ಸಂಸದ ಉಮೇಶ್ ಜಾಧವ್ ಕುಟುಂಬದ 12 ಮಂದಿಗೆ ಕೊರೊನಾ ಸೋಂಕು

ಕಲಬರಗಿ, ಆಗಸ್ಟ್ 24: ಸಂಸದ ಉಮೇಶ್ ಜಾಧವ್ ಹಾಗೂ ಪುತ್ರನಿಗೆ ಇತ್ತೀಚೆಗಷ್ಟೇ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

Recommended Video

      Congress ನಲ್ಲಿ ಹೆಚ್ಚಿದ ಆಂತರಿಕ ಬಿರುಕು , Kapil Sibal ಗರಂ | Oneindia Kannada

      ಇದೀಗ ಕುಟುಂಬದ 12 ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.ಉಮೇಶ್ ಜಾಧವ್​ರ ಪತ್ನಿ, ಮಗಳು, ಸಹೋದರನ ಪುತ್ರಿ, ಮೊಮ್ಮಕ್ಕಳು, ಸೊಸೆಗೂ ಸೋಂಕು ಕಾಣಿಸಿಕೊಂಡಿದೆ.
      ಅಲ್ಲದೆ ಸಂಸದರ ಇಬ್ಬರು ಆಪ್ತ ಸಹಾಯಕರು ಮತ್ತು ಶಾಸಕ ಡಾ.ಅವಿನಾಶ್ ಅವರ ಆಪ್ತ ಸಹಾಯಕ, ಕಾರು ಚಾಲಕನಿಗೂ ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

      ಡಾ.ಉಮೇಶ್ ಜಾಧವ್ ಮತ್ತು ಅವರ ಪುತ್ರ, ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ್ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಬೆಂಗಳೂರಿನ ಬೋರಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸಂಸದರ ಪತ್ನಿ, ಮಗಳು, ಸೊಸೆ(ಡಾ.ಅವಿನಾಶ್ ಪತ್ನಿ)‌ ಸೇರಿ ಕುಟುಂಬ ಮತ್ತು ಆಪ್ತ ಸಿಬ್ಬಂದಿ ಸೇರಿ 12 ಜನರಿಗೂಕೊರೊನಾ ಇರುವುದು ದೃಢಪಟ್ಟಿದೆ.

      ಈ ಬಗ್ಗೆ ಸ್ವತಃ ಸಂಸದರೇ ಟ್ವೀಟ್ ಮಾಡಿದ್ದು, ತಮ್ಮ ಕುಟುಂಬದ ಒಟ್ಟು 12 ಜನರಿಗೆ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ. ಆ.19ರಂದು ಉಮೇಶ್ ಜಾಧವ್ ಮತ್ತು ಅವಿನಾಶ್ ಜಾಧವ್​ಗೆ ಸೋಂಕು ದೃಢಪಟ್ಟಿತ್ತು. ಸೋಂಕಿತರನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

      BJP MP From Kalaburagi His MLA-son Among 12 in Family Contract Covid-19

      ಜಾಧವ್ ಕುಟುಂಬ ಸದಸ್ಯರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಬೆಂಬಲಿಗರಲ್ಲಿ ಆತಂಕ ಮೂಡಿದೆ. ಸಂಸದರ ಮತ್ತು ಶಾಸಕರ ಕುಟುಂಬ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಚಿಂಚೋಳಿ ಕ್ಷೇತ್ರದ ಅಭಿಮಾನಿಗಳು ಹಲವೆಡೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+