• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸತ್ಯಕ್ಕೆ ತೊಂದರೆ ನೀಡಬಹುದು ಆದರೆ ಸೋಲಿಸಲಾಗದು: ಸಚಿನ್ ಪೈಲಟ್ ಟಾಂಗ್

|

ಜೈಪುರ, ಜುಲೈ 14: 'ಸತ್ಯಕ್ಕೆ ತೊಂದರೆ ನೀಡಬಹುದು ಆದರೆ ಸೋಲಿಸಲಾಗದು ಎಂದು' ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕಾಂಗ್ರೆಸ್ ಹೈಕಮಾಂಡ್‌ಗೆ ತಿರುಗೇಟು ನೀಡಿದ್ದಾರೆ.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇದ್ದು ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಸಮರ ಸಾರಿದ್ದ ಸಚಿನ್ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಯಿಂದ ಸೋನಿಯಾ ಗಾಂಧಿ ಇಂದು ಉಚ್ಛಾಟನೆ ಮಾಡಿದ್ದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಚಿವ 'ಸತ್ಯಕ್ಕೆ ತೊಂದರೆ ನೀಡಬಹುದು ಆದರೆ ಸೋಲಿಸಲಾಗದು ಎಂದು ತಿರುಗೇಟು ನೀಡಿದ್ದಾರೆ.

ಈ ಮೂಲಕ ಕಾಂಗ್ರೆಸ್‌ನಿಂದ ಭಾಗಶಃ ಹೊರ ಹೋಗಿರುವ ಸಂದೇಶವನ್ನು ಸಚಿವ ಪೈಲಟ್ ನೀಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನದಿಂದ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಸಾರಿರುವ ಸಚಿನ್ ದೆಹಲಿಯ ಸಮೀಪದ ಹೋಟೆಲ್ ಒಂದರಲ್ಲಿ ತಮ್ಮ ಬೆಂಬಲಿಗರೊಂದಿಗೆ ವಾಸ್ತವ್ಯ ಹೂಡಿದ್ದರು.

ಕೈ ಪಕ್ಷಕ್ಕೆ ಬೇಡವಾದ ಸಚಿನ್ ಗೆ ಕಮಲ ಪಕ್ಷದಿಂದ ಮುಕ್ತ ಆಹ್ವಾನ!

ಹಾಗೆಯೇ ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಯನ್ನು ತನಗೆ ನೀಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಮುಂದೆ ಇಟ್ಟಿದ್ದರು. ಆದರೆ ಈ ಬೇಡಿಕೆಯನ್ನು ತಿರಸ್ಕರಿಸಿರುವ ಕಾಂಗ್ರೆಸ್ ಅಶೋಕ್ ಗೆಹ್ಲೋಟ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ, ಹಾಗೂ ಬಂಡಾಯ ಎದ್ದರುವ ಸಚಿವ ಪೈಲಟ್‌ಗೆ ಸರ್ಕಾರ ಹಾಗೂ ಪಕ್ಷದಲ್ಲಿ ಯಾವುದೇ ಸ್ಥಾನವಿಲ್ಲವೆನ್ನುವ ಎನ್ನುವ ಎಚ್ಚರಿಕೆ ಸಂದೇಶವನ್ನು ನೀಡಿದೆ.

ಸಚಿನ್ ಪೈಲಟ್ , ಕಾಂಗ್ರೆಸ್ ನಡುವೆ ಮತ್ತಷ್ಟು ಅಂತರ

ಸಚಿನ್ ಪೈಲಟ್ , ಕಾಂಗ್ರೆಸ್ ನಡುವೆ ಮತ್ತಷ್ಟು ಅಂತರ

ಹೀಗಾಗಿ ಸಚಿನ್ ಪೈಲಟ್ ಹಾಗೂ ಕಾಂಗ್ರೆಸ್ ನಡುವಿನ ಅಂತರ ಮತ್ತಷ್ಟು ಹೆಚ್ಚಾಗುತ್ತಿದೆ. ಏತನ್ಮಧ್ಯೆ ಇಂದು ಸಂಜೆಯೊಳಗೆ ಸಚಿನ್ ಪೈಲಟ್ ಬಗ್ಗೆ ವರದಿಯನ್ನು ನೀಡುವಂತೆ ಸೋನಿಯಾ ಗಾಂಧಿಯು ಶಿಸ್ತು ಪಾಲನಾ ಸಮಿತಿಗೆ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಸಚಿನ್ ಪೈಲಟ್ ಅವರು ಪಕ್ಷ ವಿರೋಧಿ ನೀತಿಗೆ ಸಂಬಂಧಿಸಿದಂತೆ ವರದಿ ನೀಡಲಿದ್ದಾರೆ.

