ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ : 10 ವರ್ಷಗಳ ದಾಖಲೆ ಮುರಿದ ಮಹಿಳಾ ಸ್ಪರ್ಧಿಗಳು

|
Google Oneindia Kannada News

ಜೈಪುರ, ನವೆಂಬರ್ 26: ದೇಶದ ಗಮನ ಸೆಳೆಯುತ್ತಿರುವ ರಾಜಸ್ಥಾನ ವಿಧಾನಸಭಾ ಕಣದಲ್ಲಿ ಈ ಬಾರಿ ಮಹಿಳಾ ಸ್ಪರ್ಥಿಗಳು ದಾಖಲೆ ಬರೆದಿದ್ದಾರೆ. ಕಳೆದ 10 ವರ್ಷಗಳಲ್ಲೇ ಕಾಣದಷ್ಟು ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಒಟ್ಟಾರೆ, 189 ಮಹಿಳಾ ಅಭ್ಯರ್ಥಿಗಳು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಡಿಸೆಂಬರ್ 07ರ ಚುನಾವಣೆಗೆ ಸುಮಾರು 2,873 ಅಭ್ಯರ್ಥಿಗಳು ಕಣದಲ್ಲಿದ್ದು, ಕಳೆದ ವಾರ 579 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದುಕೊಂಡಿದ್ದರು.

ರಾಜಸ್ಥಾನ : ಕಾಂಗ್ರೆಸ್ಸಿನಿಂದ 28 ಬಂಡಾಯಗಾರರ ಉಚ್ಚಾಟನೆರಾಜಸ್ಥಾನ : ಕಾಂಗ್ರೆಸ್ಸಿನಿಂದ 28 ಬಂಡಾಯಗಾರರ ಉಚ್ಚಾಟನೆ

ಒಟ್ಟು 189 ಮಹಿಳಾ ಅಭ್ಯರ್ಥಿಗಲ ಪೈಕಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ)ದಿಂದ 23 ಅಭ್ಯರ್ಥಿಗಳು, ಕಾಂಗ್ರೆಸ್ಸಿನಿಂದ 27 ಮಂದಿ ಕಣದಲ್ಲಿದ್ದಾರೆ.

189 women candidates in fray for Rajasthan assembly polls

ಬಿಜೆಪಿಯ ಶಾಸಕಿ ಅನಿತಾ ಭಡೆಲ್, ಕಿರಣ್ ಮಹೇಶ್ವರಿ, ಅನಿತಾ ಸಿಂಗ್, ಸುಶೀಲ್ ಕನ್ವರ್, ಮಂಜು ಬಾಘ್ಮಾರ್, ಕಮ್ಸಾ, ಸೂರ್ಯಕಾಂತಾ ವ್ಯಾಸ್ ಜತೆ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಇದ್ದಾರೆ.

ಕಾಂಗ್ರೆಸ್ಸಿನಿಂದ ಶಾಸಕಿ ಶಕುಂತಲಾ ರಾವತ್, ಮಾಜಿ ಕೇಂದ್ರ ಸಚವೆ ಗಿರಿಜಾ ವ್ಯಾಸ್, ಡಿಸ್ಕರ್ ಥ್ರೋ, ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಕೃಷ್ಣ ಪೂನಿಯ, ಮಾಜಿ ಶಾಸಕಿ ಜಹೀದಾ ಖಾನ್ ಅವರು ಸ್ಪರ್ಧಿಸುತ್ತಿದ್ದಾರೆ.

ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಗೆ ಸಿಕ್ತು ನವಾಬ್ ಕುಟುಂಬ ಬೆಂಬಲರಾಜಸ್ಥಾನದಲ್ಲಿ ಸಚಿನ್ ಪೈಲಟ್ ಗೆ ಸಿಕ್ತು ನವಾಬ್ ಕುಟುಂಬ ಬೆಂಬಲ

1952ರ ರಾಜಸ್ಥಾನ ಚುನಾವಣೆ ಮೊದಲ ಚುನಾವಣೆಯಲ್ಲಿ ಕೇವಲ ನಾಲ್ಕು ಮಂದಿ ಮಹಿಳೆ ಮಾತ್ರ ಕಣದಲ್ಲಿದ್ದರು. ಈಗ ಇದರ 50 ಪಟ್ಟು ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಿಗಳನ್ನು ಕಾಣಬಹುದಾಗಿದೆ.

ದೇಶದ ಗಮನ ಸೆಳೆದಿರುವ ರಾಜಸ್ಥಾನದ 10 ಕ್ಷೇತ್ರಗಳ ಕದನದೇಶದ ಗಮನ ಸೆಳೆದಿರುವ ರಾಜಸ್ಥಾನದ 10 ಕ್ಷೇತ್ರಗಳ ಕದನ

ಕಳೆದ ಹತ್ತು ವರ್ಷಗಳ ಲೆಕ್ಕ ತೆಗೆದುಕೊಂಡರೆ 1998ರಲ್ಲಿ 69, 2003ರಲ್ಲಿ 118, 2008ರಲ್ಲಿ 154 ಹಾಗೂ 2013ರಲ್ಲಿ 166 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ 189 ಮಂದಿ ಕಣದಲ್ಲಿದ್ದಾರೆ.

English summary
A total of 189 women candidates will be contesting the upcoming Rajasthan assembly elections, the highest number in the last 10 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X