ಅಮವಾಸ್ಯೆ ದಿನದಂದು ಕಲಬುರಗಿಯಲ್ಲಿ ಬರ್ಬರ ಹತ್ಯೆ
ಕಲಬುರಗಿ, ಅಕ್ಟೋಬರ್ 19 : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಬೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಹಿರೇಜೇವರ್ಗಿಯಲ್ಲಿ ಗುರುವಾರ ನಡೆದಿದೆ.
ಹಿರೇಜೇವರ್ಗಿ ಗ್ರಾಮದ ಭಗುಗೌಡ(65) ಕೊಲೆಯಾದ ವ್ಯಕ್ತಿ. ಬುಧವಾರ ರಾತ್ರಿ ಮಹಾರಾಷ್ಟ್ರದ ದುಧನಿಗೆ ಹೋಗಿ ಇಂದು ಬೈಕ್ ನಲ್ಲಿ ತಮ್ಮೂರಿಗೆ ತೆರಳುತ್ತಿದ್ದಾಗ ಬೈಕ್ ತಡೆದ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಗಡುಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಮವಾಸ್ಯೆ ದಿನದಂದು ಈ ಘಟನೆ ನಡೆದಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ನದಿಯಲ್ಲಿ ಮುಳುಗಿ ಇಬ್ಬರು ಸಾವು:ಕಾಗಿಣಾ ನದಿಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಸೇಡಂ ತಾಲ್ಲೂಕು ಮೀನಹಾಬಾಳ ಗ್ರಾಮದ ಭರತ್ (12) ಹಾಗೂ ಮಲ್ಲಿಕಾರ್ಜುನ (35) ಸಾವನ್ನಪ್ಪಿದ್ದಾರೆ.
ಭರತ್ ಕಾಲು ಜಾರಿ ನದಿಯಲ್ಲಿ ಮುಳುಗಿದ್ದ. ಆತನನ್ನು ರಕ್ಷಿಸಲು ಹೋದ ಭರತನ ಸೋದರಮಾವ ಮಲ್ಲಿಕಾರ್ಜುನ ಮೃತಪಟ್ಟದ್ದಾನೆ. ಮಳಖೇಡ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications