ಕಲಬುರಗಿ: ಸಮಾಧಿಯಿಂದ ಶವ ಹೊರ ತೆಗೆದು ಚಿನ್ನಾಭರಣ ಕಳವು

By: ಕಲಬುರಗಿ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ಅಕ್ಟೋಬರ್ 24: ಹೂತ ಶವ ಹೊರ ತೆಗೆದು ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕು ಖಜೂರಿ ಗ್ರಾಮದಲ್ಲಿ ನಡೆದಿರುವುದು ಸೋಮವಾರ ಬೆಳಕಿಗೆ ಬಂದಿದೆ.

ಪ್ರೇಮಾಬಾಯಿ ಡಗೆ (75) ಐದು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆಕೆಗೆ ಮಕ್ಕಳಿರದ ಕಾರಣ ಮೈಮೇಲಿನ ಚಿನ್ನದ ಒಡವೆ ಸಮೇತ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇದನ್ನು ಗಮನಿಸಿದ್ದ ಖದೀಮರು ಹೊಂಚು ಹಾಕಿ ಸೋಮವಾರ ರಾತ್ರಿ ಸಮಾಧಿಯಿಂದ ಶವವನ್ನು ಹೊರತೆಗೆದು ಮೈಮೇಲಿನ 50ಗ್ರಾಂ ಗೂ ಅಧಿಕ ಚಿನ್ನಾಭರಣಗಳನ್ನು ದೋಚಿದ್ದಾರೆ.

A burial casket was removed and jewelry stolen by thieves in Kalaburagi

ಆಭರಣ ಕದ್ದ ಬಳಿಕ ಕಳ್ಳರು ಶವವನ್ನು ಹಾಗೆಯೇ ಬಿಟ್ಟು ಪರಾರಿಯಾಗಿದ್ದಾರೆ. ಇಂದು ಸೋಮವಾರ ಬೆಳಗ್ಗೆ ಸಮಾಧಿಯಿಂದ ಹೊರಗಿದ್ದ ಶವ ನೋಡಿದ ಗ್ರಾಮಸ್ಥರು ಭಯಗೊಂಡು ಕೂಡಲೇ ಪೋಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಅಳಂದ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A burial casket was removed and jewelry was stolen. by thieves in Kajuri village Aland taluk Kalaburagi district on Monday late night. The Aland police vists the spot.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