IPL 2023: ಎಂಎಸ್ ಧೋನಿಗೆ ಇದೇ ಕೊನೆಯ ಐಪಿಎಲ್ ಪಂದ್ಯಾವಳಿ; ಸಿಎಸ್‌ಕೆ ಮಾಜಿ ಆಟಗಾರ
ಭಾರತ ತಂಡದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ತಮ್ಮ ಆಟ ಮತ್ತು ನಾಯಕತ್ವದ ಕೌಶಲ್ಯದಿಂದಾಗಿ ಪ್ರಸಿದ್ಧಿಯಾಗಿರುವ ಎಂಎಸ್ ಧೋನಿ ಎಲ್ಲ ಸ್ವರೂಪಗಳಲ್ಲಿ ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕನಾಗಿದ್ದಾರೆ.
ಇದೀಗ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ಆಟಗಾರ ಕೇದಾರ್ ಜಾಧವ್ ಅವರು ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಕುರಿತು ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.

ಗಮನಾರ್ಹವಾಗಿ, 41 ವರ್ಷದ ಎಂಎಸ್ ಧೋನಿ ಅವರು ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ 238 ಪಂದ್ಯಗಳನ್ನು ಆಡಿದ್ದಾರೆ. ಇತ್ತೀಚೆಗೆ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಸಿಎಸ್‌ಕೆ ತಂಡದ ನಾಯಕರಾಗಿ 200ನೇ ಪಂದ್ಯವನ್ನು ಆಡಿದರು.
ಎಂಎಸ್ ಧೋನಿ ಅವರ ಐಪಿಎಲ್ ನಿವೃತ್ತಿ ಮತ್ತು ಐಪಿಎಲ್‌ನ 16ನೇ ಆವೃತ್ತಿಯಲ್ಲಿ ಅವರ ಅಂತಿಮ ಪಂದ್ಯದ ಕುರಿತು ಹೆಚ್ಚಿನ ಊಹಾಪೋಹಗಳಿದ್ದರೂ, ಎಂಎಸ್ ಧೋನಿ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದಾಗ್ಯೂ, ಮಾಜಿ ಸಹ ಆಟಗಾರ ಕೇದಾರ್ ಜಾಧವ್ ಅವರು 2023 ಐಪಿಎಲ್ ಋತುವಿನ ಮುಕ್ತಾಯದ ನಂತರ ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ಶೇ.2000ರಷ್ಟು ಖಚಿತವಾಗಿದ್ದಾರೆ ಎಂದು ಬಹಿರಂಗಪಡಿಸಿದರು.

"2023ರ ಐಪಿಎಲ್ ಆಟಗಾರನಾಗಿ ಎಂಎಸ್ ಧೋನಿ ಅವರ ಅಂತಿಮ ಸೀಸನ್ ಎಂದು ನಾನು ನಿಮಗೆ ಶೇಕಡಾ ಶೇ.2,000ರಷ್ಟು ಖಚಿತವಾಗಿ ಹೇಳುತ್ತಿದ್ದೇನೆ. ಇದೇ ಜುಲೈನಲ್ಲಿ ಎಂಎಸ್ ಧೋನಿ ಅವರಿಗೆ 42 ವರ್ಷ ತುಂಬಲಿದೆ. ಕ್ರಿಕೆಟ್ ಆಡಲು ಇನ್ನೂ ಫಿಟ್ ಆಗಿದ್ದರೂ ಧೋನಿ ಕೂಡ ಮನುಷ್ಯ. ಹಾಗಾಗಿ, ಇದು ಅವರ ಕೊನೆಯ ಸೀಸನ್ ಎಂದು ನಾನು ಭಾವಿಸುತ್ತೇನೆ".
"ಎಂಎಸ್ ಧೋನಿ ಅಭಿಮಾನಿಗಳು ಅವರ ಯಾವುದೇ ಪಂದ್ಯಗಳನ್ನು ಕಳೆದುಕೊಳ್ಳಬಾರದು. ಅವರು ಮೈದಾನದಲ್ಲಿರುವಾಗ ಪ್ರತಿಯೊಂದು ಚೆಂಡನ್ನು ವೀಕ್ಷಿಸುತ್ತಿರಬೇಕು," ಎಂದು ನ್ಯೂಸ್ 18 ಕ್ರಿಕೆಟ್ ನೆಕ್ಸ್ಟ್‌ನೊಂದಿಗೆ ಸಂವಾದದ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಕೇದಾರ್ ಹೇಳಿದರು.

