• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾಮೂಹಿಕ ಅತ್ಯಾಚಾರ ನಡೆಸಿ ಹಲ್ಲೆ: ಬೆತ್ತಲಾಗಿ ಓಡಿದ ಯುವತಿ

|

ಜೈಪುರ, ಸೆಪ್ಟೆಂಬರ್ 14: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ದುಷ್ಕರ್ಮಿಗಳಿಂದ ಹಲ್ಲೆಗೆ ಗುರಿಯಾದ ಯುವತಿಯೊಬ್ಬಳು ಪ್ರಾಣ ರಕ್ಷಣೆಗಾಗಿ ಸುಮಾರು ಅರ್ಧ ಕಿ.ಮೀ. ದೂರ ಬೆತ್ತಲಾಗಿ ಓಡಿದ ಹೃದಯಕಲಕುವ ಘಟನೆ ರಾಜಸ್ಥಾನದ ಬಿಲ್ವಾರಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಜೀವ ಉಳಿಸಿಕೊಳ್ಳಲು ಕಂಗಾಲಾಗಿ ಓಡುತ್ತಿದ್ದ ಯುವತಿಯನ್ನು ಕಂಡ ದಾರಿಹೋಕರು ಆಕೆಯನ್ನು ರಕ್ಷಿಸಿ ಮೈಮುಚ್ಚಿಕೊಳ್ಳಲು ಬಟ್ಟೆ ನೀಡಿದ್ದಲ್ಲದೆ, ಆಕೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಪೊಲೀಸ್ ವಿಚಾರಣೆ

ಘಟನೆ ಸಂಬಂಧ ಮೂವರು ಆರೋಪಿಗಳಾದ ನಾರಾಯಣ ಗುರ್ಜಾರ್, ಕೈಲಾಶ್ ಕಹಾರ್ ಮತ್ತು ರಾಜು ಕಹಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಯುವತಿ ಮತ್ತು ಆಕೆಯ ಸ್ನೇಹಿತರು ಉತ್ಸವವೊಂದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಆಗ ಮದ್ಯದ ಅಮಲಿನಲ್ಲಿದ್ದ ಮೂವರು ಅವರನ್ನು ಅಡ್ಡಗಟ್ಟಿದ್ದರು. ಆಕೆಯ ಸ್ನೇಹಿತೆಯರು ತಪ್ಪಿಸಿಕೊಳ್ಳಲು ಯಶಸ್ವಿಯಾದರು. ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಸಮೀಪದ ಮೈದಾನವೊಂದಕ್ಕೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದರು. ಆಕೆಯ ಬಟ್ಟೆಗಳನ್ನೆಲ್ಲ ಹರಿದು ಹಲ್ಲೆ ನಡೆಸಿದರು.

ನ್ಯಾಯ ಬೇಡಿ ಪಂಚಾಯ್ತಿಗೆ ಬಂದ್ರೆ ಅತ್ಯಾಚಾರ ಸಂತ್ರಸ್ತ ಬಾಲಕಿಗೆ ಕಾದಿತ್ತು ಶಾಕ್

ಅವರಿಂದ ಕೊನೆಗೂ ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಯುವತಿ, ಬಟ್ಟೆಗಳಿಲ್ಲದ ಕಾರಣ ಬೆತ್ತಲಾಗಿಯೇ ಸುಮಾರು ಅರ್ಧ ಕಿ.ಮೀ ಓಡಿದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
A girl ran naked for nearly half a kilometre after she got gangraped and beaten by three men in Rajasthan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X