ಕಲಬುರಗಿಯಲ್ಲಿ ಪೊಲೀಸ್ ಪೇದೆಗೆ ಕೊರೊನಾ ಸೋಂಕು
ಕಲಬುರಗಿ, ಮೇ 6: ಕಲಬುರಗಿಯ ಕೆಎಸ್ಆರ್ಪಿ ಪೊಲೀಸ್ ಪೇದೆಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತನ ಮನೆಯಲ್ಲಿ ಬಾಡಿಗೆಯಿದ್ದ ಕಾರಣ ಪೊಲೀಸ್ ಪೇದೆಗೆ ಕೊರೊನಾ ವೈರಸ್ ಕಾಣಿಸಿಕೊಂಡಿದೆ.
Recommended Video
ಕೊವಿಡ್ ಪರಿಹಾರದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ | Siddaramaiah | Oneindia Kannada
ಕೊರೊನಾ ವಾರಿಯರ್ಸ್ ಎಂದೇ ಹೇಳುವ ಪೊಲೀಸರಿಗೆ ಸೋಂಕು ತಗಲುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಕಲಬುರಗಿಯ ಗಾಜೀಪೂರ ಬಡಾವಣೆಯ ನಿವಾಸಿ 78 ವರ್ಷ ದ ವೃದ್ಧ P-610 ಗೆ ಎರಡು ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು.

ಈತನ ಮನೆಯಲ್ಲಿ ಬಾಡಿಗೆ ಇದ್ದ 52 ವರ್ಷದ ಕೆಎಸ್ಆರ್ಪಿ ಪೇದೆ P- 679 ಗೆ ಇಂದು ಸೋಂಕು ದೃಢವಾಗಿದೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 64 ಕ್ಕೆ ಏರಿಕೆ ಕಂಡಿದೆ.












Click it and Unblock the Notifications