"ಮಂದಿರ,ಗೋವು ಕಾಂಗ್ರೆಸ್ಸಿಗೆ ಚುನಾವಣೆ ಸರಕು,ಬಿಜೆಪಿಗೆ ಅವಿಭಾಜ್ಯ ಸಂಸ್ಕೃತಿ"

ಜೈಪುರ, ಡಿಸೆಂಬರ್ 03: "ದೇವಾಲಯ ಮತ್ತು ಗೋವು ಕಾಂಗ್ರೆಸ್ಸಿಗರಿಗೆ ಚುನಾವಣೆಯ ಸರಕಿರಬಹುದು. ಆದರೆ ಬಿಜೆಪಿಗೆ ಅದು ಅವಿಭಾಜ್ಯ ಸಂಸ್ಕೃತಿ" ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜೈಪುರದಲ್ಲಿ ನಡೆದ ಸುದ್ಧಿಗೋಷ್ಠಿಯೊಂದರಲ್ಲಿ ಅವರು ಭಾನುವಾರ ಮಾತನಾಡುತ್ತಿದ್ದರು.
ರಾಜಸ್ಥಾನ : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ v/s ಬಿಜೆಪಿ ಸಮರ
"ಕಾಂಗ್ರೆಸ್ ಮುಖಂಡರು ಚುನಾವಣೆಯ ದಿನಾಂಕ ಘೋಷಣೆಯಾದ ಮೇಲೆ ದೇವಾಲಯಕ್ಕೆ ತೆರಳಿ, ಪ್ರಾರ್ಥನೆ ಸಲ್ಲಿಸಲು ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಅವರು ದೇವಾಲಯಕ್ಕೆ ಹೋಗಿ ಪೂಜಿಸಿರಲಿಲ್ಲ. ಕಾಂಗ್ರೆಸ್ಸಿಗೆ ದೇವಾಲಯ ಮತ್ತು ಗೋವು ಎಂಬುದು ಒಂದು ಚುನಾವಣೆಯ ಸರಕಷ್ಟೇ ಆಗಿರಬಹುದು. ಆದರೆ ಬಿಜೆಪಿಗೆ ಹಾಗಲ್ಲ. ಅದು ನಮ್ಮ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗ" ಎಂದು ಸಿಂಗ್ ಹೇಳಿದರು.
ಕಾಂಗ್ರೆಸ್ 55 ವರ್ಷಗಳ ಕಾಲ ಈ ದೇಶವನ್ನು ಆಳಿದ್ದರಿಂದಲೇ ದೇಶ ಬಡದೇಶವಾಗಿದೆ ಎಂದು ಆರೋಪಿಸಿದ ಅವರು, ಇದೇ ಸಂದರ್ಭದಲ್ಲಿ ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಪಾಕಿಸ್ತಾನ ಮೌನವಾಗಿರುವುದನ್ನು ಖಂಡಿಸಿದರು.
ಮದುಮಗನೇ ಇಲ್ಲದ ಮೆರವಣಿಗೆಯಂತಾಗಿದೆ ಕಾಂಗ್ರೆಸ್ ಎಂದ ರಾಜ್ ನಾಥ್
"ಪಾಕಿಸ್ತಾನಕ್ಕೆ ಒಂಟಿಯಾಗಿ ಭಯೋತ್ಪಾದನೆಯನ್ನು ಹತ್ತಿಕ್ಕುವುದಕ್ಕೆ ಸಾಧ್ಯವಿಲ್ಲ ಎಂದರೆ, ಭಾರತವು ನೆರವು ನೀಡಲು ಸಿದ್ಧ" ಎಂದು ಸಹ ಅವರು ಹೇಳಿದರು.
ಮೋದಿಗೆ ಹಿಂದುತ್ವದ ಮೂಲಭೂತ ತತ್ವವೇ ಗೊತ್ತಿಲ್ಲ ಎಂದ ರಾಹುಲ್ ಗಾಂಧಿ
ರಾಜಸ್ಥಾನದಲ್ಲಿ ಡಿ.7 ರಂದು ಮತದಾನ ನಡೆಯಲಿದ್ದು, ಡಿ. 11 ರಂದು ಫಲಿತಾಂಶ ಹೊರಬೀಳಲಿದೆ. ರಾಜಸ್ಥಾನ 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !