Indian Railways: ಕಲಬುರಗಿ ಮಾರ್ಗದಲ್ಲಿ 34 ವಿಶೇಷ ರೈಲುಗಳ ಸೇವೆ, ವಿವರ

ಕಲಬುರಗಿ, ಮಾರ್ಚ್ 10: ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಈ ಹಬ್ಬಕ್ಕೆ ಪ್ರಯಾಣಿಸುವ ಜನರಿಗೆ ಅನುಕೂಲವಾಗಲಿ ಎಂದು ಕೇಂದ್ರ ರೈಲ್ವೆಯು 34 ವಿಶೇಷ ಕಾಯ್ದಿರಿಸದ ರೈಲುಗಳ ಸೇವೆ ಆರಂಭಿಸಿದೆ. ಈ ರೈಲ್ವೆಯು ದಾದರ್-ರತ್ನಗಿರಿ ಮತ್ತು ದೌಂಡ್-ಕಲಬುರಗಿ ನಡುವೆ ಸಂಚರಿಸಲಿವೆ. ಎಷ್ಟು ಟ್ರಿಪ್, ವೇಳಾಪಟ್ಟಿ, ದಿನಾಂಕ ಮಾಹಿತಿ ಇಲ್ಲಿ ತಿಳಿದು ಸಂಚರಿಸಬಹುದು.

ಹೋಳಿ ವಿಶೇಷ ರೈಲುಗಳ ಸೇವೆ: ವಿವರ

1. ದಾದರ್-ರತ್ನಗಿರಿ ಕಾಯ್ದಿರಿಸದ ವಿಶೇಷ ರೈಲು (01131) ವಾರದಲ್ಲಿ ಮೂರು ಟ್ರಿಪ್‌ಗಳಂತೆ ಒಟ್ಟು 6 ಟ್ರಿಪ್‌ ಹೊಡೆಯಲಿದೆ. ಈ ರೈಲು ಮಾರ್ಚ್ 11ರ ಮಂಗಳವಾರದಿಂದ 13 ಗುರುವಾರವರೆಗೆ ಹಾಗೂ ಮಾರ್ಚ್ 16ರಿಂದ ಭಾನುವಾರ ಮಧ್ಯಾಹ್ನ 2.50 ಕ್ಕೆ ದಾದರ್‌ನಿಂದ ಹೊರಟು ಅದೇ ದಿನ 23.40 ಕ್ಕೆ ರತ್ನಗಿರಿಗೆ ಆಗಮಿಸಲಿದೆ.

Central Railway Run 34 Unreserved Holi Special Trains Dadar-Daund-Kalaburagi- Festival Travelers

* ರತ್ನಗಿರಿ-ದಾದರ್ ವಿಶೇಷ ರೈಲು (01132) ರತ್ನಗಿರಿಯಿಂದ ಮಾರ್ಚ್‌ 12ರಂದು ಬುಧವಾರ, ಶುಕ್ರವಾರ ಮಾರ್ಚ್ 14 ಮತ್ತು ಮಾರ್ಚ್ 17ರಂದು ಬೆಳಿಗ್ಗೆ 04.30 ಕ್ಕೆ ಹೊರಡುತ್ತದೆ. ಅದೇ ದಿನ ಮಧ್ಯಾಹ್ನ 1.25 ಕ್ಕೆ ದಾದರ್ ನಿಲ್ದಾಣಕ್ಕೆ ಬಂದು ಸೇರಿದೆಲಿ. ಒಟ್ಟು ಎರಡು ಬದಿ ಸೇರಿ ಆರು ಟ್ರಿಪ್ ಹೊಡೆಯಲಿದೆ ಎಂದು ಕೇಂದ್ರ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲು ನಿಲುಗಡೆ: ಥಾಣೆ, ಪನ್ವೇಲ್, ಪೆನ್, ರೋಹಾ, ಮಂಗಾವ್, ವೀರ್, ಖೇಡ್, ಚಿಪ್ಲುನ್, ಸವರ್ದಾ, ಅರಾವಳಿ ರಸ್ತೆ ಮತ್ತು ಸಂಗಮೇಶ್ವರ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

2. ದೌಂಡ್-ಕಲಬುರಗಿ ವಿಶೇಷ ರೈಲು (01421) ವಾರದಲ್ಲಿ 5 ದಿನ ಬರೋಬ್ಬರಿ 20 ಟ್ರಿಪ್‌ ಹೊಡೆಯಲಿದೆ. ಈ ರೈಲು ದೌಂಡ್‌ನಿಂದ ಮಾರ್ಚ್ 10 ರಿಂದ 22 ರವರೆಗೆ ಬೆಳಗ್ಗೆ 05.00 ಗಂಟೆಗೆ ಸಂಚಾರ ಆರಂಭಿಸುತ್ತದೆ. ಮಾರ್ಚ್‌ 13, 16 ಮತ್ತು 20) ಬಿಟ್ಟು ಉಳಿದ ದಿನ ನಿಗದಿಯಂತೆ ಬೆಳಗ್ಗೆ 11.20 ಗಂಟೆಗೆ ಕಲಬುರಗಿಗೆ ತಲುಪುತ್ತದೆ. ಇದು ಏಕಮುಖವಾಗಿ ಹತ್ತು ಟ್ರಿಪ್ ಹೊಡೆಯುತ್ತದೆ.

Central Railway Run 34 Unreserved Holi Special Trains Dadar-Daund-Kalaburagi- Festival Travelers

ಕಾಯ್ದಿರಿಸಿದ ಇದೇ ವಿಶೇಷ ರೈಲು (01422 ) ಮಾರ್ಚ್ 10 ರಿಂದ ಮಾರ್ಚ್ 22 ರವರೆಗೆ (13.03.2025, 16.03.2025, ಮತ್ತು 20.03.2025 ಹೊರತುಪಡಿಸಿ) ಕಲಬುರಗಿಯಿಂದ ಸಂಜೆ 4.10 ಗಂಟೆಗೆ ಪ್ರಯಾಣ ಆರಂಭಿಸುತ್ತದೆ. ಇಲ್ಲಿಂದ ಹೊರಡುವ ಅದೇ ದಿವಸ ರಾತ್ರಿ 22.20 ಗಂಟೆಗೆ ದೌಂಡ್ ನಿಲ್ದಾಣಕ್ಕೆ ಆಗಮಿಸುತ್ತದೆ. ಎರಡು ಬದಿಯಲ್ಲಿ ಒಟ್ಟು 20 ಟ್ರಿಪ್ ಹೊಡೆಯುತ್ತದೆ.

ನಿಲುಗಡೆ ನಿಲ್ದಾಣಗಳು: ಭಿಗ್ವಾನ್, ಪರೆವಾಡಿ, ಜೆಯೂರ್, ಕೆಮ್, ಕುರ್ದುವಾಡಿ, ಮಾಧಾ, ಮೊಹೋಲ್, ಸೋಲಾಪುರ, ಟಿಕೆಕರ್‌ವಾಡಿ, ಹೋಟ್ಗಿ, ಅಕಲ್‌ಕೋಟ್ ರಸ್ತೆ, ಬೊರೊಟಿ, ದುಧಾನಿ ಮತ್ತು ಗಾಣಗಾಪುರ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

Central Railway Run 34 Unreserved Holi Special Trains Dadar-Daund-Kalaburagi- Festival Travelers

3) ದೌಂಡ್-ಕಲಬುರಗಿ ಕಾಯ್ದಿರಿಸದ ವಿಶೇಷ ರೈಲು (01425) ವಾರಕ್ಕೆ ಎರಡು ಬಾರಿಯತೆ ಒಟ್ಟು 8 ಟ್ರಿಪ್ ಹೊಡೆಯಲಿದೆ.

ಈ ವಿಶೇಷ ರಯಲು ಮಾರ್ಚ್ 09 ಮಾರ್ಚ್ 13 ಮಾರ್ಚ್ 16 ಮತ್ತು ಮಾರ್ಚ್ 20 (ಗುರುವಾರ ಮತ್ತು ಭಾನುವಾರ) ರಂದು ಬೆಳಗ್ಗೆ 05.00 ಗಂಟೆಗೆ ದೌಂಡ್‌ನಿಂದ ಹೊರಡುತ್ತದೆ. ಅದೇ ದಿನ ರಾತ್ರಿ 11.20 ಗಂಟೆಗೆ ಕಲಬುರಗಿಗೆ ಬರಲಿದೆ. ಒಂದು ಬದಿಯ ನಾಲ್ಕು ಟ್ರಿಪ್ ಪೂರ್ಣಗೊಳಿಸುತ್ತದೆ.

ವಿಶೇಷ ರೈಲು (01426) ಮಾರ್ಚ್ 09, ಮಾರ್ಚ್ 13 ಮಾರ್ಚ್ 16 ಮತ್ತು ಮಾರ್ಚ್ 20 ರಂದು ರಾತ್ರಿ 20.30 ಗಂಟೆಗೆ ಕಲಬುರಗಿಯಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ 02.30 ಗಂಟೆಗೆ ದೌಂಡ್‌ಗೆ ಆಗಮಿಸುತ್ತದೆ. ಅಲ್ಲಿಗೆ ಒಟ್ಟು ಎಂಟು ಟ್ರಿಪ್‌ಗಳು ಪೂರ್ಣಗೊಳ್ಳಲಿವೆ.

Take a Poll

ನಿಲುಗಡೆ ನಿಲ್ದಾಣಗಳು: ಈ ರೈಲು ಭಿಗ್ವಾನ್, ಪರೆವಾಡಿ, ಜ್ಯೂರ್, ಕೆಮ್, ಕುರ್ದುವಾಡಿ, ಮಾಧಾ, ಮೋಹೋಲ್, ಸೋಲಾಪುರ, ಟಿಕೇಕರವಾಡಿ, ಹೊಟ್ಗಿ, ಅಕಲಕೋಟ್ ರಸ್ತೆ, ಬೋರೋಟಿ, ದುಧಾನಿ ಮತ್ತು ಗಾಣಗಾಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ಕೇಂದ್ರ ರೈಲ್ವೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+