ಹುತಾತ್ಮ ಪಿಎಸ್‍ಐ ಮಲ್ಲಿಕಾರ್ಜುನ್ ಬಂಡೆ ಚಿಕ್ಕಮ್ಮನ ಹತ್ಯೆ
ಕಲಬುರಗಿ, ಏಪ್ರಿಲ್ 28 : ರೌಡಿ ಗುಂಡೇಟಿಗೆ ಹುತಾತ್ಮರಾಗಿದ್ದ ಕಲಬುರಗಿ ಜಿಲ್ಲೆಯ ಪಿಎಸ್ ಐ ಮಲ್ಲಿಕಾರ್ಜನ ಬಂಡೆ ಅವರ ಚಿಕ್ಕಮ್ಮನನ್ನು ಗುರುವಾರ ತಡರಾತ್ರಿ ಕಲಬುರಗಿಯ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದ ನಿವಾಸದಲ್ಲಿ ಹತ್ಯೆ ಮಾಡಿದ್ದಾರೆ.
ದುಷ್ಕರ್ಮಿಗಳ ತಂಡವೊಂದು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಬಂಡೆ ಅವರ ಚಿಕ್ಕಮ್ಮ ಸೋನಾಬಾಯಿ ಧೂಳಪ್ಪಾ (60) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಜಾತ್ರಾ ಮಹೋತ್ಸವಕ್ಕೆಂದು ಖಜೂರಿ ಗ್ರಾಮಕ್ಕೆ ಕುಟುಂಬ ಆಗಮಿಸಿತ್ತು. ಈ ವೇಳೆ ಮನೆಯಲ್ಲಿ ಮಲಗಿದ್ದಾಗ ಐದು ಜನರ ತಂಡವೊಂದು ನೀರು ಕೇಳುವ ನೆಪದಲ್ಲಿ ಏಕಾಏಕಿ ಮನೆಗೆ ನುಗ್ಗಿ ಬಡಿಗೆಯಿಂದ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಅದೇ ಕುಟುಂಬದ ಮೂವರು ಮಕ್ಕಳು ಸೇರಿದಂತೆ ಐದು ಜನರಿಗೆ ಗಂಭೀರ ಗಾಯವಾಗಿದೆ. ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಎನ್.ಶಶಿಕುಮಾರ್ ಭೇಟಿ ನೀಡಿದ್ದು, ಈ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications