ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುತ್ತಾ ಭಾರತ? ಉಕ್ರೇನ್ ಅಧ್ಯಕ್ಷ ಭಾರತದ ಬಳಿ ಬೇಡಿದ್ದು ಏನು?
ಪ್ರಪಂಚ ಬದಲಾಗುತ್ತಿದೆ, ಅಮೆರಿಕ ಸೈಲೆಂಟ್ ಆಗುವ ಸಮಯ ಕೂಡ ಬಂದಂತೆ ಕಾಣುತ್ತಿದೆ. ಯಾಕೆ ಅಂದ್ರೆ ತನ್ನ ಸ್ನೇಹಿತ ದೇಶಗಳನ್ನು ಎದುರು ಹಾಕಿಕೊಂಡು ಕೂತಿರುವ ಅಮೆರಿಕ ಕೈಯಲ್ಲಿ ಈಗ ಏನು ಕೂಡ ಉಳಿದಿಲ್ಲ. ಅದರಲ್ಲೂ ಆರ್ಥಿಕವಾಗಿ ಬೀದಿಗೆ ಬೀಳುವ ಭಯ ಕೂಡ ಜಗತ್ತಿನ ದೊಡ್ಡಣ್ಣ ಅಂತಾ ಬಿಲ್ಡಪ್ ಕೊಡುವ ದೇಶಕ್ಕೆ ಕಾಡುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಭಾರತದ ಮೇಲೆ ಹೆಚ್ಚಿನ ತೆರಿಗೆ ಹೇರಿಕೆ ಮಾಡುವ ಮೂಲಕ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ ಅಮೆರಿಕ. ಇದೇ ಸಮಯದಲ್ಲಿ ಉಕ್ರೇನ್ ಕೂಡ ಭಾರತದ ಮುಂದೆ ಮಂಡಿ ಊರಿ ಬೇಡುವ ಪರಿಸ್ಥಿತಿ ನಿರ್ಮಾಣ ಆಗಿದೆ!
ಹೌದು, ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ ಇನ್ನೇನು 4 ವರ್ಷ ಕಂಪ್ಲೀಟ್ ಆಗುವ ಹಂತಕ್ಕೆ ಕೂಡ ಬಂದಿದೆ. ಹೀಗೆ ರಷ್ಯಾ & ಉಕ್ರೇನ್ ಯುದ್ಧ ತೀವ್ರವಾಗಿ ಭಯದ ವಾತಾವರಣ ನಿರ್ಮಾಣ ಆಗಿರುವಾಗ ಮತ್ತೊಂದು ವರ್ಲ್ಡ್ ವಾರ್ ಅದ್ರೆ ವಿಶ್ವಯುದ್ಧ ನಡೆಯಬಾರದು ಅನ್ನೋ ಹಿನ್ನೆಲೆಯಲ್ಲಿ ಮಾತುಕತೆ ಕೂಡ ಜೋರಾಗಿದೆ. ಇಂತಹ ಸಮಯದಲ್ಲೇ, ಯುದ್ಧ ನಿಲ್ಲಿಸಲು ರಷ್ಯಾ ಜೊತೆಗೆ ಮಾತನಾಡಿ ಅಂತಾ ಇದೀಗ ಭಾರತದ ಕಾಲು ಹಿಡಿದಿದೆ ಉಕ್ರೇನ್. ಸ್ವತಃ ಉಕ್ರೇನ್ ಅಧ್ಯಕ್ಷ ಈ ಹಿಂದೆ ಕೂಡ ಭಾರತವನ್ನ ಉದ್ದೇಶಿಸಿ ಮಾತನಾಡುವಾಗ ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನ ಒತ್ತಾಯಿಸಿ, ಅಂತಾ ಕಾಲು ಹಿಡಿದಿದ್ದರು. ಇದೀಗ ಪ್ರಧಾನಿ ಮೋದಿ ಅವರು ಚೀನಾದಲ್ಲಿ ಇರುವಾಗಲೂ ಇದೇ ರೀತಿಯಾಗಿ ಮನವಿ ಮಾಡಿದೆ ಉಕ್ರೇನ್!

ಪುಟಿನ್ ಜೊತೆಗೆ ಪಿಎಂ ಮೋದಿ ಚರ್ಚೆ
ಭಾರತ ಇದೀಗ ಅಮೆರಿಕ ಜೊತೆಗಿನ ಸಂಬಂಧ ಕಡಿದುಕೊಂಡು ಮುಂದೆ ನುಗ್ಗಲು ತಯಾರಿ ನಡೆಸಿದೆ. ಅಂದಹಾಗೆ, ಪ್ರಧಾನಿ ಮೋದಿ ಅವರು ಶಾಂಗ್ಹೈ ಸಹಕಾರ ಸಂಘಟನೆ ಅಂದ್ರೆ SCO ವಾರ್ಷಿಕ ಶೃಂಘ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ಸೋಮವಾರ ಈ ಮಹತ್ವದ ಸಭೆ ನಡೆಯಲಿದೆ. ಈ ಸಭೆ ನಂತರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಪ್ರಧಾನಿ ಮೋದಿ ಅವರು ಮಹತ್ವದ ಮೀಟಿಂಗ್ ಕೂಡ ನಡೆಸಲಿದ್ದಾರೆ. ಇದೇ ಕಾರಣಕ್ಕೆ ಪಿಎಂ ನರೇಂದ್ರ ಮೋದಿ ಅವರ ಚೀನಾ ಭೇಟಿ ಇದೀಗ ಇಡೀ ಜಗತ್ತಿನ ಗಮನ ಸೆಳೆದಿದ್ದು, ಇದೇ ಸಮಯದಲ್ಲಿ ಉಕ್ರೇನ್ ಯುದ್ಧ ನಿಲ್ಲಿಸುವ ವಿಚಾರ ಕೂಡ ಪ್ರಸ್ತಾಪ ಮಾಡಿ ಅಂತಾ ಉಕ್ರೇನ್ ಇದೀಗ ಭಾರತದ ಕಾಲು ಹಿಡಿಯಲು ಬಂದಿದೆ.












Click it and Unblock the Notifications