ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗವಂತ ಹನುಮನಿಗೆ 'ಜಾತಿ ಪ್ರಮಾಣಪತ್ರ' ನೀಡಿದ ಯೋಗಿಗೆ 'ಮಹಾಮಂಗಳಾರತಿ'!

|
Google Oneindia Kannada News

Recommended Video

ಭಗವಂತ ಹನುಮನಿಗೆ 'ಜಾತಿ ಪ್ರಮಾಣಪತ್ರ' ನೀಡಿದ ಯೋಗಿಗೆ 'ಮಹಾಮಂಗಳಾರತಿ'! | Oneindia Kannada

ಜೈಪುರ, ನವೆಂಬರ್ 29: "ಭಗವಂತ ಹನುಮ ಒಬ್ಬ ಬುಡಕಟ್ಟು ಸಮುದಾಯಕ್ಕೆ ಸೇರಿದವನು" ಎನ್ನುವ ಮೂಲಕ ಹೊಸ ವಿವಾದವೊಂದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಂದಿ ಹಾಡಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತಿದ್ದ ಅವರು, "ರಾಮಭಕ್ತ ಹನುಮಂತ ಬುಡಕಟ್ಟು ಸಮುದಾಯಕ್ಕೆ ಸೇರಿದವನು. ಕಾಡಿನಿಂದ ಬಂದ ಅವನು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮದ ಜನರನ್ನು ಒಂದಾಗಿಸಲು ಪ್ರಯತ್ನಿಸಿದವನು. ಭಗವಂತ ರಾಮನ ಉದ್ದೇಶವೂ ಅದೇ ಆಗಿತ್ತು. ಆ ಉದ್ದೇಶವನ್ನು ಈಡೇರಿಸಲು ಹನುಮಂತ ಪ್ರಯತ್ನಿಸಿದನು. ನಾವೂ ಅದೇ ಪ್ರಯತ್ನ ಮಾಡುತ್ತಿದ್ದೇವೆ" ಎಂದಿದ್ದರು.

ಸರಿಯಾಗಿ ಕೇಳಿ, ಯೋಗಿ ಆದಿತ್ಯನಾಥ ಭಜರಂಗಿಯನ್ನು 'ದಲಿತ' ಅಂದಿಲ್ಲ!ಸರಿಯಾಗಿ ಕೇಳಿ, ಯೋಗಿ ಆದಿತ್ಯನಾಥ ಭಜರಂಗಿಯನ್ನು 'ದಲಿತ' ಅಂದಿಲ್ಲ!

ಇತ್ತೀಚೆಗೆ ಛತ್ತೀಸ್ ಗಡದಲ್ಲಿ ನಡೆದ ಪ್ರಚಾರ ಸಭೆಯಲ್ಲೂ ಯೋಗಿ ಇದೇ ರೀತಿಯ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಯೋಗಿ ಆದಿತ್ಯನಾಥ್ ಅವರ ಭಾಷಣದ ಸಂಪೂರ್ಣ ಆಡಿಯೋ ಕೇಳಿಸಿಕೊಂಡರೆ, ಅವರು ಹನುಮಂತನನ್ನು ದಲಿತ ಎಂದು ಎಂದು ಕರೆದಂತಿಲ್ಲ.

ನಮ್ಮಲ್ಲಿ ದಲಿತ ಸೇರಿದಂತೆ ಎಲ್ಲ ಸಮುದಾಯದ ಜನರಿದ್ದಾರೆ, ವನವಾಸಿಯಾಗಿರುವ ಹನುಮಂತ ಬುಡಕಟ್ಟು ಸುದಾಯದವನಾಗಿದ್ದು ಎಲ್ಲರನ್ನೂ ಸೇರಿಸುವ ಕಾರ್ಯ ಮಾಡುತ್ತಿದ್ದಾನೆ ಎಂದಿರುವುದು ಸ್ಪಷ್ಟವಾಗಿದೆ. ಆದರೆ ಅದನ್ನು ಸರಿಯಾಗಿ ಕೇಳಿಸಿಕೊಳ್ಳದೆ, ಯೋಗಿಯವರ ಮಾತನ್ನು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಗೆ ಮಹಾಮಂಗಳಾರತಿ ಮಾಡಲಾಗಿದೆ.

ಹನುಮಂತ ಬಹುದೊಡ್ಡ ಬುಡಕಟ್ಟು ವ್ಯಕ್ತಿ: ಯೋಗಿ ಆದಿತ್ಯನಾಥ ಹನುಮಂತ ಬಹುದೊಡ್ಡ ಬುಡಕಟ್ಟು ವ್ಯಕ್ತಿ: ಯೋಗಿ ಆದಿತ್ಯನಾಥ

ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ನಿಮಿತ್ತ, ಇಲ್ಲಿನ ಮಲ್ಪುರಾ ಕ್ಷೇತ್ರದಲ್ಲಿ ಅವರು ಮಾತನಾಡುತ್ತಿದ್ದರು. 'ರಾಮಭಕ್ತರೆಲ್ಲರೂ ಕೇಸರಿ ಪಕ್ಷವಾದ ಬಿಜೆಪಿಗೇ ಮತಹಾಕುತ್ತಾರೆ. ರಾವಣನ ಭಕ್ತರು ಮಾತ್ರವೇ ಕಾಂಗ್ರೆಸ್ಸಿಗೆ ಮತಹಾಕುತ್ತಾರೆ' ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು.

ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಭಗವಂತ ಹನುಮಂತನಿಗೆ ಜಾತಿಯನ್ನು ಅಂಟಿಸಿದ ಕ್ರಮವನ್ನು ಟ್ವಿಟ್ಟರ್ ನಲ್ಲಿ ಖಂಡಿಸಲಾಗಿದೆ.

Array

ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದನ್ನು ನೋಡಿಲ್ಲ!

"ಅತೀ ದೊಡ್ಡ ರಾಜ್ಯದ ಮುಖ್ಯಮಂತ್ರಿ ಅಭಿವೃದ್ಧಿಯ ಬಗ್ಗೆ ಮಾತನಾಡುವುದನ್ನು ನಾನು ಎಂದಿಗೂ ನೋಡಿಲ್ಲ. ಅವರು ಅವರ 'ಗುರು'ಗಳಂತೆಯೇ ಅಪಾಯಕಾರಿ. ಯೋಗಿ ಆದಿತ್ಯನಾಥ್ ಅವರು ಹನುಮಾನ್ ಒಬ್ಬ ದಲಿತ ಬುಡಕಟ್ಟು ಪಂಗಡದವನು, ಕೇವಲ ರಾವಣ ಭಕ್ತರು ಮಾತ್ರ ಕಾಂಗ್ರೆಸ್ಸಿಗೆ ಮತಹಾಕುತ್ತಾರೆ ಎಂದಿದ್ದಾರೆ" - ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ

ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಕಂಚಿನ ಪ್ರತಿಮೆ ಸ್ಥಾಪನೆಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಕಂಚಿನ ಪ್ರತಿಮೆ ಸ್ಥಾಪನೆ

Array

ನೀವು ಇತಿಹಾಸ, ಪುರಾಣ ಓದುವ ಅಗತ್ಯವಿದೆ!

ನೀವು ಇತಿಹಾಸ ಮತ್ತು ಪುರಾಣವನ್ನು ಹೆಚ್ಚಾಗಿ ಓದುವ ಅಗತ್ಯವಿದೆ. ದಲಿತ ಎಂದರೆ ಕಡೆಗಣಿಸಲ್ಪಟ್ಟವರು ಎಂದರ್ಥ. ಆದರೆ ನೀವು ಅದನ್ನು ಜಾತಿಸೂಚಕವನ್ನಾಗಿ ಮಾಡುತ್ತಿದ್ದೀರಿ. 'ದಲಿತ' ಪದವನ್ನು ಜಾತಿಗಾಗಿ ಬಳಸುವವರು ಅವರ ಉದ್ಧಾರಕ್ಕೆ ಪ್ರಯತ್ನಿಸಲಾರರು ಎಂದಿದ್ದಾರೆ ಆಶಿಶ್ ಪಟೇಲ್.

ಕಾಂಗ್ರೆಸ್ ವಿಸರ್ಜಿಸಿ, ಗಾಂಧೀಜಿ ಬಯಕೆ ಈಡೇರಿಸಿ : ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿಸರ್ಜಿಸಿ, ಗಾಂಧೀಜಿ ಬಯಕೆ ಈಡೇರಿಸಿ : ಯೋಗಿ ಆದಿತ್ಯನಾಥ್

ರಾಹುಲ್ ಗಾಂಧಿ ಪ್ರಧಾನಿಯಾಗ್ತಾರೆ!

ಅಕಸ್ಮಾತ್ ಬಿಜೆಪಿಯೇನಾದರೂ ಪ್ರಧಾನಿ ನರೇಂದ್ರ ಮೋದಿಯವರ ನಂತರ ಯೋಗಿ ಆದಿತ್ಯನಾಥ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದರೆ, ರಾಹುಲ್ ಗಾಂಧಿ ಪ್ರಧಾನಿಯಾಗುವುದು ಖಂಡಿತ ಎಂದಿದ್ದಾರೆ ವೈಭವ್ ಜೋಶಿ.

ಜಾತಿ ಪ್ರಮಾಣಪತ್ರ

ಅಂತೂ ಯೋಗಿ ಆದಿತ್ಯನಾಥ್ ಅವರು ಹನುಮಾನ್ ಗೆ ಜಾತಿ ಪ್ರಮಾಣಪತ್ರ ನೀಡಿದ್ದಾರೆ! ಒಟ್ಟಿನಲ್ಲಿ ನಮ್ಮ 33 ಕೋಟಿ ದೇವ-ದೇವತೆಗಳ ಜಾತಿಯೂ ಸದ್ಯದಲ್ಲೇ ತಿಳಿಯಲಿದೆ. 2018 ರ ವಿಧಾನಸಭಾ ಚುನಾವಣೆಗಳೊಳಗೆ ಅಲ್ಲದಿದ್ದರೂ, 2019 ರ ಲೋಕಸಭಾ ಚುನಾವಣೆಯೊಳಗಂತೂ ತಿಳಿಯಲಿದೆ ಎಂದಿದ್ದಾರೆ ರಾಜನ್ ಮಹಾನ್.

English summary
Star campaigner of BJP, UP CM Yogi Adityananth dragged the caste of Lord Hanuman in a rally in Rajasthan for Dalit's votes. The step becomes controversial now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X