Kalaburagi Lok Sabha Election 2024 Results LIVE: ತೊಗರಿ ಕಣಜ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭ
ಕಲಬುರಗಿ ಜೂನ್ 4: ಕಲಬುರಗಿ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ (ಜೂನ್ 4) ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮತ ಎಣಿಕೆ ಮಾಡಲಾಗುತ್ತದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಗುಲ್ಬರ್ಗಾ ಮೀಸಲು ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶತಪ್ರಯತ್ನದ ಹಿನ್ನೆಲೆಯಲ್ಲಿ ಇಲ್ಲಿ ಬಿಜೆಪಿಯ ಡಾ ಉಮೇಶ್ ಜಾಧವ್ ಗೆಲಯವಿನ ನಗೆ ಬೀರಿದ್ದರು. ಆದರೀಗ ಐದು ವರ್ಷ ಕಳೆದಿದೆ. ಮೊದಲ ಬಾರಿ ಸೋಲಿನ ರುಚಿ ನೋಡಿದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಈಗ ತಮ್ಮ ಅಳಿಯನ ಮೂಲಕ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ತರಲು ಪ್ರಯತ್ನ ನಡೆಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾಗಿರುವುದರಿಂದ ಕಲಬುರಗಿ ಲೋಕಸಭಾ ಕ್ಷೇತ್ರ ಭಾರೀ ಮಹತ್ವ ಪಡೆದುಕೊಂಡಿದೆ. ಕಳೆದ ಬಾರಿ ಸೋಲು ಕಂಡಿದ್ದ ಕಾಂಗ್ರೆಸ್ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಇನ್ನೂ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಡಾ. ಉಮೇಶ್ ಜಾಧವ್ ಅವರು ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಎಂಟು ವಿಧಾನಸಭಾ ಕ್ಷೇತ್ರಗಳು:-
ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಗುಲಬರ್ಗಾ ದಕ್ಷಿಣ, ಗುಲಬರ್ಗಾ ಉತ್ತರ, ಗುಲಬರ್ಗಾ ಗ್ರಾಮೀಣ, ಸೇಡಂ ಮತ್ತು ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನ ಕ್ಷೇತ್ರಗಳು ಬರಲಿವೆ. ಆದರೆ ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳು ಬೀದರ್ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್ ಶಾಸಕರೇ ಪ್ರತಿನಿಧಿಸುತ್ತಿದ್ದಾರೆ. ತಲಾ ಒಂದೊಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿದ್ದಾರೆ.
ಗೆಲುವಿನ ವಿಶ್ವಾಸದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ:-
ಅಂದಹಾಗೆ ರಾಧಾಕೃಷ್ಣ ದೊಡ್ಡಮನಿ ಅವರಿಗೆ ರಾಜಕಾರಣವೇನೂ ಹೊಸದಲ್ಲ. ಈ ಹಿಂದೆ ಖರ್ಗೆ ಅವರ ರಾಜಕೀಯ ಬದುಕಿಗೆ ಬೆನ್ನೆಲುಬಾಗಿ ಪರದೆಯ ಹಿಂದೆ ನಿಂತು ತಂತ್ರಗಾರಿಕೆ ರೂಪಿಸಿದ್ದ ಅವರು ಇದೇ ಮೊದಲ ಬಾರಿ ನೇರವಾಗಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಚಾರ ಕೂಡ ಮಾಡಿದ್ದಾರೆ.
