Kalyana Ratha: ಕಲಬುರಗಿ-ಬೆಂಗಳೂರು ನಡುವೆ ಐಷಾರಾಮಿ ಕಲ್ಯಾಣ ರಥ ಬಸ್; ವೇಳಾಪಟ್ಟಿ

ಕಲಬುರಗಿ, ಜನವರಿ 31: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (KKRTC) ಕಲ್ಯಾಣ ರಥ ಎಂಬ ಹೆಸರಿನ ಐಷಾರಾಮಿ ಐಷಾರಾಮಿ ಸ್ಲೀಪರ್ ಬಸ್‌ ಸೇವೆ ಆರಂಭಿಸಿದೆ. ಈಗಾಗಲೇ ವಿಜಯಪುರ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿರುವ ಈ ಬಸ್‌ಗಳು ಕಲಬುರಗಿ ಮತ್ತು ಬೆಂಗಳೂರು ಮಾರ್ಗದಲ್ಲಿಯೂ ಸೇವೆ ನೀಡಲಿವೆ.

ಈ ಕಲ್ಯಾಣ ರಥ ಐಷಾರಾಮಿ ಸ್ಲೀಪರ್ ಬಸ್ಸುಗಳು ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸಲಿವೆ. ಈ ಎಸಿ ಸ್ಲೀಪರ್ ಬಸ್‌ಗಳು ಕಳೆದ ವರ್ಷ ಬಿಡುಗಡೆಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಅಂಬಾರಿ ಉತ್ಸವ ಬಸ್‌ಗಳಂತೆಯೇ ಇರಲಿವೆ.

KKRTC launches Kalyana Ratha Luxury bus between Kalaburagi- Bengaluru

ಕಲಬುರಗಿ-ಬೆಂಗಳೂರು ನಡುವೆ ಕಲ್ಯಾಣ ರಥ ಬಸ್

ಕಲಬುರಗಿ ವಿಭಾಗ - 1 ಕಲಬುರಗಿಯಿಂದ ಬೆಂಗಳೂರಿಗೆ ಸಂಚರಿಸುವ ನೂತನ 'ಕಲ್ಯಾಣ ರಥ' ವೋಲ್ವೋ ಮಲ್ಟಿ ಆಕ್ಸಲ್ ಎಸಿ ಸ್ಲೀಪರ್ ಕೋಚ್‌ ಬಸ್‌‌ಗಳಿಗೆ ಚಾಲನೆ ನೀಡಿದೆ. ಈಗಾಗಲೇ ಸಿಂಧನೂರು- ಬೆಂಗಳೂರು, ವಿಜಯಪುರ- ಬೆಂಗಳೂರು ಮಾರ್ಗಗಳಲ್ಲಿ ಈ ಬಸ್‌ಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದೇ ಉತ್ಸಾಹದಲ್ಲಿ ಕಲಬುರಗಿಯಿಂದಲೂ ಕಲ್ಯಾಣ ರಥ ಬಸ್ ಕಾರ್ಯ ನಿರ್ವಹಿಸಲಿವೆ.

ಕಲ್ಯಾಣ ರಥ ಬಸ್ ವೇಳಾಪಟ್ಟಿ

ಕಲ್ಯಾಣ ರಥ ಐಷಾರಾಮಿ ಎಸಿ ಬಸ್‌ಗಳು ಕಲಬುರಗಿ ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯ ನೀಡಲಿವೆ. ಯೂರೋಪಿಯನ್ ಮಾದರಿಯ ಅಂಬಾರಿ ಉತ್ಸವ ಬಸ್‌ಗಳಂತೆ ಇವುಗಳು ಕೂಡ ಐಷಾರಾಮಿ ಬಸ್‌ಗಳಾಗಿವೆ.

KKRTC launches Kalyana Ratha Luxury bus between Kalaburagi- Bengaluru

ಇನ್ನು, ಕಲಬುರಗಿಯಿಂದ ಬೆಂಗಳೂರು ನಡುವೆ ಕಲ್ಯಾಣ ರಥ ಬಸ್ ಸಂಜೆ 7.45ಕ್ಕೆ ಹೊರಡಲಿದೆ. ಅದು ಬೆಂಗಳೂರಿಗೆ ಬೆಳಗ್ಗೆ 7.30ಕ್ಕೆ ತಲುಪಲಿದೆ. ಇನ್ನು, ಬೆಂಗಳೂರಿನಿಂದ ರಾತ್ರಿ 8:00 ಗಂಟೆಗೆ ಬಸ್ ಹೊರಡಲಿದ್ದು, ಬೆಳಗ್ಗೆ 7.30 ಕಲಬುರಗಿ ತಲುಪಲಿದೆ. ರಾಯಚೂರು ಮತ್ತು ಮಂತ್ರಾಲಯ ಮಾರ್ಗವಾಗಿ ಈ ಬಸ್‌ಗಳು ಚಲಿಸಲಿವೆ. ಕೆಎಸ್ಆರ್‌ಟಿಸಿ ವೆಬ್ ಸೈಟ್ ಮೂಲಕ ಬಸ್ ಟಿಕೆಟ್ ಬುಕ್ ಮಾಡಬಹುದು.

ಕಲ್ಯಾಣ ರಥ ಐಷಾರಾಮಿ ಬಸ್ ವಿಶೇಷತೆ ಏನು?

ಕಲ್ಯಾಣ ರಥ ಬ್ಯಾಂಡ್‌ನ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಕ್ಲಾಸ್ ಬಸ್‌ಗಳು ಅಂಬಾರಿ ಉತ್ಸವ್ ಬಸ್‌ಗಳಂತೆಯೇ ಐಷಷಾರಾಮಿ ಬಸ್‌ಗಳು ಎಂದು ಹೇಳಲಾಗಿದ್ದರೂ ಕೂಡ, ಅವುಗಳ ವಿಶೇಷತೆಯನ್ನು ತಿಳಿಯೋಣ. ಈ ಕಲ್ಯಾಣ ರಥ 40 ಆಸನಗಳನ್ನು ಹೊಂದಿದೆ. ಬಿಎಸ್-6 ಇಂಜಿನ್ ಹೊಂದಿರುತ್ತದೆ.

ಈ ಬಸ್‌ಗಳಿಗೆ ವಿಶಿಷ್ಟ ಸಸ್ಪೆನ್ಸನ್‍ಗಳನ್ನು ಅಳವಡಿಸಲಾಗಿದ್ದು, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿರುತ್ತದೆ. ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ವ್ಯವಸ್ಥೆ ಇದೆ. ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್, ಲಗೇಜ್ ಇಡುವ ವ್ಯವಸ್ಥೆ ಇದೆ. ಕಲ್ಯಾಣ ರಥದ ಪ್ರತಿ ಬಸ್‌ನ ಬೆಲೆ 1.77 ಕೋಟಿ ರೂಪಾಯಿ. ಪ್ರತಿ ಬಸ್ ಅನ್ನು 1.77 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+