ರಾಜಸ್ಥಾನದ ಸಮೀಕ್ಷೆ: ಲೋಕಸಭೆ ಸಮರದಲ್ಲಿ ಕೇಸರಿ ಪಡೆಗೆ ಜಯ
Recommended Video

ಜೈಪುರ, ಫೆಬ್ರವರಿ 14: ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾದರೂ ರಾಜ್ಯದಲ್ಲಿ ಇನ್ನೂ ಮೋದಿ ಅಲೆ ಸ್ಥಿರವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಹೊರಹಾಕಲಿದೆ ಎಂದು ನ್ಯೂಸ್ ನೇಷನ್ ಸಮೀಕ್ಷಾ ವರದಿ ತಿಳಿಸಿದೆ.
ರಾಜಸ್ಥಾನದಲ್ಲಿ ನ್ಯೂಸ್ ನೇಷನ್ ನಡೆಸಿದ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ ಬಿಜೆಪಿ 16 ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಗೆಲ್ಲಲಿದೆ. 2014ರಲ್ಲಿ ಬಿಜೆಪಿ ಎಲ್ಲಾ 25 ಸ್ಥಾನಗಳನ್ನು ತನ್ನದಾಗಿಸಿಕೊಂಡು ಜಯಭೇರಿ ಬಾರಿಸಿತ್ತು.
ರಾಜಸ್ಥಾನದಲ್ಲಿ ಯಾವ ಪಕ್ಷ ಹೇಗೆ ಕಾರ್ಯನಿರ್ವಹಿಸಲಿದೆ? ಮೇಲ್ವರ್ಗಕ್ಕಾಗಿ ಮೋದಿ ಸರ್ಕಾರ ಘೋಷಿಸಿರುವ ಶೇ 10ರ ಮೀಸಲಾತಿ ಪರಿಣಾಮವೇನು? ರಫೆಲ್ ಒಪ್ಪಂದ ಯಾವ ರೀತಿ ಚುನಾವಣೆಯಲ್ಲಿ ಚರ್ಚಿತವಾಗಲಿದೆ? ಮುಂದಿನ ಪ್ರಧಾನಿಯಾಗಿ ಯಾರನ್ನು ಕಾಣಲು ಬಯಸುತ್ತೀರಿ? ಇವೆ ಮುಂತಾದ ಪ್ರಶ್ನೆಗಳನ್ನು ಹೊತ್ತುಕೊಂಡು ಸಮೀಕ್ಷೆ ನಡೆಸಲಾಗಿದೆ.
ಸಮೀಕ್ಷಾ ವರದಿ ಪ್ರಕಾರ, ಶೇಕಡಾವಾರು ಮತಗಳಿಕೆ ಪ್ರಕಾರ, ಬಿಜೆಪಿ ಪರ ಶೇ 40ರಷ್ಟು ಮಂದಿ ಮತ ಹಾಕಿದ್ದಾರೆ. ಕಾಂಗ್ರೆಸ್ ಪರ ಶೇ 35, ಇತರೆ ಪಕ್ಷಗಳಿಗೆ ಶೇ 10 ಸಿಗಲಿದೆ. ಶೇ 15 ಮಂದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
|
ರಫೆಲ್ ಒಪ್ಪಂದ ಹಾಗೂ ಮೀಸಲಾತಿ
ರಾಹುಲ್ ಗಾಂಧಿ ಅವರು ರಫೆಲ್ ಒಪ್ಪಂದ ಕುರಿತು ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡಿಸಿದ್ದರ ಪರಿಣಾಮ
* ರಾಹುಲ್ ವಾದದಲ್ಲಿ ಹುರುಳಿದೆ: ಶೇ 42
* ರಾಹುಲ್ ವಾದದಲ್ಲಿ ಏನು ಸತ್ಯವಿಲ್ಲ ಶೇ 40
* ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ : ಶೇ 18
ಮೇಲ್ವರ್ಗದ ಮೀಸಲಾತಿ ನೀಡುವುದರಿಂದ ಬಿಜೆಪಿಗೆ ಲಾಭವಾಗುತ್ತದೆಯೇ?
ಹೌದು : ಶೇ 51
ಇಲ್ಲ: ಶೇ 35
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ : ಶೇ 14
| Array |
ಯಾವ ಸರ್ಕಾರದಿಂದ ನಿಮಗೆ ತೃಪ್ತಿಯಾಗಿದೆ
ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಿಂದ ತೃಪ್ತಿಯಾಗಿದೆಯೆ?
ಹೌದು : ಶೇ 52
ಇಲ್ಲ: ಶೇ 42
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ : ಶೇ 6
ಕೇಂದ್ರದ ಎನ್ಡಿಎ ಸರ್ಕಾರದಿಂದ ತೃಪ್ತಿಯಾಗಿದೆಯೆ?
ಹೌದು : ಶೇ 49
ಇಲ್ಲ: ಶೇ 37
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ : ಶೇ 14
| Array |
ಮೋದಿ ವಿದೇಶಾಂಗ ನೀತಿ ಬಗ್ಗೆ ಪ್ರಶ್ನೆ
ಮೋದಿ ವಿದೇಶಾಂಗ ನೀತಿ ಬಗ್ಗೆ ಪ್ರಶ್ನೆ ಕೇಳಲಾಗಿದೆ.
ಚೀನಾ ಹಾಗೂ ಪಾಕಿಸ್ತಾನದಿಂದ ಮೋದಿ ಸರ್ಕಾರಕ್ಕೆ ಲಾಭವಾಗುತ್ತಿದೆಯೇ?
ಹೌದು : ಶೇ 48
ಇಲ್ಲ : ಶೇ 40
ಯಾವುದೇ ಪ್ರತಿಕ್ರಿಯೆ ಇಲ್ಲ: ಶೇ 12
**
ಮೋದಿ ಸರ್ಕಾರದ ಪ್ರಮುಖ ಅಜೆಂಡಾ?
ಅಭಿವೃದ್ಧಿ : ಶೇ 45
ರಾಜಕೀಯ : ಶೇ 41
ಯಾವುದೇ ಪ್ರತಿಕ್ರಿಯೆ ಇಲ್ಲ : ಶೇ 14
| Array |
ಯಾವ ಸಮಸ್ಯೆ ಚುನಾವಣೆಯ ಮುಖ್ಯ ವಿಷಯವಾಗಲಿದೆ
ಯಾವ ಸಮಸ್ಯೆ ಚುನಾವಣೆಯ ಮುಖ್ಯ ವಿಷಯವಾಗಲಿದೆ? ನಿರುದ್ಯೋಗ ಸಮಸ್ಯೆಯೇ ಹೆಚ್ಚು ಮತ ಬಂದಿದೆ.
ಸಮಸ್ಯೆಗಳು
ನಿರುದ್ಯೋಗ: ಶೇ 16
ಹಣದುಬ್ಬರ : ಶೇ 15
ಭ್ರಷ್ಟಾಚಾರ : ಶೇ 12
ಪ್ರಧಾನಿ ಅಭ್ಯರ್ಥಿ ಆಯ್ಕೆ ಗೊಂದಲ : ಶೇ 12
ಅಪನಗದೀಕರಣ, ಜಿಎಸ್ಟಿ: ಶೇ 8
ಮೂಲ ಸೌಕರ್ಯ : ಶೇ 7
ಎಸ್ ಸಿ ಎಸ್ಟಿ ಕಾಯ್ದೆ : ಶೇ 6
ಭಯೋತ್ಪಾದನೆ : ಶೇ 5
ಇತರೆ : ಶೇ 17












Click it and Unblock the Notifications