• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾರಾಟ ನಿಲ್ಲಿಸಿದ ಮಿಗ್-27; ಯೋಧರಿಂದ ಸೆಲ್ಯೂಟ್

|

ಜೈಪುರ, ಡಿಸೆಂಬರ್ 27 : ಭಾರತೀಯ ಸೇನಾಪಡೆಯ ಬಲಿಷ್ಠ ಯುದ್ಧ ವಿಮಾನ 'ಮಿಗ್-27' ಹಾರಾಟ ಅಂತ್ಯಗೊಂಡಿದೆ. ನಿವೃತ್ತಿಯ ದಿನ ವಾಯುಪಡೆಯ ಯೋಧರು ಸೆಲ್ಯೂಟ್ ಹೊಡೆದು ವಿಮಾನಕ್ಕೆ ಬೀಳ್ಕೊಡುಗೆ ನೀಡಿದ್ದಾರೆ.

ಶುಕ್ರವಾರ ರಾಜಸ್ಥಾನದ ಜೋಧ್‌ಪುರ್‌ ವಾಯುನೆಲೆಯಲ್ಲಿ ಮಿಗ್-27 ಅಂತಿಮ ಹಾರಾಟ ನಡೆಸಿತು. ವಾಯುಪಡೆಯಲ್ಲಿದ್ದ 7 ಮಿಗ್-27 ಹಾರಾಟ ಇಂದಿಗೆ ಅಂತ್ಯವಾಯಿತು. ಸೇನೆ ಬಲಿಷ್ಠ ಯುದ್ಧ ವಿಮಾನಕ್ಕೆ ನಿವೃತ್ತಿ ನೀಡಿದೆ.

ವಾಯುಪಡೆ ವಿಮಾನಗಳ ಮೇಲೆ ಏರ್‌ಪೋರ್ಟ್‌ ರಾಡಾರ್ ಕಣ್ಗಾವಲು

ಭಾರತೀಯ ವಾಯುಸೇನೆಯ ಸಿಬ್ಬಂದಿ ಹಾರಾಟ ನಡೆಸಿದ ಮಿಗ್-27 ವಿಮಾನಗಳಿಗೆ ವಾಟರ್ ಸೆಲ್ಯೂಟ್ ಮೂಲಕ ಬೀಳ್ಕೊಡುಗೆ ನೀಡಿದರು. 1982ರಲ್ಲಿ ರಷ್ಯಾದಿಂದ ಮಿಗ್-27 ಯುದ್ಧ ವಿಮಾನಗಳನ್ನು ಖರೀದಿ ಮಾಡಲಾಗಿತ್ತು.

ವಾಯುಪಡೆ ಸೇರಿದ ಅರಿ ಭಯಂಕರ ಅಪಾಚೆ ಹೆಲಿಕಾಪ್ಟರ್‌ಗಳು

ಭಾರತೀಯ ಸೇನೆಯ ಬಲಿಷ್ಠ ಯುದ್ಧ ವಿಮಾನ ಎಂದು ಮಿಗ್-27 ಹೆಸರುಗಳಿಸಿತ್ತು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಈ ವಿಮಾನ ಹೀರೋ ಎನಿಸಿಕೊಂಡಿತ್ತು. ವಾಯುಪಡೆಯಿಂದ ಇಂದು ವಿಮಾನ ನಿವೃತ್ತವಾಗಿದೆ.

ಬಾಲಕೋಟ್ ದಾಳಿಯ 'ರಹಸ್ಯ' ಬಹಿರಂಗಪಡಿಸಿದ ವಾಯುಪಡೆ

ರಕ್ಷಣಾ ವಕ್ತಾರ ಕರ್ನಲ್ ಸೋಂಬಿತ್ ಘೋಷ್, "ಮಿಗ್-27 ವಿಮಾನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದ್ದು, ಇನ್ನು ಮುಂದೆ ದೇಶದ ಯಾವುದೇ ಭಾಗದಲ್ಲೂ ಈ ವಿಮಾನಗಳು ಹಾರಾಡುವುದಿಲ್ಲ" ಎಂದು ಘೋಷಣೆ ಮಾಡಿದರು.

ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ರಷ್ಯಾ ಮೂಲದ ಮಿಗ್-27 ವಿಮಾನ ಇತಿಹಾಸದ ಪುಟವನ್ನು ಸೇರಿದೆ. ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿ 7 ಮಿಗ್-27 ಯುದ್ಧ ವಿಮಾನಗಳಿದ್ದು, ಎಲ್ಲವೂ ನಿವೃತ್ತವಾಗಿವೆ.

English summary
De-induction ceremony of MiG-27 Aircraft held in Jodhpur, Rajasthan on December 27, 2019. Indian air force stopped 7 MiG-27 aircraft service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X