಳೆ ಪ್ರತಿರೋಧಿಸಿದ ಕಾರಣ ಅರ್ಜುನ್‌ಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬಂಧನದ ವೇಳೆ ಪೊಲೀಸ್ ಎಸ್.ಐ ಒಬ್ಬರಿಗೆ ಗಾಯವಾಗಿದೆ. ಪೊಲೀಸ್ ಹಾಗೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರ್ಜುನ್ ನಿಂದ ಮೂರು ಅಕ್ರಮ ನಾಡ ಪಿಸ್ತೂಲುಗಳು‌ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi Police fires on a goon Arjun who use to sell illegal wepons and he also involved in several robarry. while police go to arrest Arjun he fires on police so the police fires back. a SI also injured in shooting.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