ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ತಾಜ್ ಮಹಲ್ ನಮ್ಮದು' ಎಂದ ಜೈಪುರ ರಾಜಮನೆತನದ ದಿಯಾ ಕುಮಾರಿ

|
Google Oneindia Kannada News

ಜೈಪುರ ಮೇ 11: ತಾಜ್ ಮಹಲ್ ಸುತ್ತಲಿನ ವಿವಾದಗಳ ನಡುವೆ, ಜೈಪುರ ರಾಜಮನೆತನದ ಆಶ್ಚರ್ಯಕರ ಹೇಳಿಕೆ ಮುಂಚೂಣಿಗೆ ಬಂದಿದೆ. ರಾಜ್‌ಸಮಂದ್‌ನ ಬಿಜೆಪಿ ಸಂಸದೆ ಮತ್ತು ಜೈಪುರ ರಾಜಮನೆತನದ ದಿಯಾ ಕುಮಾರಿ ತಾಜ್‌ಮಹಲ್ ತನ್ನ ಆಸ್ತಿ ಎಂದು ಹೇಳಿದ್ದಾರೆ. ಅವರ ಅರಮನೆಯು ತಾಜ್ ಮಹಲ್ ಸ್ಥಳದಲ್ಲಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ತಾಜ್‌ಮಹಲ್‌ನ ಬಾಗಿಲು ತೆರೆಯುವಂತೆ ಯಾರೋ ಒಬ್ಬರು ಅಲಹಾಬಾದ್‌ ಹೈಕೋರ್ಟ್‌ನ ಮೊರೆ ಹೋಗಿರುವ ಸಂದರ್ಭದಲ್ಲಿ ಸಂಸದೆ ದಿಯಾ ಕುಮಾರಿ ಈ ಹೇಳಿಕೆ ನೀಡಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವುದು ಸಂತಸದ ಸಂಗತಿ ಎನ್ನುತ್ತಾರೆ ದಿಯಾ ಕುಮಾರಿ. ಮೇಲ್ಮನವಿಯಿಂದ ಎಲ್ಲರ ಮುಂದೆ ಸತ್ಯ ಹೊರಬಿದ್ದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ತಾಜ್ ಮಹಲ್ ಮತ್ತು 20 ರಹಸ್ಯ ಕೊಠಡಿಗಳು: ಕೋರ್ಟ್ ಮೊರೆತಾಜ್ ಮಹಲ್ ಮತ್ತು 20 ರಹಸ್ಯ ಕೊಠಡಿಗಳು: ಕೋರ್ಟ್ ಮೊರೆ

ಜೈಪುರ ರಾಜಮನೆತನದವರೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತಾಜ್ ಮಹಲ್ ನಮ್ಮ ದಾಖಲೆಯೂ ಹೌದು. ಒಂದು ಕಾಲದಲ್ಲಿ ತಾಜ್ ಮಹಲ್ ಜೈಪುರದ ಹಳೆಯ ರಾಜಮನೆತನದ ಅರಮನೆಯಾಗಿತ್ತು. ಇದನ್ನು ಷಹಜಹಾನ್ ವಶಪಡಿಸಿಕೊಂಡನು. ಷಹಜಹಾನ್ ಜೈಪುರ ಕುಟುಂಬದ ಆ ಅರಮನೆ ಮತ್ತು ಭೂಮಿಯನ್ನು ತೆಗೆದುಕೊಂಡಾಗ ಕುಟುಂಬವು ಅವನನ್ನು ವಿರೋಧಿಸಲು ಸಾಧ್ಯವಾಗಲಿಲ್ಲ ಏಕೆಂದರೆ ಅದು ಅವನ ಆಳ್ವಿಕೆಯಲ್ಲಿತ್ತು.

Taj Mahal Controversy: Ours is the Taj Mahal says Jaipur Diya Kumari

ಸುದ್ದಿ ಸಂಸ್ಥೆ ANI ಮುಂದೆ ಮಾತನಾಡಿದ ದಿಯಾ ಕುಮಾರಿ, ತಾಜ್ ಮಹಲ್ ಮೇಲೆ ತಮ್ಮ ಹಕ್ಕನ್ನು ಪ್ರತಿಪಾದಿಸಿದ ಅವರು ತಾವು ತಾಜ್ ಮಹಲ್ ಅನ್ನು ಕೆಡವಲು ಬಯಸುವುದಿಲ್ಲ. ಆದರೆ ಅದರ ಕೊಠಡಿಗಳನ್ನು ತೆರೆಯಬೇಕು ಎಂದು ಹೇಳಿದರು. ತಾಜ್ ಮಹಲ್‌ನಲ್ಲಿ ಕೆಲವು ಕೊಠಡಿಗಳನ್ನು ಮುಚ್ಚಲಾಗಿದೆ. ಕೆಲವು ಭಾಗಗಳನ್ನು ಅಲ್ಲಿ ದೀರ್ಘಕಾಲ ಮುಚ್ಚಲಾಗಿದೆ. ಅದನ್ನು ತೆರೆಯಬೇಕು. ಇದರಿಂದ ಅಲ್ಲಿ ಏನಿತ್ತು ಮತ್ತು ಏನಿಲ್ಲ ಎಂದು ತಿಳಿಯಬಹುದು. ಒಂದೊಮ್ಮೆ ನ್ಯಾಯಸಮ್ಮತವಾದ ತನಿಖೆ ನಡೆದಾಗ ಮಾತ್ರ ಆ ಎಲ್ಲ ಸಂಗತಿಗಳು ದೃಢವಾಗುತ್ತವೆ ಎಂದಿದ್ದಾರೆ.

ದಾಖಲೆಗಳು ಬೇಕಾದರೆ ಜೈಪುರದ ಹಿಂದಿನ ರಾಜಮನೆತನದ ನಮ್ಮ ಟ್ರಸ್ಟ್‌ನಲ್ಲಿ ಇದೆ ಎಂದು ದಿಯಾ ಕುಮಾರಿ ಹೇಳಿದ್ದಾರೆ. ಕೋರ್ಟ್ ಆದೇಶ ನೀಡಿದರೆ ದಾಖಲೆಗಳನ್ನು ನೀಡುತ್ತೇವೆ. ಆಗ ಷಹಜಹಾನ್ ಅರಮನೆಯನ್ನು ಇಷ್ಟಪಟ್ಟು ಸ್ವಾಧೀನಪಡಿಸಿಕೊಂಡಿರುವುದು ನಮ್ಮ ಬಳಿ ಇರುವ ದಾಖಲೆಗಳಲ್ಲಿ ಸ್ಪಷ್ಟವಾಗಿದೆ. ದೇವಸ್ಥಾನ ಇತ್ತೋ ಇಲ್ಲವೋ. ಈ ದಾಖಲೆಯನ್ನು ನೋಡಿಯೇ ಹೇಳಬಹುದು. ಆದರೆ ತಾಜ್ ಮಹಲ್ ಭೂಮಿ ಜೈಪುರ ರಾಜ ಮನೆತನಕ್ಕೆ ಸೇರಿದ್ದು ಎಂಬುದು ಖಚಿತವಾಗಿದೆ ಎಂದಿದ್ದಾರೆ.

Taj Mahal Controversy: Ours is the Taj Mahal says Jaipur Diya Kumari

ತಾಜ್ ಮಹಲ್ ವಿವಾದ 2022

Recommended Video

Srilanka ಹಿಂಸಾಚಾರ: ರಾಜಕಾರಣಿಗಳನ್ನೇ ಕೊಂದ ರೊಚ್ಚಿಗೆದ್ದ ಪ್ರತಿಭಟನಾಕಾರರು | Oneindia Kannada

ಅಯೋಧ್ಯೆಯ ಬಿಜೆಪಿ ನಾಯಕ ಡಾ. ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಸಿ ತಾಜ್ ಮಹಲ್‌ನ 22 ಕೊಠಡಿಗಳನ್ನು ತೆರೆಯುವ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ತಾಜ್‌ ಮಹಲ್‌ನ ಕೆಲ ಕೊಠಡಿಗಳು ದೀರ್ಘಕಾಲದವರೆಗೆ ಮುಚ್ಚಲಾಗಿದೆ. ತಾಜ್ ಮಹಲ್‌ನಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಶಿಲ್ಪಗಳು ಮತ್ತು ಶಾಸನಗಳು ಇರಬಹುದು ಎಂದು ಸಿಂಗ್ ಹೇಳುತ್ತಾರೆ. ಸಮೀಕ್ಷೆ ನಡೆದರೆ ತಾಜ್ ಮಹಲ್ ನಲ್ಲಿ ಹಿಂದೂ ವಿಗ್ರಹಗಳು, ಶಾಸನಗಳು ಇವೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗುತ್ತದೆ ಎಂದು ಹೇಳಲಾಗುತ್ತಿದೆ.

English summary
Taj Mahal controversy: BJP MP and Jaipur royal dynasty Diya Kumari says taht the Taj Mahal is his property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X