ಎಸ್‌ಸಿ-ಮೀಸಲು ಸ್ಥಾನ ಗೆಲ್ಲಲು ಖರ್ಗೆ ಕಸರತ್ತು
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ಈ ಎಸ್‌ಸಿ-ಮೀಸಲಾತಿ ಸ್ಥಾನವನ್ನು ಗೆಲ್ಲಲು ಅವರು ತಮ್ಮ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಕಲಬುರಗಿ ಕ್ಷೇತ್ರ ಖರ್ಗೆ ಅವರ ಕರ್ಮ ಭೂಮಿಯಾಗಿದ್ದು 10 ಬಾರಿ ವಿಧಾನಸಭೆಗೆ ಮತ್ತು ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಸೋಲಿಲ್ಲದ ಸರದಾರನನ್ನು ಸೋಲಿಸಿದ ಉಮೆಶ್
ಇನ್ನೂ ಬಿಜೆಪಿಯಿಂದ 2019ರ ಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಹಾಲಿ ಸಂಸದ ಉಮೆಶ್ ಜಾಧವ್ ಅವರನ್ನು ಗುಲ್ಬರ್ಗಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಮತ್ತೆ ಕಣಕ್ಕಿಳಿಸಿದೆ. ಕ್ಷೇತ್ರ ಗೆಲ್ಲುವುದಕ್ಕಾಗಿ ಬಿಜೆಪಿ ತನ್ನೆಲ್ಲಾ ತಂತ್ರಗಳನ್ನು ಬಳಸಿ ಚುನಾವಣೆಯನ್ನು ದಾಟಿ ಬಂದಿದೆ. ಮಾರ್ಚ್ 16ರಿಂದ ಕರ್ನಾಟಕದಲ್ಲಿ ತನ್ನ ಪ್ರಚಾರ ಆರಂಭಿಸಿದ ಕೇಸರಿ ಪಕ್ಷ ಕಲಬುರಗಿಯಲ್ಲೂ ಅಭ್ಯರ್ಥಿಯೊಂದಿಗೆ ಸಾಕಷ್ಟು ಪ್ರಚಾರ ಮಾಡಿದೆ.
ಬೆಂಗಳೂರು ಮತ್ತು ಕಲಬುರಗಿ ನಡುವೆ ರೈಲು
ಪ್ರಧಾನಿ ಮೋದಿ ಕಳೆದ ವರ್ಷ ಜಿಲ್ಲೆಯಲ್ಲಿ ಮೆಗಾ ಜವಳಿ ಪಾರ್ಕ್ ಮತ್ತು ಇತ್ತೀಚೆಗೆ ಬೆಂಗಳೂರು ಮತ್ತು ಕಲಬುರಗಿ ನಡುವೆ ಎರಡು ನೇರ ರೈಲುಗಳನ್ನು ಪ್ರಾರಂಭಿಸಿದರು. ಮೋದಿ ಅವರ ಕಾರ್ಯಗಳಿಗಾಗಿ ಮತ ಚಲಾಯಿಸುವಂತೆ ಜಾಧವ್ ಕೂಡ ಸಾಕಷ್ಟು ಪ್ರಚಾರ ಮಾಡಿದ್ದಾರೆ. ಮತದಾರರು ಕೈಹಿಡಿಯುವ ನಿರೀಕ್ಷೆಯಲ್ಲಿ ಇದ್ದಾರೆ.
ಕಲಬುರಗಿ ಕ್ಷೇತ್ರ ಪರಿಚಯ
ಕಲಬುರಗಿ ಎಂದು ಹೆಸರು ಹೊಂದಿರುವ ಈ ಕ್ಷೇತ್ರ ಗುಲ್ವರ್ಗಾ ಲೋಕಸಭಾ ಕ್ಷೇತ್ರವಾಗಿಯೇ ಗುರುತಿಸಿಕೊಂಡಿದೆ. ಕಲಬುರಗಿಗೆ ತೊಗರಿ ಕಣಜ ಎಂಬ ಹೆಸರೂ ಇದೆ. ಕೃಷ್ಣಾ ಮತ್ತು ಭೀಮಾ ನದಿಗಳು ಇಲ್ಲಿನ ಕೃಷಿ ಮತ್ತು ಕುಡಿಯುವ ನೀರಿಗೆ ಇರುವ ಮೂಲಗಳಾಗಿವೆ.
ಬಹುಮನಿ ಕೋಟೆ, ಬುದ್ಧ ವಿಹಾರ, ರಾಮತೀರ್ಥ ದೇವಸ್ಥಾನ, ಖ್ವಾಜಾ ಬಂದೇ ನವಾಜ ದುರ್ಗಾ ಮುಂತಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ರಾಷ್ಟ್ರಕೂಟರು, ಚಾಲುಕ್ಯರು, ದೇವಗಿರಿಯ ಯಾದವರು, ದ್ವಾರಸಮುದ್ರದ ಹೊಯ್ಸಳರು, ಮೊಘಲರು ಹೀಗೆ ಇತಿಹಾಸದಲ್ಲಿ ಅನೇಕ ರಾಜ್ಯದ ಆಶ್ವಿಕೆಗೆ ಒಳಪಟ್ಟ ಗುಲ್ಬರ್ಗಾ, ಸ್ವಾತಂತ್ರ್ಯ ನಂತರವೂ ಹೈದರಾಬಾದ್ ಸಂಸ್ಥಾನದ ಅಧೀನದಲ್ಲಿತ್ತು. 1948ರ ಸೆಪ್ಟೆಂಬರ್‌ನಲ್ಲಿ ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾಯಿತು.