ಸಚಿನ್ ಪೈಲಟ್ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ಸಿದ್ಧತೆ

ಸಚಿನ್ ಪೈಲಟ್ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ಸಿದ್ಧತೆ

ಈ ವರದಿಯನ್ನಾಧರಿಸಿ ಸಚಿನ್ ಪೈಲಟ್ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಬಹುದು ಎನ್ನಲಾಗುತ್ತಿದೆ.

ಇದರ ಜೊತೆಗೆ ಅಶಫ್ ಗೆಹ್ಲೋಟ್ ವರ್ತನೆ ಬಗ್ಗೆಯೂ ಪಕ್ಷದ ಅಸಮಾಧಾನವಿರುವ ಹಿನ್ನೆಲೆಯಲ್ಲಿ ಅಶೋಕ್ ಗೆಹ್ಲೋಟ್ ಅವರಿಂದಲೂ ಸಚಿನ್ ಪೈಲಟ್ ವಿರುದ್ಧದ ಕ್ರಮದ ಬಗ್ಗೆಯೂ ವಿವರ ಕೇಳುವ ಸಾಧ್ಯತೆ ಇದೆ.

ರಾಜ್ಯಪಾಲರಿಗೆ ವಿವರಣೆ

ರಾಜ್ಯಪಾಲರಿಗೆ ವಿವರಣೆ

ಇನ್ನೊಂದೆಡೆ ರಾಜ್ಯಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜಸ್ಥಾನ ರಾಜ್ಯಪಾಲ ಕಳ್ರಾಜ್ ಮಿಶ್ರಾ ಅವರನ್ನು ಭೇಟಿಯಾಗಿ, ಸರ್ಕಾರದ ಇತ್ತೀಚಿನ ಬೆಳವಣಿಗೆಗಳ ಕುರಿತು ವಿವರಣೆಯನ್ನು ನೀಡಿ ಬಂದಿದ್ದಾರೆ.

ಹಾಗೆಯೇ ಸಚಿನ್ ಪೈಲಟ್ ಹಾಗೂ ಇನ್ನಿಬ್ಬರು ಸಚಿವರನ್ನು ಸರ್ಕಾರದಿಂದ ಉಚ್ಛಾಟನೆ ಮಾಡಿರುವ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ರಾಜಪಾಲರನ್ನು ಭೇಟಿಯಾಗಿ ಬಳಿಕ ಮಾತನಾಡಿರುವ ಅಶೋಕ್ ಗೆಹ್ಲೋಟ್ ಕಳೆದ ಐದಾರು ತಿಂಗಳಿನಿಂದ ಸಚಿನ್ ಪೈಲಟ್ ಪಕ್ಷ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ.

ಸರ್ಕಾರದ ವಿರದ್ಧದ ಕೆಲಸ

ಸರ್ಕಾರದ ವಿರದ್ಧದ ಕೆಲಸ

ಸರ್ಕಾರದ ವಿರುದ್ಧ ಕೆಲಸಗಳನ್ನು ಮಾಡುತ್ತಿರುವಾಗ ಇಂತಹ ಕ್ರಮಗಳು ಅನಿವಾರ್ಯವಾಗುತ್ತದೆ. ಒಂದೊಮ್ಮೆ ಪಕ್ಷದ ನಾಯಕತ್ವದ ಬಗ್ಗೆ ಸಹಮತವಿರದಿದ್ದರೆ, ಶಾಸಕಾಂಗ ಪಕ್ಷದ ಸಭೆಗೆ ಭಾಗಿಯಾಗಿ ಅಲ್ಲಿ ತಮ್ಮ ಧ್ವನಿಯನ್ನು ಎತ್ತಬೇಕು. ಆದರೆ ದೂರದಲ್ಲಿದ್ದುಕೊಂಡು ಸರ್ಕಾರಕ್ಕೆ ಬಹುಮತವಿಲ್ಲ , ಬಹುಮತ ಸಾಬೀತುಪಡಿಸಿ ಎಂದು ಹೇಳುವುದು ಪಕ್ಷ ವಿರೋಧಿ ನೀತಿಯಾಗುತ್ತದೆ.ಒಂದು ಪಕ್ಷದ ಒಳಗೇ ಇದ್ದುಕೊಂಡು ಹೊರಗೆ ಹೇಳುವ ಹೇಳಿಕೆಯಲ್ಲ, ಇಂತಹ ಹೇಳಿಕೆಗಳು ಪಕ್ಷ ವಿರೋಧಿಯಾಗುತ್ತವೆ ಎಂದು ಹೇಳಿದ್ದಾರೆ.

English summary
Sachin Pilot tweets "Truth can be harassed, not defeated" shortly after being sacked as Rajasthan Deputy Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X