ಕಲಬುರಗಿಯಲ್ಲಿ ಡಬ್ಬಲ್ ಮರ್ಡರ್, ತಾಯಿ-ಮಗಳ ಹತ್ಯೆ

Posted By:
Subscribe to Oneindia Kannada

ಕಲಬುರಗಿ, ಸೆ. 19: ವಿಚಾರಣಾಧೀನ ಕೈದಿಯಾಗಿದ್ದ ಕೊಲೆ ಆರೋಪಿಯೊಬ್ಬ ಜಾಮೀನಿನ ಮೇಲೆ ಬಿಡುಗಡೆಗೊಂಡು, ಡಬ್ಬಲ್ ಮರ್ಡರ್ ಮಾಡಿ, ಪೊಲೀಸರಿಗೆ ವಿಷಯ ತಿಳಿಸಿದ ವಿಕ್ಷಿಪ್ತ ಘಟನೆ ಕಳೆದ ರಾತ್ರಿ ನಡೆದಿದೆ.

40 ವರ್ಷ ವಯಸ್ಸಿನ ಆನಂದ್ ಎಂಬ ವ್ಯಕ್ತಿ ಕಳೆದ ರಾತ್ರಿ ಕಲಬುರಗಿಯ ಜನನಿಬಿಡ ಪ್ರದೇಶದಲ್ಲೇ ಇರುವ ತನ್ನ ಮನೆ ಪ್ರವೇಶಿಸಿದ್ದಾನೆ. ಮನೆಯಲ್ಲಿದ್ದ 65 ವರ್ಷ ವಯಸ್ಸಿನ ತಾಯಿ ಗಂಗಮ್ಮ ಹಾಗೂ 45 ವರ್ಷ ವಯಸ್ಸಿನ ಹಿರಿಯ ಸೋದರಿ ಭೀಮಾಭಾಯಿ ಅವರನ್ನು ಕೊಂದು ಹಾಕಿದ್ದಾನೆ.

Double murder in Brahmpur Kalaburagi

ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಮೂರು ದಿನಗಳಲ್ಲೇ ಮತ್ತೊಮ್ಮೆ ಕೊಲೆ ಮಾಡಿ ಜೈಲು ಸೇರಿದ್ದಾನೆ. ಈ ಜೋಡಿ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ, ಕುಡಿದು ಮನೆಗೆ ಬಂದ ಆನಂದ್ ತನ್ನ ತಾಯಿಯ ಬಳಿ 500 ರು ನೀಡುವಂತೆ ಕೇಳಿದ್ದಾನೆ. ಆದರೆ, ಇವನ ಬೇಡಿಕೆಗೆ ತಾಯಿ ಹಾಗೂ ಅಕ್ಕ ಸ್ಪಂದಿಸಿಲ್ಲ. ಇದರಿಂದ ಸಿಟ್ಟಿಗೆದ್ದ ಆನಂದ ಇಬ್ಬರ
ಲೆ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಿದ್ದಾನೆ.

ಕುಡಿತ ಮತ್ತಿನಲ್ಲಿ ಈ ಕೃತ್ಯ ಎಸಗಿದ ಆನಮ್ದ್ ನಂತರ ಬ್ರಹ್ಮಪುರದ ವಡ್ಡರ್ ಗಲ್ಲಿಯಲ್ಲಿರುವ ತನ್ನ ಮನೆಯ ನೆರ ಮನೆಯವರನ್ನು ಕರೆದು ವಿಷಯ ತಿಳಿಸಿದ್ದಾನೆ. ಪೊಲೀಸರಿಗೆ ವಿಷಯ ಮುಟ್ಟಿಸಿ ಎಂದಿದ್ದಾನೆ. ಪೊಲೀಸರು ಬಂದು ನೋಡಿದಾಗ ಮೂಲೆಯಲ್ಲಿ ಆನಂದ ಸುಮ್ಮನೆ ಕುಳಿತಿರುವುದು ಕಂಡು ಬಂದಿದೆ.

ಬ್ರಹ್ಮಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2013ರಲ್ಲಿ ಸ್ನೇಹಿತನೊಬ್ಬನನ್ನು ಕೊಲೆಗೈದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆನಂದ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ. ಕುಡಿದ ಮತ್ತಿನಲ್ಲಿ ಮತ್ತೆ ಕೊಲೆಗೈದು ಜೈಲು ಸೇರಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 40-year-old person facing charges of murder and released on bail only a couple of days ago allegedly killed his aged mother and sister in a thickly populated area in Kalaburagi city late last night.
Please Wait while comments are loading...