ಎಂಎಸ್ ಧೋನಿ ಬ್ಯಾಟಿಂಗ್ ವೇಳೆ ವೀಕ್ಷಣೆ ದಾಖಲೆ ಮುರಿದರು: ಕೇದಾರ್ ಜಾಧವ್
ಲೆಜೆಂಡರಿ ಬ್ಯಾಟ್ಸ್‌ಮನ್ ಎಂಎಸ್ ಧೋನಿ ವಿಶ್ವದಾದ್ಯಂತ ಬೃಹತ್ ಅಭಿಮಾನಿಗಳನ್ನು ಹೊಂದಿದ ಕೆಲವೇ ಕ್ರಿಕೆಟಿಗರಲ್ಲಿ ಒಬ್ಬರು. ಬುಧವಾರ, ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ, ಎಂಎಸ್ ಧೋನಿ ಅವರು ಸಿಎಸ್‌ಕೆ ನಾಯಕನಾಗಿ ತಮ್ಮ 200ನೇ ಪಂದ್ಯದಲ್ಲಿ ಕಾಣಿಸಿಕೊಂಡರು.
ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿನ ಕ್ರೀಡಾಂಗಣದ ಎಲ್ಲ ಸೀಟ್‌ಗಳು ಭರ್ತಿಯಾಗಿದ್ದರೂ, ಸಿಎಸ್‌ಕೆ ಚೇಸಿಂಗ್ ವೇಳೆ ಎಂಎಸ್ ಧೋನಿಯ ಬ್ಯಾಟಿಂಗ್ ಮಾಡುವಾಗ ಡಿಜಿಟಲ್ ವೀಕ್ಷಕರ ಸಂಖ್ಯೆಯೂ ಗಗನಕ್ಕೇರಿತು.
ಐಪಿಎಲ್ ಪರಿಣಿತರೂ ಆಗಿರುವ ಕೇದಾರ್ ಜಾಧವ್ ಅವರು ಈ ಬಗ್ಗೆ ಮಾತನಾಡಿ, ಸಿಎಸ್‌ಕೆ ನಾಯಕ ತಮ್ಮ ಬ್ಯಾಟಿಂಗ್ ಸಮಯದಲ್ಲಿ, Jio Cinemaಗೆ ಗಮನಾರ್ಹ ವೀಕ್ಷಕರನ್ನು ಗಳಿಸಲು ಸಹಾಯ ಮಾಡಿದರು ಎಂದು ಹೇಳಿದ್ದಾರೆ.
"ಸಿಎಸ್‌ಕೆ ನಾಯಕ ಎಂಎಸ್ ಧೋನಿ ಬ್ಯಾಟಿಂಗ್ ಮಾಡುವಾಗ ಜಿಯೋ ಸಿನಿಮಾದಲ್ಲಿ 2.2 ಕೋಟಿ ವೀಕ್ಷಕರು ಡಿಜಿಟಲ್ ವೀಕ್ಷಣೆ ಮಾಡುವ ಮೂಲಕ ಅವರದೇ ದಾಖಲೆಯನ್ನು ಮತ್ತೊಮ್ಮೆ ಮುರಿದರು," ಎಂದು ಕೇದಾರ್ ಜಾಧವ್ ಉಲ್ಲೇಖಿಸಿದರು.
ಗಮನಾರ್ಹವಾಗಿ, ಎಂಎಸ್ ಧೋನಿ ಧೋನಿ 17 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಅಂತಿಮ ಎಸೆತದವರೆಗೂ ಕೊಂಡೊಯ್ದರು. ಆದರೆ, ರಾಜಸ್ಥಾನ ರಾಯಲ್ಸ್ ಬೌಲರ್ ಸಂದೀಪ್ ಶರ್ಮಾ ಕೊನೆಯ ಎಸೆತದಲ್ಲಿ 5 ರನ್ ಬೇಕಾಗಿದ್ದಾಗ ಕೇವಲ 1 ರನ್ ಬಿಟ್ಟುಕೊಟ್ಟರು.












Click it and Unblock the Notifications