ಆಡಿಯೋ ಕ್ಲಿಪ್ ಕೇಸ್: ಕಾಂಗ್ರೆಸ್ ಆರೋಪ ಅಲ್ಲಗೆಳೆದ ಕೇಂದ್ರ ಸಚಿವ

ಜೈಪುರ, ಜುಲೈ 17: ರಾಜಸ್ಥಾನದಲ್ಲಿ ಕಾಂಗ್ರೆಸ್ ಆಂತರಿಕ ಬಿಕ್ಕಟ್ಟು, ಸಚಿನ್ ಪೈಲಟ್ ಸೇರಿದಂತೆ ಹಲವಾರು ಶಾಸಕರಿಗೆ ನೋಟಿಸ್, ಕುದುರೆ ವ್ಯಾಪಾರದ ಆರೋಪ-ಪ್ರತ್ಯಾರೋಪ ಜೋರಾಗಿ ನಡೆದಿದೆ. ಈ ನಡುವೆ ಶಾಸಕರ ಖರೀದಿಗಾಗಿ ಯತ್ನಿಸಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಬಗ್ಗೆ ಕೇಂದ್ರ ಸಚಿವ ಶೆಖಾವತ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಪಕ್ಷದವರು ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ಪಿಂಗ್ ನಲ್ಲಿರುವ ಧ್ವನಿ ನನ್ನದ್ದಲ್ಲ, ನಾನು ಯಾವ ತನಿಖೆ ಬೇಕಾದರೂ ಎದುರಿಸಬಲ್ಲೆ ಎಂದು ಗಜೇಂದ್ರ ಸಿಂಗ್ ಶೆಖಾವತ್ ಹೇಳಿದ್ದಾರೆ.

ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಬೆಂಬಲಿತ ಕಾಂಗ್ರೆಸ್ ಬಂಡಾಯ ಶಾಸಕ ಭನ್ವರ್ ಲಾಲ್ ಶರ್ಮ ನಡುವೆ ನಡೆದ ಸಂಭಾಷಣೆಯ ಕ್ಲಿಪ್ಪಿಂಗ್ ಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಈ ಮೂಲಕ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರ ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿತ್ತು.

Rajasthan Crisis: This Is Not My Voice, Ready To Face Probe: Gajendra Singh Shekhawat On Audio Tape

ಈ ಕುರಿತಂತೆ ಎರಡು ಎಫ್ಐಆರ್ ಕೂಡಾ ದಾಖಲಾಗಿದೆ. ಉದ್ಯಮಿ ಸಂಜಯ್ ಜೈನ್ ಎಂಬುವವರ ಹೆಸರು ಪ್ರಕರಣದಲ್ಲಿ ಉಲ್ಲೇಖವಾಗಿದೆ. ರಾಜಸ್ಥಾನದಲ್ಲಿ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲೇ ಬಿಜೆಪಿ ಈ ರೀತಿ ಯತ್ನಕ್ಕೆ ಕೈ ಹಾಕಿತ್ತು ಎಂದು ಈ ಹಿಂದೆ ಸಿಎಂ ಅಶೋಕ್ ಕೂಡಾ ಆರೋಪಿಸಿದ್ದರು. ಆದರೆ, ಎಲ್ಲಾ ಆರೋಪಗಳನ್ನು ಬಿಜೆಪಿ ಅಲ್ಲಗೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+