ಕಲಬುರಗಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 21: ಕಲಬುರುಗಿಯಲ್ಲಿ ಇಂದು(ಶನಿವಾರ) ಬಿಜೆಪಿ ಕಾರ್ಯಕಾರಿಣಿ ಸಭೆ ಪ್ರಾರಂಭವಾಗಿದ್ದು, ಸಭೆಯಲ್ಲಿ ಪಕ್ಷದ ನಾಯಕರ ನಡುವಿನ ಭಿನ್ನಮತ ಪ್ರಸ್ತಾಪಗೊಳ್ಳುವ ಸಾಧ್ಯತೆಯಿದೆ. ಭಿನ್ನಮತ ಶಮನ ಮತ್ತು ರಾಜ್ಯ ಸರಕಾರ ವಿರುದ್ಧ ಮುಂದಿನ ನಡೆ ಕುರಿತು ಕಾರ್ಯಕಾರಣಿಯಲ್ಲಿ ಚರ್ಚೆ ನಡೆಯಲಿದೆ.

ಪ್ರಸ್ತುತ ಬ್ರಿಗೇಡ್ ನಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ನಡುವೆ ಅಸಮಾಧಾನವಿದೆ. ಹಾಗೆಯೇ ಬಿಎಸ್ ವೈ ಮತ್ತು ಬಿಜೆಪಿ ಹಿರಿಯ ನಾಯಕ ಅನಂತಕುಮಾರ್ ನಡುವೆ ಭಿನ್ನಮತ ಬಹಿರಂಗವಾಗಿದೆ. ಕಾರ್ಯಕಾರಣಿಯಲ್ಲಿ ಭಿನ್ನಮತ ಶಮನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಎಲ್ಲರ ನಡುವೆ ಸಾಮರಸ್ಯ ತುಂಬಲು ಮುಂದಾಗಿದ್ದಾರೆ. ಆದರೆ ಯಾವ ರೀತಿ ಚರ್ಚೆ ನಡೆಯಲಿದೆ ಎಂಬುದು ಇನ್ನು ತಿಳಿದುಬಂದಿಲ್ಲ.[ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ - ವರದಿಗಳು]

bjp executive meeting 2

ಈ ಮಧ್ಯೆ ಭಿನ್ನಾಭಿಪ್ರಾಯ ಬಗೆಹರಿಸಲು ಗುರುವಾರ ಕರೆದಿದ್ದ ಸಭೆಗೆ ಪ್ರತಿಪಕ್ಷ ನಾಯಕ ಮತ್ತು ಈಶ್ವರಪ್ಪ ಮತ್ತು ಭಿನ್ನಮತೀಯರು ಹಾಜರಾಗದೇ ಬಿಎಸ್ ವೈ ಅವರಿಗೆ ಮುಖಭಂಗ ಮಾಡಿದ್ದರು. ಆದರೆ ಪಕ್ಷದ ಹಿತ ದೃಷ್ಟಿಯಿಂದ ಭಾನುವಾರದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ನಡುವೆ ಪಕ್ಷದಲ್ಲಿ ಕಡೆಗಣನೆಗೆ ಗುರಿಯಾಗಿದ್ದೇನೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರಲು ಮುಂದಾಗಿದ್ದು, ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಕಾರ್ಯಕಾರಿಣಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

bjp executive meeting

ಕಾರ್ಯಕಾರಿಣಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ಸಂಸದೀಯ ಸಚಿವ ಅನಂತಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಆರು ತಿಂಗಳಲ್ಲಿ ಪಕ್ಷದಲ್ಲಿ ನಡೆದಿರುವ ಚಟುವಟಿಕೆಗಳ ಬಗ್ಗೆ ವರದಿ ಮಂಡನೆಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
BJP state executive meeting today(Jan 21)in kalaburagi, The party leaders will be meeting escalating dispute
Please Wait while comments are loading...