ಚಿಂಚೋಳಿ ಕಾಂಗ್ರೆಸ್ ಶಾಸಕರ ಕಾರು ಅಪಘಾತ, ಆಸ್ಪತ್ರೆಗೆ ದಾಖಲು
ಕಲಬುರಗಿ, ಮಾರ್ಚ್ 28: ಚಿಂಚೋಳಿಯ ಕಾಂಗ್ರೆಸ್ ಶಾಸಕ ಉಮೇಶ ಜಾದವ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದ್ದು, ಶಾಸಕರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕ ಉಮೇಶ್ ಜಾದವ್ ಅವರು ಚಿಂಚೋಳಿಯಿಂದ ಕಾಂಚಾವರಂಗೆ ತೆರಳ ಬೇಕಾದರೆ ಪೊಲಕಪಳ್ಳಿ ತಾಂಡಾದ ಬಳಿ ಮುಂದಿನ ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭ ಚಾಲಕನ ಹಿಡಿತ ತಪ್ಪಿ ಕಾರು ಪಲ್ಟಿ ಆಗಿದೆ.

ಕೂಡಲೇ ಸ್ಥಳೀಯರು ಶಾಸಕ ಉಮೇಶ್ ಜಾದವ್ ಹಾಗೂ ಕಾರು ಚಾಲಕನನ್ನು ವಾಹನಗಳಲ್ಲಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾಸಕರ ಕೈಗೆ ತೀವ್ರ ಪೆಟ್ಟಾಗಿದ್ದು, ಕಾರು ಚಾಲಕನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.












Click it and Unblock the Notifications