ರಾಜಸ್ಥಾನ : ಕಾಂಗ್ರೆಸ್ಸಿನಿಂದ 28 ಬಂಡಾಯಗಾರರ ಉಚ್ಚಾಟನೆ

ಜೈಪುರ, ನವೆಂಬರ್ 26: ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ರಂಗು ಪ್ರತಿದಿನ ಹೆಚ್ಚಾಗುತ್ತಿದ್ದು, ಬಿಜೆಪಿಯಂತೆ ಕಾಂಗ್ರೆಸ್ಸಿನಲ್ಲೂ ಬಂಡಾಯಗಾರರ ಬಿಸಿ ತಟ್ಟಿದೆ.

ಚುನಾವಣೆ ದಿನಾಂಕ(ಡಿಸೆಂಬರ್ 07) ಹತ್ತಿರವಾಗುತ್ತಿದ್ದಂತೆ ಭಿನ್ನಮತೀಯ ಚಟುವಟಿಕೆಗಳು ಕಂಡು ಬರುತ್ತಿದ್ದು, ಪಕ್ಷದಲ್ಲಿನ ಟಿಕೆಟ್ ಕಲಹವನ್ನು ಹತ್ತಿಕ್ಕಲು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ಅವರು ಯತ್ನಿಸುತ್ತಿದ್ದಾರೆ.

ರಾಜಸ್ಥಾನದಲ್ಲಿ ಒಂಬತ್ತು ಶಾಸಕರು ಮತ್ತು ಮಾಜಿ ಕೇಂದ್ರ ಸಚಿವರು ಸೇರಿ 28 ಕಾಂಗ್ರೆಸ್‌ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

Rajasthan Congress expels 28 rebel leaders ahead of December 7 polls

ಪಕ್ಷದಿಂದ ಟಿಕೆಟ್‌ ನೀಡಿದ್ದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಈ ರೀತಿ ಕ್ರಮ ಜರುಗಿಸುವಂತೆ ರಾಜ್ಯಾಧ್ಯಕ್ಷ ಸಚಿನ್ ಪೈಲಟ್ ಆದೇಶಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಮಹಾದೇವ್‌ ಸಿಂಗ್‌ ಖಂಡೇಲಾ, ಮಾಜಿ ಶಾಸಕ ಸನ್ಯಮ್‌ ಲೋಧಾ, ನಾತು ರಾಮ್‌ ಸಿನೋದಿಯಾ, ನಾವಲ್‌ ಕಿಶೋರ್‌ ಮೀನಾ, ಖುಶ್ವೀರ್‌ ಸಿಂಗ್, ಸೋಹನ್‌ ನಾಯಕ್, ಸಿಎಸ್‌ ಬೈದ್, ಮೇಶ್‌ ಚಾಂದ್‌ ಖಂಡೇವಾರ ಮತ್ತು ರಮೇಶ್‌ ಖಿಂಚಿಯನ್ನು ಉಚ್ಚಾಟಿಸಲಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ಆರೋಪ ಹೊತ್ತುಕೊಂಡಿದ್ದಾರೆ.

200 ವಿಧಾನಸಭಾ ಕ್ಷೇತ್ರಗಳ ರಾಜಸ್ಥಾನದಲ್ಲಿ ಡಿಸೆಂಬರ್ 7ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 11ರಂದು ಫಲಿತಾಂಶ ಹೊರಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+