ಕರ್ನಾಟಕಕ್ಕೆ ಕಲಬುರಗಿ ಭಯ, 6 ಸಾವಿರ ಫಲಿತಾಂಶ ಬರಬೇಕಿದೆ!

ಕಲಬುರಗಿ, ಜೂನ್ 18: ಕರ್ನಾಟಕದಲ್ಲಿ ಬುಧವಾರ 204 ಕೊರೊನಾ ವೈರಸ್ ಕೇಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7734ಕ್ಕೆ ಏರಿಕೆಯಾಗಿದೆ. ಈವರೆಗೂ 4804 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಇನ್ನೂ 2824 ಕೇಸ್ ಸಕ್ರಿಯವಾಗಿದೆ.

Recommended Video

      Maharashtra govt inks MoUs worth Rs 5,000 cr with three Chinese firms | Oneindia Kannada

      ಈ ಪೈಕಿ ಕಲಬುರಗಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ. ಬೆಂಗಳೂರು, ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ 800ರ ಗಡಿ ದಾಟಿದೆ.

      ಸದ್ಯದ ವರದಿ ಪ್ರಕಾರ, ಕರ್ನಾಟಕಕ್ಕೆ ಕಲಬುರಗಿ ಜಿಲ್ಲೆಯ ಆತಂಕ ಹೆಚ್ಚು ಕಾಡುತ್ತಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಕೇಸ್ ಹೊಂದಿರುವ ಕಲಬುರಗಿ ಜಿಲ್ಲೆಯಲ್ಲಿ ಇನ್ನೂ 6 ಸಾವಿರ ಜನರ ಫಲಿತಾಂಶ ಬರಬೇಕಿದೆ. ಇದು ಸಹಜವಾಗಿ ರಾಜ್ಯಕ್ಕೆ ತಲೆನೋವಾಗಿ ಪರಿಣಿಮಿಸಿದೆ. ಮುಂದೆ ಓದಿ...

      6566 ವರದಿಯ ಫಲಿತಾಂಶ ಬರಬೇಕಿದೆ

      6566 ವರದಿಯ ಫಲಿತಾಂಶ ಬರಬೇಕಿದೆ

      ಕಲಬುರಗಿಯಲ್ಲಿ ಈವರೆಗೂ ಒಟ್ಟು 1026 ಜನರಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ 574 ಜನರು ಗುಣಮುಖರಾಗಿದ್ದು, 442 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಆತಂಕ ಪಡುವ ವಿಚಾರ ಅಂದ್ರೆ ಕಲಬುರಗಿಯಲ್ಲಿ ಇನ್ನೂ 6566 ಜನರ ಕೊರೊನಾ ಪರೀಕ್ಷೆಯ ವರದಿ ಬರಬೇಕಿದೆ. ಇಷ್ಟು ಜನರ ಪೈಕಿ ಎಷ್ಟು ಜನರಿಗೆ ಸೋಂಕು ತಗುಲಿರಬಹುದು ಎಂಬ ಭಯ ಕಾಡುತ್ತಿದೆ.

      ಎಷ್ಟು ಮಾದರಿ ಸಂಗ್ರಹಿಸಲಾಗಿದೆ?

      ಎಷ್ಟು ಮಾದರಿ ಸಂಗ್ರಹಿಸಲಾಗಿದೆ?

      ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 46231 ಜನರು ಮಾದರಿ ಸಂಗ್ರಹಿಸಲಾಗಿದೆ. ಅದರಲ್ಲಿ 1026 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 38639 ಜನರು ವರದಿ ನೆಗಿಟಿವ್ ಬಂದಿದೆ. ಇದರಲ್ಲಿ ಇನ್ನೂ 6566 ಜನರ ಫಲಿತಾಂಶ ಹೊರಬೀಳಬೇಕಿದೆ.

      ಎಷ್ಟು ಕಂಟೈನ್ ಮೆಂಟ್ ಜೋನ್ ಇದೆ?

      ಎಷ್ಟು ಕಂಟೈನ್ ಮೆಂಟ್ ಜೋನ್ ಇದೆ?

      ಕಲಬುರಗಿಯಲ್ಲಿ ಒಟ್ಟು 188 ಕಂಟೈನ್‌ ಮೆಂಟ್‌ ಜೋನ್‌ಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ಈಗ 14 ಪ್ರದೇಶಗಳನ್ನು ಡೇಂಜರ್ ಜೋನ್ ಗುಂಪಿನಿಂದ ತೆಗೆದು ಹಾಕಲಾಗಿದೆ. ಪ್ರಸ್ತುತ 162 ಪ್ರದೇಶಗಳನ್ನು ಕಲಬುರಗಿಯಲ್ಲಿ ಕಂಟೈನ್‌ ಮೆಂಟ್ ಪ್ರದೇಶಗಳಾಗಿ ಉಳಿಸಿಕೊಳ್ಳಲಾಗಿದೆ.

      19 ಹೊಸ ಕೇಸ್ ಪತ್ತೆ

      19 ಹೊಸ ಕೇಸ್ ಪತ್ತೆ

      ಜೂನ್ 17 ರಂದು ಕಲಬುರಗಿಯಲ್ಲಿ 19 ಜನರಿಗೆ ಕೊರೊನಾ ತಗುಲಿರುವುದು ದೃಢವಾಗಿದೆ. ನಿನ್ನೆ ಒಂದೇ ದಿನ 100 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದುವರೆಗೂ ಕಲಬುರಗಿಯಲ್ಲಿ ಹತ್ತು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮೊದಲ ಕೊವಿಡ್ ಸಾವು ಸಂಭವಿಸಿದ್ದು ಇದೇ ಜಿಲ್ಲೆಯಲ್ಲಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+