ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆಗೆ ಗೃಹ ದಿಗ್ಬಂಧನ

|
Google Oneindia Kannada News

ಜೈಪುರ, ಮಾರ್ಚ್ 21: ಜೈಪುರದಲ್ಲಿ ಓರ್ವ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ತಾವೇ ಗೃಹಬಂಧನದಲ್ಲಿರಲು ಮುಂದಾಗಿದ್ದಾರೆ.

ಅವರ ಪುತ್ರ ದುಶ್ಯನ್ ಸಿಂಗ್ ಕೂಡ ಗೃಹ ಬಂಧನದಲ್ಲಿರಲಿದ್ದಾರೆ. ಗಾಯಕಿ ಕನಿಕಾ ಕಪೂರ್ ಅವರು ನೀಡಿದ ಪಾರ್ಟಿಯಲ್ಲಿ ವಸುಂಧರಾ ರಾಜೆ ಹಾಗೂ ಅವರ ಪುತ್ರ ದುಶ್ಯನ್ ಸಿಂಗ್ ಕೂಡ ಪಾಲ್ಗೊಂಡಿದ್ದರು.

ಗಾಯಕಿ ಕನಿಕಾ ಕಪೂರ್ ಅವರಿಗೆ ಕೊರೊನಾ ಸೋಂಕು ಹರಡಿರುವುದು ದೃಢವಾಗುತ್ತಿದ್ದಂತೆ ವಸುಂಧರಾ ರಾಜೆ ಈ ನಿರ್ಧಾರಕ್ಕೆ ಬಂದಿದ್ದಾರೆ.

Vsundhara
ಲಕ್ನೋದಲ್ಲಿ ನಡೆದ ಪಾರ್ಟಿಯಲ್ಲಿ ನಾನು ಮತ್ತು ನನ್ನ ಮಗ ಹಾಗೂ ಅಳಿಯನೊಂದಿಗೆ ಪಾಲ್ಗೊಂಡಿದ್ದೆವು. ವೇಳೆ ಸೋಂಕು ಹರಡಿರಬಹುದು ಎಂದು ಅನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಭೀತಿ: ಪಾರ್ಟಿ ಮಾಡಿದ ಗಾಯಕಿ ಕನಿಕಾ ವಿರುದ್ಧ ಎಫ್ಐಆರ್ಕೊರೊನಾ ಭೀತಿ: ಪಾರ್ಟಿ ಮಾಡಿದ ಗಾಯಕಿ ಕನಿಕಾ ವಿರುದ್ಧ ಎಫ್ಐಆರ್

ವಿದೇಶದಿಂದ ಭಾರತಕ್ಕೆ ಮರಳುವ ಎಲ್ಲಾ ಪ್ರಯಾಣಿಕರು, ಕಡ್ಡಾಯವಾಗಿ ಕೊರೊನಾವೈರಸ್ ಸೋಂಕು ಇರುವ ಬಗ್ಗೆ ಪರೀಕ್ಷೆಗೊಳಪಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶ ನೀಡಿವೆ.

ಕನಿಕಾ ಅವರನ್ನು ಕೊನೆಗೂ ಪರೀಕ್ಷಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾ ಪಾಸಿಟಿವ್ ಇದ್ದರೂ ಪಾರ್ಟಿ ಮಾಡಿದ ಕನಿಕಾ ವಿರುದ್ಧ ದೂರು ದಾಖಲಾಗಿದೆ.ಸದ್ಯ ಲಕ್ನೋದ ಕಿಂಗ್ ಜಾರ್ಜ್ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಗಾಯಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕನಿಕಾ ಕಪೂರ್ ಲಂಡನ್‌ಗೆ ತೆರಳಿದ್ದರು ಮಾರ್ಚ್ 15ರಂದು ದೇಶಕ್ಕೆ ಮರಳಿದ್ದರು. ಲಂಡನ್‌ನಿಂದ ಬಂದಿರುವುದನ್ನು ಆರೋಗ್ಯ ಇಲಾಖೆಗೆ ತಿಳಿಸಿರಲಿಲ್ಲ.

English summary
Coronavirus Fear, Former Rajasthan Chief Minister Vasundhara Raje on Friday said she and her son Dushyant Singh have self-quarantined themselves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X