• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೋಚಕ ದಿಕ್ಕಿನಲ್ಲಿ ರಾಜಸ್ಥಾನ ಚುನಾವಣೆ: ರಾಜೆ ವಿರುದ್ಧ ಬಲಾಢ್ಯ ಅಭ್ಯರ್ಥಿ!

|

ಜೈಪುರ, ನವೆಂಬರ್ 17: ಡಿಸೆಂಬರ್ ನಲ್ಲಿ ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆ ರೋಚಕಘಟ್ಟ ತಲುಪುವ ಸಾಧ್ಯತೆ ಹೆಚ್ಚಾಗಿದೆ.

ಇಂದು ತಾನೇ ಕಾಂಗ್ರೆಸ್ ಬಿಡುಗಡೆ ಮಾಡಿದ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹಾಲಿ ಮುಖ್ಯಮಂತ್ರಿ ಬಿಜೆಪಿಯ ವಸುಂಧರಾ ರಾಜೆ ಅವರ ವಿರುದ್ಧ ಬಿಜೆಪಿ ಮಾಜಿ ನಾಯಕ ಮನ್ವೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ರಾಜಸ್ಥಾನದಲ್ಲಿ ಬಿಜೆಪಿಗೆ ಬಿಗ್ ಶಾಕ್, ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ!

ಇತ್ತೀಚೆಗಷ್ಟೇ ಬಿಜೆಪಿ ತೊರೆದು ಮನ್ವೇಂದ್ರ ಸಿಂಗ್ ಕಾಂಗ್ರೆಸ್ ಸೇರಿದ್ದರು. ಬಿಜೆಪಿಯ ಪ್ರಮುಖ ನಾಯಕರಲ್ಲೊಬ್ಬರಾಗಿದ್ದ ಮನ್ವೇಂದ್ರ ಸಿಂಗ್ ಚುನಾವಣೆ ಹೊಸ್ತಿಲಲ್ಲಿರುವಾಗ ಬಿಜೆಪಿ ತೊರೆದು ವಿಪಕ್ಷ ಕಾಂಗ್ರೆಸ್ ಅನ್ನು ಸೇರಿದ್ದು ಬಿಜೆಪಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿತ್ತು.

ಮುಖಾಮುಖಿಯಾಗಲಿರುವ ಇಬ್ಬರು ದಿಗ್ಗಜರು

ಮುಖಾಮುಖಿಯಾಗಲಿರುವ ಇಬ್ಬರು ದಿಗ್ಗಜರು

ಬಿಜೆಪಿಯ ಮಾಜಿ ಮುಖಂಡ ಮನ್ವೇಂದ್ರ ಸಿಂಗ್ ಅವರನ್ನು ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ವಿರುದ್ಧ ನಿಲ್ಲಿಸುವ ಕಾಂಗ್ರೆಸ್ ನಡೆ ಬಿಜೆಪಿಗೆ ಬಹುದೊಡ್ಡ ಹಿನ್ನಡೆಯನ್ನುಂಟು ಮಾಡಿದರೆ ಅಚ್ಚರಿಯಿಲ್ಲ. ಬಿಜೆಪಿಯ ಒಳಹುಳುಕುಗಳನ್ನೆಲ್ಲ ಬಲ್ಲ ಮನ್ವೇಂದ್ರ ಅವರು ರಾಜೆ ಅವರನ್ನು ಸಮರ್ಥವಾಗಿ ಎದುರಿಸಲು ಬೇಕಾದ ಎಲ್ಲಾ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ರಾಜೆ ಅವರ ವಿರುದ್ಧ ಯಾವೆಲ್ಲ ಅಸ್ತ್ರಗಳನ್ನು ಹರಿಬಿಡಬೇಕು ಎಂಬುದನ್ನೂ ಅವರು ಬಲ್ಲರು!

'ಬ್ರಿಟಿಷರು ಇನ್ನೂ ನೂರು ವರ್ಷ ಭಾರತವನ್ನು ಆಳಿದ್ದರೆ ಚೆನ್ನಾಗಿರುತ್ತಿತ್ತು!'

ರಾಜೆ ವಿರುದ್ಧ ಆಡಳಿತ ವಿರೋಧಿ ಅಲೆ

ರಾಜೆ ವಿರುದ್ಧ ಆಡಳಿತ ವಿರೋಧಿ ಅಲೆ

ರಾಜಸ್ಥಾನದಲ್ಲಿ ಬಿಜೆಪಿ ಬಗ್ಗೆ ಉತ್ತಮ ಅಭಿಪ್ರಾಯವಿದ್ದರೂ, ಕೆಲವರಿಗೆ ರಾಜೆ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಅವರ ದುರಹಂಕಾರವೇ ಬಿಜೆಪಿಗೆ ಹಿನ್ನಡೆಯನ್ನುಂಟು ಮಾಡಿದೆ ಎನ್ನಲಾಗುತ್ತಿದೆ. ಇದೀಗ ಬಿಜೆಪಿಯ ಮಾಜಿ ನಾಯಕರೇ ರಾಜೆ ಅವರ ವಿರುದ್ಧ ನಿಂತರೇ ಜನರು ಮನ್ವೇಂದ್ರ ಅವರಿಗೇ ಮತಹಾಕುವ ಸಾಧ್ಯತೆ ಹೆಚ್ಚು. ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿರುವ ಮನ್ವೇಂದ್ರ ಅವರು ರಾಜೆ ಅವರಿಗೆ ಅತೀ ಕಠಿಣ ಪ್ರತಿಸ್ಪರ್ಧಿ ಎಂಬುದಂತೂ ಸತ್ಯ!

ರಾಜಸ್ಥಾನ : ಕಾಂಗ್ರೆಸ್ ಸೇರಿದ ಜಸ್ವಂತ್ ಪುತ್ರ, ಬಿಜೆಪಿಗೆ ಭಾರಿ ಹಿನ್ನಡೆ

 ಅಭ್ಯರ್ಥಿಗಳ ಪಟ್ಟಿ

ಅಭ್ಯರ್ಥಿಗಳ ಪಟ್ಟಿ

ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಬಿಡುಗಡೆ ಮಾಡಿದ್ದಾರೆ. ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ 152 ಮತ್ತು ಎರಡನೇ ಪಟ್ಟಿಯಲ್ಲಿ 32 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿತ್ತು. ಬಿಜೆಪಿಯು ವಾರಗಳ ಮೊದಲೇ ತನ್ನ 131 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 31 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ನ.14 ರಂದು ಬಿಡುಗಡೆ ಮಾಡಿತ್ತು.

ಚುನಾವಣೆ ಎಂದು?

ಚುನಾವಣೆ ಎಂದು?

200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ರಾಜಸ್ಥಾನದೊಟ್ಟಿಗೆ ಮಧ್ಯಪ್ರದೇಶ, ಛತ್ತೀಸ್ ಗಢ, ತೆಲಂಗಾಣ ಮತ್ತು ಮಿಜೋರಾಂ ರಾಹ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಅಂದೇ ಹೊರಬೀಳಲಿದೆ.

English summary
The Congress on Saturday released a second list of 32 candidates for the upcoming Rajasthan Assembly elections. The party has fielded Manvendra Singh, a former BJP leader, to contest against Chief Minister Vasundhara Raje from the Jhalrapatan Assembly constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X