ಗುಲ್ಬರ್ಗಾ ಲೋಕಸಭೆ ಚುನಾವಣೆ ಹಾದಿ
ಕಲಬುರಗಿ ಲೋಕಸಭಾ ಕ್ಷೇತ್ರ 1951ರ ಮೊದಲ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ರಚನೆಯಾಗಿತ್ತು. ಇಲ್ಲಿನ ಕಾಂಗ್ರೆಸ್ ಪಾರುಪತ್ಯಕ್ಕೆ ಬ್ರೇಕ್ ಹಾಕಿದ್ದು ಜನತಾದಳದಿಂದ 1996ರಲ್ಲಿ ಸ್ಪರ್ಧಿಸಿದ್ದ ಖಮರುಲ್ಲ ಇಸ್ಲಾಂ. ಇನ್ನೂ 1998ರಲ್ಲಿ ಬಸವರಾಜ ಪಾಟೀಲ್ ಸೇಡಂ ಬಿಜೆಪಿಗೆ ಇಲ್ಲಿ ಚೊಚ್ಚಲ ಗೆಲುವು ತಂದುಕೊಟ್ಟರು.
18 ಚುನಾವಣೆಗಳಲ್ಲಿ 15ರಲ್ಲಿ ಕಾಂಗ್ರೆಸ್ ಜಯ
ಬಳಿಕ 2019ರಲ್ಲಿ ಮತ್ತೆ ಉಮೆಶ್ ಜಾಧವ್ ಬಿಜೆಪಿಗೆ ಗೆಲುವು ತಂದುಕೊಟ್ಟರು. ಈ ಮೂರು ನಿದರ್ಶನಗಳನ್ನು ಹೊರತುಪಡಿಸಿ ಕಲಬುರಗಿಯಲ್ಲಿ ಉಳಿದ ಯಾವ ಚುನಾವಣೆಯಲ್ಲಿಯೂ ಬೇರೆ ಪಕ್ಷ ತನ್ನ ಗುರುತು ಮೂಡಿಸಲು ಸಾಧ್ಯವಾಗಿಲ್ಲ. ಒಟ್ಟು 18 ಚುನಾವಣೆಗಳಲ್ಲಿ 15ರಲ್ಲಿ ಕಾಂಗ್ರೆಸ್ ಜಯ ಸಾಧಿಸಿ ಕಲಬುರಗಿಯನ್ನು ತನ್ನ ಭದ್ರಕೋಟೆ ಮಾಡಿಕೊಂಡಿದೆ.
ಯಾರು ಗೆಲ್ಲುವ ಸಾಧ್ಯತೆ?
2019 ರ ಲೋಕಸಭಾ ಚುನಾವಣೆಯ ಆ ಆಘಾತಕಾರಿ ಸೋಲು ಮಲ್ಲಿಖಾರ್ಜುನ ಖರ್ಗೆ ಅವರ ಸೋಲಿಲ್ಲದ ಸರದಾರ ಎಂಬ ಬಿರುದನ್ನು ಕಸಿದುಕೊಂಡಿದೆ. ತಮ್ಮ ಸ್ಥಾನ ಮತ್ತು ಪ್ರತಿಷ್ಠಿಯನ್ನು ಮರಳಿ ಪಡೆಯಲು ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಿದ್ದಾರೆ. ಕಳೆದ ಬಾರಿ ಬಿಜೆಪಿಗೆ ಮತ ಚಲಾಯಿಸಿದ್ದ ಮತದಾರರು ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಮೆಚ್ಚಿ ಈ ಬಾರಿ ರಾಧಾಕೃಷ್ಣ ದೊಡ್ಡಮನಿ ಅವರ ಕೈ ಹಿಡಿಯುವ ಸಾಧ್ಯತೆಗಳು ದಟ್ಟವಾಗಿವೆ.
ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ
ಇನ್ನೂ ಇತ್ತ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಉಮೇಶ್ ಜಾಧವ್ ಬಿಜೆಪಿಗೆ ಗೆಲುವು ತಂದು ಕೊಟ್ಟಿದ್ದರು. ಈ ಬಾರಿಯೂ ಅದೇ ವಿಶ್ವಾಸದಿಂದ ಹೈಕಮಾಂಡ್ ಉಮೇಶ್ ಜಾಧವ್ ಅವರನ್ನು ಕಣಕ್ಕೆ ಇಳಿಸಿದ್ದು ಮತದಾರರು ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸದಲ್ಲಿ ಇದೆ.
ಕಲಬುರಗಿಯಲ್ಲಿ ಮತ ಎಣಿಕೆ ಆರಂಭ
ಕಲಬುರಗಿಯಲ್ಲಿ ಮತ ಎಣಿಕೆ ಆರಂಭವಾಗಿದೆ. ಸಕಲ ಸಿದ್ದತೆ ಮೂಲಕ ಸಿಬ್ಬಂದಿಗಳು ಮತ ಎಣಿಕೆಯನ್ನು ಶುರು ಮಾಡಿದ್ದಾರೆ. ಸಿಸಿಕ್ಯಾಮರಾ ಕಣ್ಗಾವಲಿನಲ್ಲಿ ಮತ ಎಣಿಕೆ ಆರಂಭವಾಗಿದ್ದು ಸಂಜೆವರೆಗೂ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನದ ಹೊತ್ತಿಗೆ ಗೆಲುವಿನ ಚಿತ್ರಣ ಗೊತ್ತಾಗಲಿದೆ.
ಕಲಬುರಗಿಯಲ್ಲಿ ಕಾಂಗ್ರೆಸ್ ಮುನ್ನಡೆ
ಕಲಬುರಗಿಯಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ್ ಖರ್ಗೆ ಅವರ ಅಳಿಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮುನ್ನಡೆ ಸಾಧಿಸಿದ್ದಾರೆ. 'ವೋಟ್ ಹಾಕಿ ಇಲ್ಲ ಮಣ್ಣಾಕಲು ಬನ್ನಿ' ಎಂದು ಭಾವುಕ ಮಾತನಾಡಿದ್ದ ಖರ್ಗೆ ಅವರನ್ನು ಮತದಾರರು ಕಲಬುರಗಿಯಲ್ಲಿ ಕೈ ಹಿಡಿದು ನಡೆಸಲಿದ್ದಾರೆ ಎನ್ನುವ ವಿಶ್ವಾಸ ನಿಜವಾದಂತೆ ಕಾಣುತ್ತಿದೆ. ಈವರೆಗೆ ರಾಧಾಕೃಷ್ಣ ಅವರು ಮುನ್ನಡೆ ಸಾಧಿಸಿದ್ದು ಸಂಜೆ ವೇಳೆಗೆ ಸಂಪೂರ್ಣ ಫಲಿತಾಂಶ ಗೊತ್ತಾಗಲಿದೆ.
ಕಲಬುರಗಿಯಲ್ಲಿ ರಾಧಾಕೃಷ್ಣ ದೊಡ್ಡಮನಿ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ 2,73,291 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ 2,59,677 ಮತಗಳನ್ನು ಪಡೆದಿದ್ದಾರೆ ಇನ್ನೂ ಪಕ್ಷೇತರ ಅಭ್ಯರ್ಥಿ ಹುಚ್ಚೇಶ್ವರ 3050 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿ ಇದ್ದಾರೆ. ಮತ ಎಣಿಕೆ ಕಾರ್ಯ ಮುಂದುವರೆದಿದ್ದು ಸಂಜೆಗೆ ಅಂತಿಮ ಫಲಿತಾಂಶ ಬಿಡುಗಡೆಯಾಗಲಿದೆ. ಆದರೆ ಮೇಲ್ನೋಟಕ್ಕೆ ಕಲಬುರಗಿಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications