ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ತಾನ ಅಖಾಡದಲ್ಲಿ ಮೋದಿ-ಯೋಗಿಯೇ ಬಿಜೆಪಿಗೆ ಜೀವಾಳ, ಕಾಂಗ್ರೆಸ್ ಗೆ ರಾಹುಲ್

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

ರಾಜಸ್ತಾನ ವಿಧಾನಸಭಾ ಚುನಾವಣೆ ದಿನದಿನಕ್ಕೂ ರಂಗೇರುತ್ತಿದೆ. ಏನೇನೋ ಸುದ್ದಿ ಬರುತ್ತದೆ. ಅವರು ಬಿಜೆಪಿ ಬಿಟ್ಟರಂತೆ. ಕಾಂಗ್ರೆಸ್ಸಿನಲ್ಲಿ ಒಳಜಗಳವಂತೆ. ಹೀಗೆ 'ಅಂತೆ'ಗಳದೇ ಕಾರುಬಾರು. ಇಂತಹ ಚುನಾವಣಾ ಕಣದಲ್ಲಿ ಬಿಜೆಪಿಯು ಬಹುವಾಗಿ ನೆಚ್ಚಿಕೊಂಡಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು.

ಇನ್ನೊಂದು ಕಡೆ ಕಾಂಗ್ರೆಸ್ ನಿಂದ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರಕ್ಕೆ ಬೇಡಿಕೆ ಇದೆ. ಅವರು ರಾಜ್ಯದ ಪ್ರತಿ ಭಾಗದಲ್ಲಿ ಕನಿಷ್ಠ ಎರಡು ಪ್ರಚಾರ ಸಭೆ ನಡೆಸುವ ಸಾಧ್ಯತೆ ಇದೆ. ನರೇಂದ್ರ ಮೋದಿ ರಾಜಸ್ತಾನದಲ್ಲಿ ಹತ್ತು ಪ್ರಚಾರ ಸಭೆ ನಡೆಸಬೇಕೆಂದು ನಿರ್ಧರಿಸಲಾಗಿತ್ತು. ಇನ್ನು ಯೋಗಿ ಆದಿತ್ಯನಾಥ್ ಇಪ್ಪತ್ತೊಂದು ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜಸ್ಥಾನ ಬಿಜೆಪಿಗೆ ಮತ್ತೆ ಬಿಗ್ ಶಾಕ್: ತಲೆನೋವಾದ ರಾಜೀನಾಮೆ ಪರ್ವ!ರಾಜಸ್ಥಾನ ಬಿಜೆಪಿಗೆ ಮತ್ತೆ ಬಿಗ್ ಶಾಕ್: ತಲೆನೋವಾದ ರಾಜೀನಾಮೆ ಪರ್ವ!

ಅದೇ ರೀತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ವಸುಂಧರಾ ರಾಜೇ ಸಾಕಷ್ಟು ಸಂಖ್ಯೆಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ಅವರನ್ನು ರಾಜಸ್ತಾನದ ಚುನಾವಣೆ ಪ್ರಚಾರದ ಮುಂಚೂಣಿಗೆ ತರಲಾಗಿದೆ. ಒಟ್ಟಾರೆಯಾಗಿ ಈ ಎಲ್ಲ ನಾಯಕರ ಸುತ್ತ ಬಿಜೆಪಿ ಚುನಾವಣೆ ಅಭಿಯಾನ ನಡೆಯಲಿದೆ.

ಪ್ರಧಾನಿ ಮೋದಿ ಹಾಗೂ ಯೋಗಿ ಪ್ರಮುಖ ಪ್ರಚಾರಕರು

ಪ್ರಧಾನಿ ಮೋದಿ ಹಾಗೂ ಯೋಗಿ ಪ್ರಮುಖ ಪ್ರಚಾರಕರು

ನವೆಂಬರ್ 21ರಂದು ಜೈಪುರ್ ಹಾಗೂ ಬಿಕನೇರ್ ನಲ್ಲಿ ರೋಡ್ ಶೋ ಮೂಲಕ ಅಮಿತ್ ಶಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆ ನಂತರ ಪ್ರಚಾರದ ನೇತೃತ್ವ ಕೈಗೆತ್ತಿಕೊಳ್ಳಲಿದ್ದಾರೆ. ಪ್ರಧಾನಿ ಮೋದಿ ಅವರ ಸಭೆಗಳು ಹನುಮಾನ್ ಗಢ, ಸಿಕರ್, ನಾಗೋರ್, ಅಳ್ವಾರ್, ಜೈಪುರ್, ದೌಸಾ, ಭಿಲ್ವಾರಾ, ಕೋಟಾದಲ್ಲಿ ನಡೆಯಲಿವೆ.

ಹನ್ನೆರಡು ಸ್ಥಳಗಳಲ್ಲಿ ರಾಷ್ಟ್ರೀಯ ಅಧ್ಯಕ್ಷರ ಪ್ರಚಾರ

ಹನ್ನೆರಡು ಸ್ಥಳಗಳಲ್ಲಿ ರಾಷ್ಟ್ರೀಯ ಅಧ್ಯಕ್ಷರ ಪ್ರಚಾರ

ಅಮಿತ್ ಶಾ ಹನ್ನೆರಡು ಸ್ಥಳಗಳಲ್ಲಿ ಪ್ರಚಾರ ಕೈಗೊಳ್ಳುತ್ತಾರೆ. ಬದ್ಮೇರ್, ಜಲೋರ್, ಸಿರೋಹಿ, ಡುಂಗರ್ ಪುರ್, ದಿಂಗ್ ಕುಮ್ಹೇರ್, ಕರೌಲಿ, ಸವಾಯ್ ಮಾಧೋಪುರ್, ನವಾಗಢ, ಸುಜಾನ್ ಗಢದಲ್ಲಿ ಪ್ರಚಾರ ಕೈಗೊಳ್ಳುತ್ತಾರೆ. ಹೀಗೆ ಯೋಗಿ ಆದಿತ್ಯನಾಥ್ ಪ್ರಚಾರ ಕೈಗೊಳ್ಳಬೇಕಾದ ಸಭೆಗಳ ಸಂಖ್ಯೆ ಇಪ್ಪತ್ತೊಂದು. ಇದರರ್ಥ, ಈಗಾಗಲೇ ಹೇಳಿದಂತೆ ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯವಾಗಿ ಬಿಂಬಿತ ಆಗುತ್ತಿರುವ ನಾಯಕ ಅವರು.

ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ಶಾಕ್ ನೀಡಲಿರುವ ಜಾತಿ ರಾಜಕೀಯ! ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ಶಾಕ್ ನೀಡಲಿರುವ ಜಾತಿ ರಾಜಕೀಯ!

