• search
 • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಬಹಿರಂಗ ಸಭೆಗೂ ಮುನ್ನ ಬಿಎಸ್‌ವೈ, ಉಮೇಶ್ ಜಾಧವ್ ಭೇಟಿ, ಏನೇನು ಚರ್ಚೆ?

|
   ಬಿಜೆಪಿ ಬಹಿರಂಗ ಸಭೆಗೂ ಮುನ್ನ ಬಿಎಸ್‌ವೈ, ಉಮೇಶ್ ಜಾಧವ್ ಭೇಟಿ, ಏನೇನು ಚರ್ಚೆ? |Oneindia Kannada

   ಕಲಬುರಗಿ, ಮಾರ್ಚ್ 6: ಇತ್ತೀಚೆಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಹೊರಬಂದಿದ್ದ ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ಅವರು ಇಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದರು.

   ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರನ ಕಿರುಕುಳದಿಂದ ಬೇಸತ್ತು ತಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬರುವುದಾಗಿ ಅವರು ಹೇಳಿಕೊಂಡಿದ್ದರು.

   ಬುಧವಾರ ಉಮೇಶ್ ಜಾಧವ್ ಬಿಜೆಪಿ ಸೇರಲಿದ್ದಾರೆ : ಆರ್.ಅಶೋಕ

   ಇಂದು ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿಗೆ ಆಗಮಿಸುತ್ತಿದ್ದ ಅಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಉಮೇಶ್ ಜಾಧವ್ ಎಲ್ಲರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮುಂದಿನ ಸವಾಲುಗಳ ಬಗ್ಗೆ ಚರ್ಚೆ ನಡೆಸಿದರು.

   ಮಲ್ಲಿಕಾರ್ಜುನ ಖರ್ಗೆ ಅವರ ಕೈಯನ್ನು ಕಟ್ಟಿ ಹಾಕಲು ಉಮೇಶ್ ಜಾಧವ್ ಪ್ರಭಲ ಅಭ್ಯರ್ಥಿ, ಲಂಬಾಣಿ ಸಮುದಾಯದ ನಾಯಕರೂ ಕೂಡ ಆಗಿದ್ದಾರೆ. ಲೋಕಸಭಾ ಚುನಾವಣೆಯ ಕುರಿತು ಕೆಲವು ಭರವಸೆಗಳು, ಗೆಲುವಿಗೆ ಉತ್ತಮ ವಾತಾವರಣ ಸೃಷ್ಟಿ, ಕಾನೂನು ತೊಡಕುಗಳು, ಸಲಹೆಗಳು ಒಂದೊಮ್ಮೆ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಅಂಗೀಕಾರವಾಗದೆ ಇದ್ದಲ್ಲಿ ಏನು ಮಾಡಬೇಕು ಎನ್ನುವ ಕುರಿತು ಮಾತುಕತೆ ನಡೆಯಿತು.

   ಉಮೇಶ್ ಜಾಧವ್ ಕಾಂಗ್ರೆಸ್ ತೊರೆಯಲು 3 ಕಾರಣಗಳು

   ಸಧ್ಯಕ್ಕೆ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗೆಲ್ಲಲು ಇರುವ ಏಕೈಕ ಅಭ್ಯರ್ಥಿ ಉಮೇಶ್ ಜಾಧವ್ ಎಂದು ಬಿಜೆಪಿ ಅಂದುಕೊಂಡಿದೆ ಹಾಗಾಗಿ ಬಿಜೆಪಿಯಲ್ಲಿಯೇ ಇನ್ಯಾದರೂ ಅಭ್ಯರ್ಥಿಗಳಿದ್ದಾರೆಯೇ ಎನ್ನುವ ಕುರಿತು ಚರ್ಚೆ ಮಾಡುತ್ತಿಲ್ಲ. ಆದರೆ ಬಾಬುರಾವ್ ಚಿಂಚನಸೂರ್ ಕೂಡ ಆಕಾಂಕ್ಷಿಯಾಗಿದ್ದು ಅವರನ್ನು ಪ್ರಬಲ ಅಭ್ಯರ್ಥಿ ಎಂದು ಪರಿಗಣಿಸಿಲ್ಲ.

   ಚಿಂಚೋಳಿ ಕಾಂಗ್ರೆಸ್‌ ಶಾಸಕ ಡಾ.ಉಮೇಶ್ ಜಾಧವ್‌ ಬಿಜೆಪಿಗೆ?

   ಚಿಂಚೋಳಿಯಲ್ಲಿ ಉಮೇಶ್ ಜಾಧವ್ ರಾಜೀನಾಮೆ ಬಳಿಕ ಖಾಲಿ ಇರುವ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆದರೆ ಬಿಜೆಪಿಯಿಂದಲೇ ಪ್ರಬಲ ಸ್ಪರ್ಧಿಯನ್ನು ನಿಲ್ಲಿಸುವ ಕುರಿತು ಕೂಡ ಚರ್ಚೆ ನಡೆಯಿತು.

   English summary
   Congress former MLA Umesh Jadhav met BJP state president BS Yeddyurappa and he will likely to join BJP Today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X