• search
 • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮತ್ತೆ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ, ಇದು ಕೇವಲ ಊಹಾಪೋಹ'

|

ಕಲಬುರಗಿ, ಜೂ. 14: ಮತ್ತೆ ಲಾಕ್‌ಡೌನ್ ಜಾರಿ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ, ಇದು ಕೇವಲ ಊಹಾಪೋಹ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಾತಾಡಲಿದ್ದಾರೆ ಎಂದಿದ್ದಾರೆ.

   ತವರು ಜಿಲ್ಲೆಯ ಜನರಿಗೆ ಶಕ್ತಿ ತುಂಬಿದ ಸಚಿವ ಸುಧಾಕರ್..! | Dr K Sudhakar

   ಇದೆ ಕಾರಣಕ್ಕೆ ಮತ್ತೆ ಲಾಕ್‌ಡೌನ್ ಅನ್ನೋ ಊಹಾಪೋಹಗಳು ಎದ್ದಿವೆ. ಆದ್ರೆ ಮತ್ತೆ ಲಾಕ್‌ಡೌನ್ ಮಾಡೋದು ನನ್ನ ಪ್ರಕಾರ ಇಲ್ಲವೇ ಇಲ್ಲ. ಕ್ವಾರಂಟೈನ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇಲ್ಲ, ಸರಕಾರದ ಮಾರ್ಗಸೂಚಿಯಂತೆ ವ್ಯವಸ್ಥೆ ಮಾಡಲಾಗಿದೆ ಎನ್ನುವ ಮೂಲಕ ವರದಿ ಬರುವ ಮುನ್ನವೇ ಮನೆಗೆ ಕಳುಹಿಸುತ್ತಿರುವ ಸರ್ಕಾರದ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

   Fact Check: ಮತ್ತೊಂದು ಲಾಕ್ಡೌನ್? ಜೂನ್ 15ರಿಂದ ವಿಸ್ತರಣೆ?

   ರೋಗ ಲಕ್ಷಣ ಇಲ್ಲದಿದ್ದರೆ ಅವರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಯಿದೆ. ಇದನ್ನು WHO ಕೂಡ ಸ್ಪಷ್ಟಪಡಿಸಿದೆ. ಇದು ನಮ್ಮ ಅನುಭವಕ್ಕೂ ಬಂದಿದೆ ಎಂದು ಕಲಬುರಗಿಯ ಜಿಮ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ. ಸುಧಾಕರ್ ಹೇಳಿಕೆ ಕೊಟ್ಟಿದ್ದಾರೆ.

   English summary
   Medical Education Minister Dr Sudhakar said that the lockdown would not be implemented again in the state, Dr. Sudhakar clarified at the Kalaburagi. In addition, they make it clear that those who do not have Covid's symptoms they do not spread the infection.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X