• search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾತಿ, ಜಾತಿ, ಜಾತಿ... ರಾಜಸ್ಥಾನ ರಾಜಕೀಯದ ಮೂಲಮಂತ್ರ!

By ವಿನೋದ್ ಕುಮಾರ್ ಶುಕ್ಲಾ
|

ಜೈಪುರ, ಡಿಸೆಂಬರ್ 07: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸಂಗತಿಗಳು ಮೂರು... 1. ಜಾತಿ, 2. ಜಾತಿ, 3. ಜಾತಿ!

ನಿಜ, ಕರ್ನಾಟಕಕ್ಕೂ ರಾಜಸ್ಥಾನ ಚುನಾವಣೆಗೂ ಹೆಚ್ಚು ವ್ಯತ್ಯಾಸವಿಲ್ಲ. ಎರಡು ರಾಜ್ಯಗಳಲ್ಲೂ ಜಾತಿಯೇ ಮೂಲಮಂತ್ರ. ಈ ಬಾರಿಯೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಜಾತಿಯೇ ನಿರ್ಣಾಯಕ ಸ್ಥಾನದಲ್ಲಿ ನಿಲ್ಲಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

ವಿಧಾನಸಭೆ ಚುನಾವಣೆ LIVE: ರಾಜಸ್ಥಾನ, ತೆಲಂಗಾಣದಲ್ಲಿ ಘಟಾನುಘಟಿಗಳಿಂದ ಮತದಾನ

ರಾಜಸ್ಥಾನದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ವಸುಂಧರಾ ರಾಜೆ ನೇತೃತ್ವದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಈ ಕಾರಣದಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದ್ದು, ಉಭಯ ಪಕ್ಷಗಳೂ ಜಾತಿಯನ್ನೇ ಬ್ರಹ್ಮಾಸ್ತ್ರವನ್ನಾಗಿ ಪ್ರಯೋಗಿಸಿವೆ.

 ಜಾತಿಯದ್ದೇ ಕಾರುಬಾರು!

ಜಾತಿಯದ್ದೇ ಕಾರುಬಾರು!

ರಾಜಸ್ಥಾನದಲ್ಲಿ ಸುಮಾರು 60 ಕ್ಷೇತ್ರಗಳಲ್ಲಿ ಬಿಜೆಪಿ ಯಾವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆಯೋ, ಅದೇ ಸಮುದಾಯದ ಅಭ್ಯರ್ಥಿಯನ್ನು, ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಸಹ ಕಣಕ್ಕಿಳಿಸಿದೆ. ಅಂದರೆ ಅಭ್ಯರ್ಥಿಯ ಅಭಿವೃದ್ಧಿ ಕಾರ್ಯಗಳಿಗಿಂತ ಆತನ ಜಾತಿಯೇ ಪ್ರಮುಖ ಪಾತ್ರ ವಹಿಸುತ್ತದೆ ಎಂದಾಯ್ತು! ಬಿಜೆಪಿ ಅಥವಾ ಕಾಂಗ್ರೆಸ್ ಯಾವುದೇ ಗೆದ್ದರೂ ಶಾಸಕರು ಮಾತ್ರ ಒಂದೇ ಸಮುದಾಯದವರಾಗಿರುತ್ತಾರೆ.

ಈ ಜಾತಿ ರಾಜಕಾರಣದ ತರ್ಕವೇನು?

ಈ ಜಾತಿ ರಾಜಕಾರಣದ ತರ್ಕವೇನು?

ದೇಶದ ಚುನಾವಣಾ ಇತಿಹಾಸವನ್ನು ಅವಲೋಕಿಸಿದರೆ ಒಂದು ಕ್ಷೇತ್ರದಲ್ಲಿ ಯಾವುದೇ ಒಂದು ನಿರ್ದಿಷ್ಟ ಸಮುದಾಯದ ಮತಗಳು ಶೇ.10 ಕ್ಕಿಂತ ಹೆಚ್ಚಿದ್ದರೆ ಆ ಸಮುದಾಯದ ಅಭ್ಯರ್ಥಿ ಗೆಲ್ಲುತ್ತಾನೆ. ಒಟ್ಟಾರೆಯಾಗಿ ನೋಡಿದರೆ, ಯಾವ ಸಮುದಾಯದ ಮತಗಳು ಶೇ.10 ಕ್ಕಿಂತ ಹೆಚ್ಚಿದೆಯೋ ಆ ಸಮುದಾಯವೇ ಸರ್ಕಾರ ರಚನೆಗೂ ಸಹಕರಿಸಿದೆ. ಆದ್ದರಿಂದಲೇ ಜಾತಿಯೇ ರಾಜಕೀಯದ ಮೂಲಮಂತ್ರವಾಗಿ ಬದಲಾಗಿದೆ.

ರಾಜಸ್ಥಾನ ಚುನಾವಣೆ, ಅಂಕಿ-ಸಂಖ್ಯೆ: ಚಿತ್ರ ಮಾಹಿತಿ

ರಾಜಸ್ಥಾನದಲ್ಲಿ 272 ಜಾತಿ!

ರಾಜಸ್ಥಾನದಲ್ಲಿ 272 ಜಾತಿ!

ರಾಜಸ್ಥಾನದಲ್ಲಿ ಒಟ್ಟು 272 ಜಾತಿಗಳಿವೆ. ಇವುಗಳಲ್ಲಿ ಶೇ.51 ರಷ್ಟು ಜನರು ಇತರ ಹಿಂದುಳಿದ ವರ್ಗ(ಒಬಿಸಿ)ಕ್ಕೆ ಸೇರಿದವರು. ಜಾತ್ ಸಮುದಾಯದವರು 9%, ಗುಜ್ಜಾರ್ 5%, ಮಾಲಿ 4%, ಪರಿಶಿಷ್ಠ ಜಾತಿಯ 18% ರಷ್ಟು ಜನರಿದ್ದಾರೆ. ಇನ್ನು ಈ ರಾಜ್ಯದಲ್ಲಿ ಇತರೆ 59 ಉಪಜಾತಿಗಳಿದ್ದು, ಅವುಗಳಲ್ಲಿ ಮೆಘಾವತ್ 6%, ಬೈರವ 3 %, ಭೀಲ್ 4% ಮತ್ತು ಇತರರು 18 ಪ್ರತಿಶತ ಜನರಿದ್ದಾರೆ. ಬ್ರಾಹ್ಮಣರು 7%, ರಜಪೂತರು 6% ಮತ್ತು ವೈಶ್ಯ 4 % ಪ್ರತಿಶತ ಜನರಿದ್ದಾರೆ.

ಯಾವೆಲ್ಲ ಜಾತಿಗಳು ಪ್ರಭಾವಿಗಳು

ಯಾವೆಲ್ಲ ಜಾತಿಗಳು ಪ್ರಭಾವಿಗಳು

ರಾಜಸ್ಥಾನದ ರಾಜಕೀಯದಲ್ಲಿ ಜಾತ್, ಮೀನಾ, ರಾಜಪೂತ್ ಮತ್ತು ಬ್ರಾಹ್ಮಣ ಸಮುದಾಯದ ಜನರು ಪ್ರಭಾವಿಗಳು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಈ ಸಮುದಾಯಗಳ ಒಟ್ಟು 60 ನಾಯಕರನ್ನು ತಮ್ಮ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿವೆ. ಆಯಾ ಜಾತಿಯ ಅಭ್ಯರ್ಥಿಯ ಎದುರು ಅದೇ ಜಾತಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ಪಗಡೆಯಾಟದ ದಾಳವನ್ನು ಜಾತಿಯ ಅಂಗಳದಲ್ಲಿರಿಸಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ಬಹುಮತ: ಎನ್ ಡಿಟಿವಿ ವಿಶ್ಲೇಷಣೆ

ಡಿಸೆಂಬರ್ 11 ರಂದು ಫಲಿತಾಂಶ

ಡಿಸೆಂಬರ್ 11 ರಂದು ಫಲಿತಾಂಶ

ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದು, ಮತದಾನ ಡಿ. ರಂದು ನಡೆದಿದೆ. ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಲಿದೆ. ಇಲ್ಲಿನ ಆಲ್ವಾರ್ ಜಿಲ್ಲೆಯ ರಾಮಗರ್ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ನ.29 ರಂದು ಹೃದಯಾಘಾತದಿಂದ ಮೃತರಾದ ಕಾರಣ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಆದ್ದರಿಂದ ನಾಳೆ 199 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ.

ಜೈಪುರ ರಣಕಣ
ಡೆಮೊಗ್ರಫಿಕ್ಸ್
ಜನಸಂಖ್ಯೆ
32,76,861
ಜನಸಂಖ್ಯೆ
 • ಗ್ರಾಮೀಣ
  5.76%
  ಗ್ರಾಮೀಣ
 • ನಗರ
  94.24%
  ನಗರ
 • ಎಸ್ ಸಿ
  13.55%
  ಎಸ್ ಸಿ
 • ಎಸ್ ಟಿ
  4.31%
  ಎಸ್ ಟಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Election process is going on in Rajasthan but this year’s election has some very peculiar feature with caste being preferred over development work and election is being considered more caste-based than anything else. This is the reason that both the Congress and the BJP have fielded candidates belonging to the same community on at least 60 same seats.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more