ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರ ಕೃಪೆ ಇದ್ದರೆ ಮುಖ್ಯಮಂತ್ರಿಯಾಗುವೆ ಎಂದ ಡಿಕೆ ಶಿವಕುಮಾರ್

|
Google Oneindia Kannada News

Recommended Video

ಭಗವಂತನ ಕೃಪೆ ಇದ್ದಾರೆ ಸಿ ಎಂ ಆಗ್ತೀನಿ ಎಂದ ಡಿ ಕೆ ಶಿವಕುಮಾರ್ | Oneindia Kannada

ಕಲಬುರಗಿ, ಸೆಪ್ಟೆಂಬರ್ 17: ಭಗವಂತನ ಕೃಪೆ ಇದ್ದರೆ ಮುಂದಿನ ದಿನಗಳಲ್ಲಿ ಸಿಎಂ ಆಗ್ತೀನಿ ಅದಕ್ಕೀಗ ಅವಸರವಿಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಹಲವು ಗೊಂದಲದಲ್ಲಿರುವ ಡಿಕೆ ಶಿವಕುಮಾರ್ ಮಾನಸಿಕ ಯಾತನೆಯನ್ನು ಅನುಭವಿಸುತ್ತಿದ್ದಾರೆ, ಸಂಕಷ್ಟ ನಿವಾರಣೆಗೆ ಕಲಬುರಗಿಯ ದೇವಲ ಗಾಣಗಾಪುರದ ದತ್ತಾತ್ರೇಯನ ಸನ್ನಿಧಿಗೆ ಮೊರೆ ಹೋಗಿದ್ದಾರೆ.

ಡಿ.ಕೆ.ಶಿವಕುಮಾರ್‌ಗೆ ಜಾಮೀನು, ಬೀಸೋ ದೊಣ್ಣೆಯಿಂದ ಪಾರು ಡಿ.ಕೆ.ಶಿವಕುಮಾರ್‌ಗೆ ಜಾಮೀನು, ಬೀಸೋ ದೊಣ್ಣೆಯಿಂದ ಪಾರು

ದತ್ತ ದೇವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವರ ಕೃಪೆ ಒಂದಿದ್ದರೆ ಸಿಎಂ ಆಗುತ್ತೇನೆ ಆದರೆ ಈಗ ಅವಸರವಿಲ್ಲ, ಕಳೆದ ಎರಡು ವರ್ಷದಿಂದ ಏನಾಗಿದೆ ಎಂದು ನೀವೇ ಗಮನಿಸಿದ್ದೀರ, ಯಾರಿಗೆ ನೋವು ಕೊಡಬೇಕು ಅಂತಿದ್ದರೂ ಅವರು ನೋವು ಕೊಟ್ಟು ಖುಷಿ ಪಡಲಿ ಎಂದರು.

ನಾನು ಯಾವುದೇ ತಪ್ಪು ಮಾಡಿಲ್ಲ, ಅವರು ತೊಂದರೆ ಕೊಡಲಿ ಅದನ್ನು ಎದುರಿಸುವ ಶಕ್ತಿಯನ್ನೂ ದೇವರು ಕೊಡಲಿ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಆತಂಕ ಪಡುವ ಅಗತ್ಯವಿಲ್ಲ, ಅವಸರದಲ್ಲಿ ಹೋದರೆ ಆಘಾತ ಹೆಚ್ಚಾಗುತ್ತದೆ.

ಸಿಎಂ ಆಗುವ ಬಯಕೆಯನ್ನು ಬಿಚ್ಚಿಟ್ಟ ಡಿಕೆ ಶಿವಕುಮಾರ್ ಸಿಎಂ ಆಗುವ ಬಯಕೆಯನ್ನು ಬಿಚ್ಚಿಟ್ಟ ಡಿಕೆ ಶಿವಕುಮಾರ್

ಹೀಗಾಗಿ ನಿಧಾನವಾಗಿ ಸರ್ಕಾರ ಹೋಗುತ್ತಿದೆ. ಆಪರೇಷನ್ ಕಮಲ ಹೆಸರಲ್ಲಿ ಬಿಜೆಪಿ 15-16 ಕಾಂಗ್ರೆಸ್ ಶಾಸಕರನ್ನು ಆಹ್ವಾನಿಸುತ್ತಿದ್ದಾರೆ, ಆದರೆ ಕಾಂಗ್ರೆಸ್ ನವರು ನಿಷ್ಠಾವಂತ ಕಾರ್ಯಕರ್ತರು ಎಂದರು. ಡಿಕೆ ಶಿವಕುಮಾರ್ ಇತ್ತೀಚೆಗಷ್ಟೇ ತುಮಕೂರಿನಲ್ಲಿರುವ ಅಜ್ಜಯನಮಠಕ್ಕೆ ಭೇಟಿ ನೀಡಿದ್ದರು.

 ಕೇಂದ್ರದ ಕುಣಿಗೆಕೆ ಬಗ್ಗದ ಡಿಕೆಶಿ, ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಜಪ

ಕೇಂದ್ರದ ಕುಣಿಗೆಕೆ ಬಗ್ಗದ ಡಿಕೆಶಿ, ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಜಪ

ಒಂದೆಡೆ ಕೇಂದ್ರಸರ್ಕಾರದಿಂದ ಐಟಿ, ಇಡಿ, ಸಿಬಿಐಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳು ಸಚಿವ ಡಿಕೆ ಶಿವಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದರೆ, ಮತ್ತೊಂದೆಡೆ ಅದನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯದ ನಾಯಕರ ವಿಶ್ವಾಸವನ್ನು ಗಳಿಸುವತ್ತ ಸಚಿವ ಡಿಕೆ ಶಿವಕುಮಾರ್ ಗಮನ ಹರಿಸಿದ್ದಾರೆ.

ಬಳ್ಳಾರಿ ಶಾಸಕರ ವಿಶ್ವಾಸಗಳಿಸಿದ ಪವರ್‌ಫುಲ್ ಮಿನಿಸ್ಟರ್

ಬಳ್ಳಾರಿ ಶಾಸಕರ ವಿಶ್ವಾಸಗಳಿಸಿದ ಪವರ್‌ಫುಲ್ ಮಿನಿಸ್ಟರ್

ತಮ್ಮ ಮೇಲೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ನಿರಂತರ ನಡೆಸುತ್ತಿರುವ ದಬ್ಬಾಳಿಕೆಯನ್ನು ಸಹಿಸಿಕೊಂಡು ಪಕ್ಷವನ್ನು ಉಳಿಸುವಲ್ಲಿ, ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಬಿಂಬಿಸಿಕೊಳ್ಳುವಲ್ಲಿ ಡಿಕೆಶಿ ನಿರತರಾಗಿದ್ದಾರೆ. ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಪಿಎಲ್ ಡಿ ಬ್ಯಾಂಕ್ ಚುನಾವಣೆ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬೆಂಬಲವಾಗಿ ನಿಂತು ತಮ್ಮನ್ನು ನಂಬಿದ ಶಾಸಕರನ್ನು ಕೈಬಿಡುವುದಿಲ್ಲ ಎಂದಿದ್ದರು, ಅಷ್ಟೇ ಅಲ್ಲದೆ ಬಳ್ಳಾರಿ ಶಾಸಕರನ್ನು ತನ್ನತ್ತ ಸೆಳೆದುಕೊಂಡು ಜಾರಕಿಹೊಳಿ ಸಹೋದರರಿಂದಲೇ ಬಳ್ಳಾರಿ ಶಾಸಕರನ್ನು ಬೇರ್ಪಡಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಡಿಕೆ ಶಿವಕುಮಾರ್ ಪಕ್ಷದ ಒಳಗೂ, ಹೊರಗೂ ಮುಖ್ಯಮಂತ್ರಿಯಾಗುವ ತಮ್ಮ ಸಿದ್ಧತೆಗಳನ್ನು ಭರದಿಂದಲೇ ನಡೆಸಿದ್ದಾರೆ.

ದೇವೇಗೌಡ, ಎಚ್ಡಿಕೆ ಬೆಂಬಲವೂ, ಒಕ್ಕಲಿಗರ ಪಾಳಯದ ಪ್ರೀತಿಯೂ

ದೇವೇಗೌಡ, ಎಚ್ಡಿಕೆ ಬೆಂಬಲವೂ, ಒಕ್ಕಲಿಗರ ಪಾಳಯದ ಪ್ರೀತಿಯೂ

ಒಂದೆಡೆ ಕಾಂಗ್ರೆಸ್ ನ ಆಂತರಿಕ ಶಕ್ತಿ ಮತ್ತೊಂದೆಡೆ ಬಿಜೆಪಿಯ ನಿರಣತರ ರಾಜಕೀಯ ಹಾಗೂ ಕಾನೂನಾತ್ಮಕ ದಾಳಿಯನ್ನು ಸಹಿಸಿಕೊಂಡಿರುವ ಸಚಿವ ಡಿಕೆಶಿ ಮತ್ತೊಂದೆಡೆ ಮಾಜಿ ಪ್ರಧಾನ ಮಂತ್ರಿ ಎಚ್‌ಡಿ ದೇವೇಗೌಡ, ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರ ವಿಶ್ವಾಸವನ್ನೂ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಿಕೆಶಿ ದೂರದೃಷ್ಟಿಯ ರಾಜಕಾರಣಿ ಎನ್ನುವುದಕ್ಕೆ ಇದೊಂದೇ ಸಾಕ್ಷಿ. ಮುಂದಿನ ದಿನಗಳಲ್ಲಿ ಜೆಡಿಎಸ್ ಅಥವಾ ಕುಮಾರಸ್ವಾಮಿ ಮುಖ್ಯಮಂತ್ರಿ ಪದವಿಯನ್ನು ತೊರೆಯುವ ಪರಿಸ್ಥಿತಿ ಎದುರಾದರೆ ಆಗ ಕಾಂಗ್ರೆಸ್ ನಿಂದ ಮುಖ್ಯಮಂತ್ರಿಯಾಗಬಹುದಾದ ಅಭ್ಯರ್ಥಿ ತಾವೇ ಆಗಿರಬೇಕೆಂಬ ಹಿನ್ನೆಲೆಯಲ್ಲಿ ದೇವೇಗೌಡರ ಮನಸ್ಸನ್ನು ಗೆಲ್ಲುವಲ್ಲಿ ಈಗಾಗಲೇ ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ಮತ್ತೊಂದೆಡೆ ಒಂದು ಕಾಲದಲ್ಲಿ ಬದ್ಧ ವೈರಿಯಾಗಿದ್ದ ಎಚ್‌ಡಿ ಕುಮಾರಸ್ವಾಮಿ ಪ್ರತಿಯೊಂದು ವಿಚಾರದಲ್ಲೂ ಡಿಕೆಶಿ ಅವರತ್ತಲೇ ನೋಡುವಂತಾಗಿದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿನ ಆಂತರಿಕ ಬಿಕ್ಕಟ್ಟನ್ನು ಸರಿಪಡಿಸಿ, ಇಡೀ ಕಾಂಗ್ರೆಸ್ ಪಕ್ಷವನ್ನು ಸಹಬಂಧಿಗೆ ತರುಬಹುದಾದ ಏಕೈಕ ನಾಯಕ ಡಿಕೆ ಶಿವಕುಮಾರ್ ಎಂದು ಸ್ವತಃ ಕುಮಾರಸ್ವಾಮಿಗೆ ಮನವರಿಕೆಯಾಗಿದೆ.

ಹೀಗಾಗಿ ಜೆಡಿಎಸ್ ಹಾಗೂ ಒಕ್ಕಲಿಗ ಸಮುದಾಯದ ಭಾಗವಾಗಿರುವ ಹಳೇ ಮೈಸೂರು ಭಾಗದಲ್ಲಿ ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಬಿಂಬಿಸಿಕೊಳ್ಳುವಲ್ಲಿ ಬಹುತೇಕ ಯಶಸ್ಸಿನತ್ತ ಸಾಗಿದ್ದಾರೆ.

ಕುಮಾರಸ್ವಾಮಿ ಸರ್ಕಾರಕ್ಕೆ ಬೆನ್ನೆಲುಬಾಗಿ ಇರ್ತೀನಿ: ಡಿಕೆ ಶಿವಕುಮಾರ್ಕುಮಾರಸ್ವಾಮಿ ಸರ್ಕಾರಕ್ಕೆ ಬೆನ್ನೆಲುಬಾಗಿ ಇರ್ತೀನಿ: ಡಿಕೆ ಶಿವಕುಮಾರ್

ಕಾಂಗ್ರೆಸ್ ನಲ್ಲಿ ಬೇರೆ ಯಾರಿಲ್ಲ ಡಿಕೆಶಿ ಬಿಟ್ಟರೆ

ಕಾಂಗ್ರೆಸ್ ನಲ್ಲಿ ಬೇರೆ ಯಾರಿಲ್ಲ ಡಿಕೆಶಿ ಬಿಟ್ಟರೆ

ಮೈತ್ರಿ ಸರ್ಕಾರದ ಪತನಕ್ಕೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನ ಆಂತರಿಕ ರಾಜಕಾರಣ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಒಂದೆಡೆ ಪ್ರಬಲ ಜಾರಕಿಹೊಳಿ ಸಹೋದರರನ್ನು ಮಣಿಸಲು ಯಾರಿಗೂ ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿಯಲ್ಲಿ ಕೇವಲ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದ ಶಾಸಕಿ ಹಾಗೂ ಆಪ್ತೆಯೆಂದು ಹೇಳಲಾಗುವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಳಸಿಕೊಂಡು ಇಡೀ ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ತನ್ನ ಸೆಲೆದುಕೊಂಡಿರುವ ಡಿಕೆಶಿ, ಕ್ರಮೇಣ ಉತ್ತರ ಕರ್ನಾಟಕದ ಶಾಸಕರೆಲ್ಲರನ್ನೂ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಕಾಂಗ್ರೆಸ್ ನಲ್ಲಿ ಉತ್ತರ ಕರ್ನಾಟಕದ ನಾಯಕತ್ವದ ಕೊರತೆ ಇದೆ ಎಂಬ ಇತ್ತೀಚಿನ ದಶಕಗಳ ಕೊರತೆಯನ್ನು ಸ್ವತಃ ಕಾಂಗ್ರೆಸ್ ಶಾಸಕರು ಡಿಕೆ ಶಿವಕುಮಾರ್ ಅವರಲ್ಲಿ ಕಾಣಲು ಆರಂಭಿಸಿದ್ದಾರೆ. ಜಾರಕಿಹೊಳಿ ಸಹೋದರರು ಒಂದೊಮ್ಮೆ ಕಾಂಗ್ರೆಸ್ ನಿಂದ ದೂವಾದರೆ ಆ ಭಾಗದಲ್ಲಿ ತಮಗೆ ನಾಯಕರು ಯಾರು ಎಂಬ ಕೊರತೆಯನ್ನು ತುಂಬಲು ಡಿಕೆ ಶಿವಕುಮಾರ್ ಪರೋಕ್ಷವಾಗಿ ವಿಶ್ಔಆಸ ಮೂಡಿಸಿದ್ದಾರೆ.

ಎಲ್ಲಾ ಬೆಳವಣಿಗೆ ನಡುವೆಯೂ ಮುಂಬರುವ ಲೋಕಸಭೆ ಚುನಾವಣೆ ನಂತರ ಸರ್ಕಾರ ಇರುತ್ತೆದೆಯೇ ಎನ್ನವುದರ ಮೇಲೆ ಡಿಕೆಶಿಯ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.

ಕಾಂಗ್ರೆಸ್‌ ಮುಂದೆ 4 ಬೇಡಿಕೆ ಇಟ್ಟ ಜಾರಕಿಹೊಳಿ ಸಹೋದರರು!ಕಾಂಗ್ರೆಸ್‌ ಮುಂದೆ 4 ಬೇಡಿಕೆ ಇಟ್ಟ ಜಾರಕಿಹೊಳಿ ಸಹೋದರರು!

English summary
Minister D.K.Shivakumar said that he would become chief minister if it is in his destiny and he believed in god.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X