Get Updates
Get notified of breaking news, exclusive insights, and must-see stories!

ಮೇ 23ರ ನಂತರ ಕಾಂಗ್ರೆಸ್ 4 ಹೋಳು: ಬಾಬುರಾವ್ ಚಿಂಚನಸೂರ್

ಚಿಂಚೋಳಿ ಮೇ 12: ಮೇ 23 ರ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದ್ದು, ದಿನೇಶ್ ಗುಂಡುರಾವ್, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್ ಅವರ ನೇತೃತ್ವದಲ್ಲಿ ನಾಲ್ಕು ಹೋಳಾಗಲಿದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಚುನಾವಣಾ ಪ್ರಚಾರ ಪ್ರಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮುಖಂಡರುಗಳ ಮೇಲೆ ವಾಗ್ದಾಳಿ ನಡೆಸಿದರು. ಮಾಲಿಕಯ್ಯ ಗುತ್ತೇದಾರ್ ಹೇಳಿದಂತೆ 23 ನೇ ತಾರೀಕು ಭೂಕಂಪ ಆಗೋದು ಗ್ಯಾರಂಟಿ. ಯಡಿಯೂರಪ್ಪನವರು ಸಿಎಂ ಆಗಿಲ್ಲ ಅಂತಾ ಇಡೀ ರಾಜ್ಯದ ಜನತೆ ಕಣ್ಣೀರು ಸುರಿಸುತ್ತಿದ್ದಾರೆ. ಸೂರ್ಯ ಚಂದ್ರರಷ್ಟೇ ಸತ್ಯವಾಗಿ ಯಡಿಯೂರಪ್ಪನವರು ಸಿಎಂ ಆಗುವುದು ಸತ್ಯ. ಮೇ 20 ರ ನಂತರ ಕಾಂಗ್ರೆಸ್ ನಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದ್ದು, 20 ಕ್ಕೂ ಹೆಚ್ಚು ಶಾಸಕರು ಅವರಾಗಿಯೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ದಿನೇಶ್ ಗುಂಡೂರಾವ್, ಡಿಕೆಶಿ, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರ ನೇತೃತ್ವದಲ್ಲಿ ನಾಲ್ಕೈದು ಗುಂಪುಗಳಾಗಿ ಹೋಳಾಗಲಿದೆ. ಸಮ್ಮಿಶ್ರ ಸರಕಾರದ ಈ ಸಂಸಾರ ಬಹಳ ದಿನ ನಡೆಯುವುದಿಲ್ಲ ಎಂದ ಅವರು ಸ್ವಲ್ಪ ದಿನದಲ್ಲೇ ವಿಚ್ಚೇದನ ಆಗಲಿದೆ ಎಂದು ಭವಿಷ್ಯ ನುಡಿದರು.

Karnataka Congress will be split in to four parts : Baburao Chinchansur

ಉಮೇಶ್ ಜಾಧವ್ ಕಾಂಗ್ರೆಸ್ ಗೆ ವಿಷದ ಇಂಜೆಕ್ಷನ್ ಕೊಟ್ಟಿದ್ದಾರೆ ಎನ್ನುವ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಾಕ್ಟರ್ ದೇವರು ಇದ್ದ ಹಾಗೆ ಇಂತಹ ಹೇಳಿಕೆ ಖರ್ಗೆ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ ಎಂದರು.

ಚಿಂಚೋಳಿ ಉಪಚುನಾವಣೆಯನ್ನು ಗೆಲ್ಲಲೇ ಬೇಕು ಎನ್ನುವ ಪಣ ತೊಟ್ಟಿರುವ ಬಿಜೆಪಿ ನಾಯಕರು ಕ್ಷೇತ್ರದಲ್ಲಿ ತಮ್ಮ ಬಿರುಸಿನ ಪ್ರಚಾರ ಕಾರ್ಯವನ್ನು ಮುಂದುವರೆಸಿದ್ದಾರೆ. ಕ್ಷೇತ್ರದ ಉಸ್ತುವಾರಿಗಳಾದ ಮಾಜಿ ಸಚಿವ ವಿ ಸೋಮಣ್ಣ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಜೊತೆಗೂಡಿ ಸೂಗೂರು ಗ್ರಾಮದಲ್ಲಿ ಸುನಿಲ ವಲ್ಲಾಪುರೆಜಿ, ಅಮರನಾಥ ಪಾಟೀಲ ಜೊತೆಗೂಡಿ ಪ್ರಚಾರ ನಡೆಸಿದರು.

ಮತ್ತೊಂದೆಡೆ, ಮಾಜಿ ಸಚಿವ ಶೋಭಾ ಕರಂದ್ಲಾಜೆ ಅವರು ಕೂಡ್ಲೀ ಗ್ರಾಮದಿಂದ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದರು. ಸಶಕ್ತ ದೇಶ ಹಾಗೂ ಸಶಕ್ತ ಕರ್ನಾಟಕಕ್ಕೆ ಬಿಜೆಪಿ ಗೆ ಬೆಂಬಲಿಸುವಂತೆ ಮನವಿ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+