ಹಣ ಕದ್ದರೆಂದು ಥಳಿಸಿ ಮರ್ಮಾಂಗಕ್ಕೆ ಬೆಂಕಿ ಇಟ್ಟ ಪಾಪಿಗಳು

ಜೈಪುರ, ಫೆಬ್ರವರಿ 20: ಹಣ ಕದ್ದರೆಂದು ಆರೋಪ ಹೊರಿಸಿ ಯುವಕರ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಘಟನೆ ಜೈಪುರದಲ್ಲಿ ನಡೆದಿದೆ.

ಜೈಪುರದಲ್ಲಿ ಇಬ್ಬರು ದಲಿತರು ಟು-ವೀಲರ್ ಏಜೆನ್ಸಿ ಬಳಿ 500 ರೂಪಾಯಿ ಕಳುವು ಮಾಡಿದ್ದಾರೆ ಎಂಬ ಆರೋಪದ ಮೇಲೆ ಶೋ ರೂಮ್ ಸಿಬ್ಬಂದಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.

ದಲಿತರಿಗೆ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಶೋರೂಮ್ ಸಿಬ್ಬಂದಿ ದಲಿತ ವ್ಯಕ್ತಿಗಳಿಗೆ ಹೊಡೆದು ಹಿಂಸಿಸಿದ್ದಾರೆ. ಜೊತೆಗೆ ಅವರ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದು ಇನ್ನೂ ಅಮಾನುಷವಾಗಿ ವರ್ತಿಸಿದ್ದಾರೆ.

2 Dalits Allegedly Caught Stealing Money Beaten

ದಲಿತ ವ್ಯಕ್ತಿ ಮೇಲ್ಜಾತಿಯವರ ಜಮೀನಿನಲ್ಲಿ ಮಲ ವಿಸರ್ಜನೆ ಮಾಡಿದ ಕಾರಣಕ್ಕೆ ಕ್ರೂರವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಇಬ್ಬರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಇದಾಗಿದೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಕೃತ್ಯದಲ್ಲಿ ಭಾಗಿಯಾಗಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಳಿಕ ಹಲ್ಲೆಗೊಳಗಾದ ಸಂತ್ರಸ್ತರು ಆರೋಪಿಗಳ ವಿರುದ್ಧ ದೂರು​ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+