ಕಲಬುರಗಿಯಲ್ಲಿ ಹಳಿ ತಪ್ಪಿದ ಖಾಲಿ ಗೂಡ್ಸ್ ರೈಲು
ಕಲಬುರಗಿ, ಜನವರಿ 17: ಇಲ್ಲಿನ ಚಿತ್ತಾಪುರ ತಾಲೂಕಿನ ವಾಡಿ ರೈಲ್ವೇ ಜಂಕ್ಷನ್‌ನಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ನಡೆದಿದೆ.
ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿಯಿಂದ ಕೆಳಕ್ಕೆ ಇಳಿದಿವೆ. ಹಳ್ಳಿ ತಪ್ಪಿದ ರಭಸಕ್ಕೆ ರೈಲಿನ ಚಕ್ರಗಳು ತಿರುಚಿವೆ. ಆದರೆ ಈ ವೇಳೆ ರೈಲು ಖಾಲಿಯಾಗಿತ್ತು. ಹೀಗಾಗಿ ಹೆಚ್ಚಿನ ಅಪಾಯಗಳು ಸಂಭವಿಸಿಲ್ಲ. ಇನ್ನು ಘಟನೆಯಲ್ಲಿ ಯಾರಿಗೂ ಯಾವುದೇ ತೊಂದರೆಗಳಾಗಿಲ್ಲ.

ವಾಡಿ ಜಂಕ್ಷನ್‌ನಿಂದ ಗೂಡ್ಸ್ ರೈಲು ಎಸಿಸಿ ಸಿಮೆಂಟ್ ಕಾರ್ಖಾನೆಯೊಳಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. 30 ಬೋಗಿಗಳಿದ್ದ ಗೂಡ್ಸ್ ರೈಲು ಸಿಮೆಂಟ್ ತುಂಬಿಸಿಕೊಳ್ಳಲು ಹಿಮ್ಮುಖವಾಗಿ ಚಲಿಸುತ್ತಿತ್ತು. ಈ ಸಂದರ್ಭ ಎರಡು ಬೋಗಿಗಳು ಹಳಿ ತಪ್ಪಿವೆ.

ರೈಲು ಹಳಿ ತಪ್ಪಿದ್ದರಿಂದ ವಾಡಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಈ ಸಂದರ್ಭದಲ್ಲಿ
ಪದೇ ಪದೇ ರೈಲು ಅಪಘಾತವಾಗುತ್ತಿರುವುದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರೈಲು ಹಳಿ ತಪ್ಪಿದ ಸಂಬಂಧ ವಾಡಿ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications