ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪೈಪೋಟಿ ನೀಡುತ್ತಿದೆ ಕಲಬುರಗಿ
ಕಲಬುರಗಿ, ಮೇ 14: ಕೊರೊನಾ ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಕಲಬುರಗಿ ಪೈಪೋಟಿ ನೀಡುತ್ತಿದೆ. ಕಲಬುರಗಿಯಲ್ಲಿ ಕರೊನಾ ಸೊಂಕಿನಿಂದ ಸಾವಿಗೀಡಾದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಸದ್ಯ, ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಕೊರೊನಾದಿಂದ ಮೃತರಾದವರ ಸಂಖ್ಯೆ ಒಂದೇಯಾಗಿದೆ. ಆದರೆ, ಕಲಬುರಗಿಯ ಸಾವಿನ ಸಂಖ್ಯೆಯ ವೇಗ ನೋಡಿದರೆ, ಬೆಂಗಳೂರನ್ನ ಹಿಂದಕ್ಕೆ ಹಾಕುವುದು ಗ್ಯಾರೆಂಟಿ ಎಂದು ಊಹಿಸಲಾಗಿದೆ.
1 ಕೋಟಿಗಿಂತ ಅಧಿಕ ಜನರು ಇರುವ ಬೆಂಗಳೂರಿನಲ್ಲಿ ಕೊರೊನಾ ಸೊಂಕಿನಿಂದ 7 ಸಾವು ಸಂಭವಿಸಿದೆ. 30 ಲಕ್ಷ ಜನಸಂಖ್ಯೆ ಹೊಂದಿರುವ ಕಲಬುರಗಿ ಜಿಲ್ಲೆಯಲ್ಲಿಯೂ ಕೊರೊನಾ ಸೊಂಕಿತರ ಸಾವು ಏಳಕ್ಕೆ ಬಂದಿದೆ. ರಾಜಧಾನಿ ಜೊತೆ ಕಲಬುರಗಿ ಪೈಪೋಟಿ ನಡೆಸಿದಂತಿದೆ.

ಕಲಬುರಗಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಬಿಸಲಿನಾಡಿನಲ್ಲಿ ಕೊರೊನಾ ನಿಯಂತ್ರಣ ಸಿಗದೆ ಓಡುತ್ತಿದೆ. ಜಿಲ್ಲೆಯಲ್ಲಿ 7 ಸಾವಾದರೂ, ಇನ್ನು ಅನೇಕ ಜನರು ಎಚ್ಚತ್ತುಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ.
ಜಿಲ್ಲಾಡಳಿತ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡು ಬೆಚ್ಚಿ ಬಿದ್ದಿದೆ. ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.












Click it and Unblock the Notifications