ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ದೇಶದ ನಂಬರ್ ಒನ್ ಕ್ರಿಮಿನಲ್ ಎಂದ ವಿಜಯಶಾಂತಿ

|
Google Oneindia Kannada News

Recommended Video

ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ನಟಿ, ತೆಲಂಗಾಣ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷೆ ವಿಜಯಶಾಂತಿ

ಕಲಬುರಗಿ, ಏಪ್ರಿಲ್ 20: ಪ್ರಧಾನಿ ನರೇಂದ್ರ ಮೋದಿ ಒಬ್ಬ ಭಯೋತ್ಪಾದಕರಂತೆ ಕಾಣಿಸುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ, ತೆಲಂಗಾಣ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷೆ ವಿಜಯಶಾಂತಿ, ಮತ್ತೊಮ್ಮೆ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸೇಡಂ ತಾಲ್ಲೂಕಿನ ಮುಧೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ಪರ ಪ್ರಚಾರ ನಡೆಸಿದ ವಿಜಯಶಾಂತಿ, ಮಾಯದ ಮಾತುಗಳನ್ನಾಡುವ ಮೋದಿ ಜನರನ್ನು ಮೋಸಗೊಳಿಸುತ್ತಾನೆ. ಆತ ನಮ್ಮ ದೇಶದ ನಂಬರ್ ಒನ್ ಕ್ರಿಮಿನಲ್. ಆತನಂತಹ ಕ್ರಿಮಿನಲ್‌ನನ್ನು ನಾನು ನೋಡಿಯೇ ಇಲ್ಲ ಎಂದು ಏಕವಚನದಿಂದ ವಾಗ್ದಾಳಿ ನಡೆಸಿದ್ದಾರೆ.

ಮೋದಿಗಿಂತ ದೇವೇಗೌಡರೇ ಉತ್ತಮ ಪ್ರಧಾನಿ: ಎಚ್ ಡಿ ಕುಮಾರಸ್ವಾಮಿ ಮೋದಿಗಿಂತ ದೇವೇಗೌಡರೇ ಉತ್ತಮ ಪ್ರಧಾನಿ: ಎಚ್ ಡಿ ಕುಮಾರಸ್ವಾಮಿ

ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಒಂದೇ ನಾಣ್ಯದ ಎರಡು ಮುಖಗಳು. ಮೋದಿ ದೊಡ್ಡ ಕಳ್ಳ, ಕೆಸಿಆರ್ ಚಿಕ್ಕ ಕಳ್ಳ ಎಂದು ಟೀಕಿಸಿದ್ದಾರೆ.

Lok Sabha elections 2019 kalburgi actress Congress vijayashanti narendra modi no 1 criminal of india

ಅದಾನಿ, ಅಂಬಾನಿ ಅವರಂತಹ ಬಂಡವಾಳಶಾಹಿಗಳ ಬೆನ್ನಿಗೆ ಮೋದಿ ನಿಂತಿದ್ದಾರೆ. ಅಚ್ಛೇದಿನ್ ಹೆಸರಿನಲ್ಲಿ ರೈತರು, ಕಾರ್ಮಿಕರನ್ನು ಮತ್ತು ಬಡವರನ್ನು ವಂಚಿಸುತ್ತಿದ್ದಾರೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರಂತಹವರು ಲೂಟಿ ಮಾಡುತ್ತಿದ್ದರೂ ಸುಮ್ಮನಿದ್ದಾರೆ ಎಂದು ಆರೋಪಿಸಿದ್ದಾರೆ.

ಕನ್ನಡಿಗ ಐಎಎಸ್ ಅಧಿಕಾರಿ ಅಮಾನತು: ಮೋದಿಯನ್ನು ಟೀಕಿಸಿದ ಸಿದ್ದರಾಮಯ್ಯಕನ್ನಡಿಗ ಐಎಎಸ್ ಅಧಿಕಾರಿ ಅಮಾನತು: ಮೋದಿಯನ್ನು ಟೀಕಿಸಿದ ಸಿದ್ದರಾಮಯ್ಯ

ಮೋದಿ ತಪ್ಪು ಮಾಡುತ್ತಿರುವುದು ನಮ್ಮ ಕಣ್ಣಿಗೇ ಕಾಣಿಸುತ್ತಿದೆ. ನೋಟು ರದ್ದತಿ, ಜಿಎಸ್‌ಟಿ ಜಾರಿಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿದೇಶದಿಂದ ಕಪ್ಪು ಹಣ ಬರಲಿಲ್ಲ. ಜಿಎಸ್‌ಟಿಯಿಂದಾಗಿ ವಂಶಜರ ಕಾಲದ ಚಿನ್ನಾಭರಣಕ್ಕೂ ಲೆಕ್ಕ ತೋರಿಸುವಂತಾಗಿದೆ. ಭವಿಷ್ಯದಲ್ಲಿ ತಿನ್ನುವ ತುತ್ತು ಅನ್ನಕ್ಕೂ ಲೆಕ್ಕ ಕೇಳಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

English summary
Lok Sabha elections 2019: Actress, Congress star campaigner Vijayashanti criticised Prime Minister Narenda Modi as India's No 1 criminal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X