ಜೈಪುರ್ ನಲ್ಲಿ ತುರ್ತಾಗಿ ಇಳಿಯಿತು ಕರಾಚಿ ಮೂಲದ ಖಾಸಗಿ ವಿಮಾನ

ಜೈಪುರ್ (ರಾಜಸ್ತಾನ), ನವೆಂಬರ್ 20 : ಕರಾಚಿ ಮೂಲದ ಸೆಸ್ನಾ ವಿಮಾನವನ್ನು ತುರ್ತು ಕಾರಣಕ್ಕಾಗಿ ಜೈಪುರ್ ವಿಮಾನ ನಿಲ್ದಾಣದಲ್ಲಿ ಇಳಿಸಲು ಮಂಗಳವಾರ ಅನುವು ಮಾಡಿಕೊಡಲಾಗಿದೆ. ವಿಮಾನದ ಬಾಗಿಲು ತೆರೆದುಕೊಂಡಿದೆ ಎಂಬ ಸೂಚನೆ ಸಿಕ್ಕಿದ್ದರಿಂದ ಪೈಲಟ್ ತುರ್ತಾಗಿ ವಿಮಾನವನ್ನು ಜೈಪುರ್ ನ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ.

ಈ ಖಾಸಗಿ ವಿಮಾನದಲ್ಲಿ ಕಾಕ್ ಪಿಟ್ ನ ಸಿಬ್ಬಂದಿ ಮಾತ್ರ ಇದ್ದರು. ನಿಗದಿಯಂತೆ ಲಖನೌದಿಂದ ಕರಾಚಿಗೆ ತೆರಳುತ್ತಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳು ಮಾತನಾಡಿ, ಕರಾಚಿ ಮೂಲದ SR-20 ವಿಮಾನದಲ್ಲಿ ಮಂಗಳವಾರ ಬೆಳಗ್ಗೆ ಪೈಲಟ್ ಲಖನೌದಿಂದ ಕರಾಚಿಗೆ ಹೊರಟಿದ್ದರು.

ವಿಮಾನದ ಬಾಗಿಲು ತೆರೆದುಕೊಂಡಿದೆ ಎಂಬ ಸೂಚನೆ ಬರುತ್ತಿದೆ ಎಂದು ಜೈಪುರ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ಮಾಹಿತಿ ನೀಡಿ, ಸುರಕ್ಷತೆಗಾಗಿ ವಿಮಾನದ ಬಾಗಿಲ ಪರಿಶೀಲನೆ ಮಾಡಬೇಕು. ಆದ್ದರಿಂದ ತುರ್ತಾಗಿ ಇಳಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Pakistan bound plane makes priority landing in Jaipur

ಎಟಿಸಿಯಿಂದ ಅನುಮತಿ ದೊರೆತ ನಂತರ ಸುರಕ್ಷಿತವಾಗಿ ನಿಲ್ದಾಣದಲ್ಲಿ ಇಳಿದಿದೆ. ಕಾರ್ಯಾಚರಣೆಗೆ ಇರುವ ಪ್ರಕ್ರಿಯೆ ಅನುಸಾರ ರಾಜ್ಯ ಗುಪ್ತಚರ ದಳ ಹಾಗೂ ವಿಮಾನಯಾನ ಭದ್ರತಾ ಸಂಸ್ಥೆಗೆ ಘಟನೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣ ತಂಡ ಹಾಗೂ ಭದ್ರತಾ ಸಂಸ್ಥೆಯಿಂದ ಪರಿಶೀಲನೆ ನಡೆಸಿದ ನಂತರ ಕರಾಚಿಗೆ ವಿಮಾನ ತೆರಳಲು ಅನುಮತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+