ರಾಹುಲ್ ಗಾಂಧಿ ಮುಖ್ಯ ಸ್ಟಾರ್ ಪ್ರಚಾರಕರು

ರಾಹುಲ್ ಗಾಂಧಿ ಮುಖ್ಯ ಸ್ಟಾರ್ ಪ್ರಚಾರಕರು

ಇನ್ನು ಕಾಂಗ್ರೆಸ್ ಕಡೆಯಿಂದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಮುಖವಾಗಿ ಬಿಂಬಿಸಲಾಗಿದೆ. ಕೈ ಪಕ್ಷಕ್ಕೆ ಅವರ ಹೊರತಾಗಿ ತುಂಬ ದೊಡ್ಡ ಸ್ಟಾರ್ ಪ್ರಚಾರಕರು ಅಂತಿಲ್ಲ. ಏಕೆಂದರೆ ರಾಜಸ್ತಾನದಲ್ಲಿ ಕಾಂಗ್ರೆಸ್ ಗೆ ಸ್ಥಳೀಯವಾಗಿ ಯಾರನ್ನೂ ಮುಖ್ಯವಾಗಿ ಬಿಂಬಿಸಲು ಇಷ್ಟವಿಲ್ಲ. ರಾಹುಲ್ ಗಾಂಧಿ ಹನ್ನೆರಡಕ್ಕೂ ಹೆಚ್ಚು ಚುನಾವಣೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಪ್ರತಿ ಭಾಗದಲ್ಲೂ ಕನಿಷ್ಠ ಎರಡು ಪ್ರಚಾರ ಸಭೆಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಮುಕುಲ್ ವಸ್ನಿಕ್ ಜೈಪುರ್ ನಲ್ಲಿ ಪ್ರಚಾರ ನಡೆಸಿದ್ದಾರೆ. ಅಂತಿಮವಾಗಿ ಎಲ್ಲೆಲ್ಲಿ ಸಭೆಗಳಲ್ಲಿ ಪಾಲ್ಗೊಳ್ಳಬೇಕು ಎಂಬುದನ್ನು ಹಿರಿಯ ನಾಯಕರ ಜತೆಗೆ ಚರ್ಚಿಸಿ, ಅಲ್ಲೆಲ್ಲ ರಾಹುಲ್ ಪ್ರಚಾರ ಕೈಗೊಳ್ಳುತ್ತಾರೆ.

ಅಶೊಕ್ ಗೆಹ್ಲೋಟ್ ಹಠದ ಮುಂದೆ ಸೋತು ನಿಂತ ರಾಹುಲ್ ಗಾಂಧಿ!ಅಶೊಕ್ ಗೆಹ್ಲೋಟ್ ಹಠದ ಮುಂದೆ ಸೋತು ನಿಂತ ರಾಹುಲ್ ಗಾಂಧಿ!

ಸೋನಿಯಾ ಗಾಂಧಿ, ಮನ್ ಮೋಹನ್ ಸಿಂಗ್ ಕೂಡ ಭಾಗಿ

ಸೋನಿಯಾ ಗಾಂಧಿ, ಮನ್ ಮೋಹನ್ ಸಿಂಗ್ ಕೂಡ ಭಾಗಿ

ಕಾಂಗ್ರೆಸ್ ವಕ್ತಾರ ಸತ್ಯೇಂದ್ರ ಸಿಂಗ್ ಮಾತನಾಡಿ, ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಚುನಾವಣೆ ಪ್ರಚಾರ ಅಭಿಯಾನ ಆರಂಭಿಸಲಾಗುವುದು. ಅಭ್ಯರ್ಥಿಗಳ ಬೇಡಿಕೆಗೆ ಅನುಸಾರ ನಾಯಕರ ಕಾರ್ಯಕ್ರಮ ನಿಗದಿ ಮಾಡಲಾಗುವುದು. ಉದಯ್ ಪುರ್ ಭಾಗದಿಂದ ರಾಹುಲ್ ಗಾಂಧಿ ಚುನಾವಣೆ ಪ್ರಚಾರ ಆರಂಭಿಸುತ್ತಾರೆ. ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಮಾನ್ವೇಂದ್ರ ಸಿಂಗ್ ಸ್ಪರ್ಧಿಸುತ್ತಿರುವ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಚುನಾವಣೆ ಸಭೆಯಲ್ಲಿ ರಾಹುಲ್ ಪಾಲ್ಗೊಳ್ಳಲಿದ್ದಾರೆ. ಸೋನಿಯಾ ಗಾಂಧಿ, ಮನ್ ಮೋಹನ್ ಸಿಂಗ್ ಕೂಡ ತಾರಾ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಸೋನಿಯಾ ಗಾಂಧಿ ಅವರು ಜೋಧ್ ಪುರ್, ಉದಯ್ ಪುರ್, ಅಳ್ವಾರ್ ಹಾಗೂ ಸಿಕರ್ ನಲ್ಲಿ ಪ್ರಚಾರ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

English summary
The Bharatiya Janata Party (BJP) is banking heavily on Prime Minister Narendra Modi and UP chief minister Yogi Adityanath for the Rajasthan Assembly elections. On the other hand national president of the Congress Rahul Gandhi is maximum in demand in the state who is likely to address at least two rallies in every region of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X